ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಂ.ರಮೇಶ್ ಶಂಕರಘಟ್ಟ ಇವರು ಇಂದು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ನಾಯಕರು ಹಾಗೂ ಕಾಂಗ್ರೆಸ್ ಮುಖಂಡರಾದ ಎಂ ಶ್ರೀಕಾಂತ್ ಇವರನ್ನು ಭೇಟಿ ಮಾಡಿ ಹಿಂದುಳಿದ ವರ್ಗಗಳ ಘಟಕದ ಸಂಘಟನೆಗಾಗಿ ಮಾರ್ಗದರ್ಶನ ಕೋರಿದರು.
ಶಿವಮೊಗಕ್ಕೆ ಅಗಮಿಸಿದ್ದ ಸಂದರ್ಭದಲ್ಲಿ ಶ್ರೀಕಾಂತ್ ಇವರನ್ನು ನೂತನ ಅಧ್ಯಕ್ಷರು ಗೌರವಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಪೂರ್ಣ ಸಹಕಾರ ನೀಡುವುದಾಗಿ ಶ್ರೀಕಾಂತ್ ಇವರು ತಿಳಿಸಿದರು.
ಈಗಾಗಲೇ ರಮೇಶ್ ರವರು ಜಿಲ್ಲಾ ಕಾಂಗ್ರೆಸ್ ಸಮಿತಿ ಆದ್ಯಕ್ಷರಾದ ಆರ್ ಪ್ರಸನ್ನಕುಮಾರ್, ಓಬಿಸಿ ಹಿಂದಿನ ಅಧ್ಯಕ್ಷರುಗಳಾದ ಉಮಾಪತಿ,ಕಲಗೋಡು ರತ್ನಾಕರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಮರಿಯಪ್ಪ,ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾದ ಚಂದ್ರಭೂಪಾಲ್, ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಹಾಲಪ್ಪ, ಓಬಿಸಿ ರಾಜ್ಯ ಘಟಕದ ಕೋಆರ್ಡಿನೇಟರ್ ಜಿ ಡಿ ಮಂಜುನಾಥ್ ಇವರುಗಳನ್ನು ಭೇಟಿ ಮಾಡಿ ಸೂಕ್ತ ಮಾರ್ಗದರ್ಶನ ಕೋರಿದರು.
ಈ ಸಂದರ್ಭದಲ್ಲಿ ರಾಜ್ಯ ಓಬಿಸಿ ಉಪಾಧ್ಯಕ್ಷರಾಗಿ ನೇಮಕವಾಗಿರುವ ರಮೇಶ್ ಇಕ್ಕೇರಿ, ಓಬಿಸಿ ಜಿಲ್ಲಾ ಪ್ರದಾನಕಾರ್ಯದರ್ಶಿ ರಾಘವೇಂದ್ರ, ಕಾರ್ಯದರ್ಶಿ ಮಹೇಂದ್ರ, ಶಿವಮೊಗ್ಗ ಬ್ಲಾಕ್ ಅಧ್ಯಕ್ಷ ಮೋಹನ್ ಮೊದಲಾದವರು ಇದ್ದರು.