ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ರಾಷ್ಟ್ರ ದ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಘದ ಅಧ್ಯಕ್ಷರಾದ ಶ್ರೀ ಜೆ.ಆರ್.ವಾಸುದೇವ ದ್ವಜಾರೋಹಣ ನೆರವೇರಿಸಿದರು. ಶ್ರೀ ಜೆ.ಆರ್. ವಾಸುದೇವ ಮಾತನಾಡಿ ರಾಷ್ಟ್ರದ ಪ್ರಗತಿ ಏರು ಗತಿಯಲ್ಲಿ ಸಾಗುತ್ತಿದ್ದು ಬ್ರಷ್ಟಾಚಾರ ನಿರ್ಮೂಲನೆಯಾದಲ್ಲಿ ನಮ್ಮ ರಾಷ್ಟ್ರ ವಿಶ್ವದ ಮೊದಲನೇ ಸ್ಥಾನಕ್ಕೇರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಈ ಸಂಧರ್ಭದಲ್ಲಿ ಮಾಜಿ ಅಧ್ಯಕ್ಷರಾದ ಶ್ರೀ ಎಂ.ಭರದ್ವಾಜ, ಕೆ.ವಿ.ವಸಂತಕುಮಾರ್, ಡಿ.ಎಸ್. ಅರುಣ್, ಡಿ.ಎಂ.ಶಂಕರಪ್ಪ, ಪಿ.ರುದ್ರೇಶ್, ಉದಯಕುಮಾರ್, ಬಿ.ಆರ್. ಸಂತೋಷ್, ಬಿ.ಗೋಪಿನಾಥ್, ಜಿ.ಎನ್.ಪ್ರಕಾಶ್, ಎನ್.ಗೋಪಿನಾಥ್, ಯು.ಎಂ.ಐಥಾಳ್, ಎ.ಎಂ.ಸುರೇಶ್, ಜಿ. ವಿಜಯಕುಮಾರ್ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎನ್.ಸಿ.ಸಿ. ನೇವಲ್ ಕಾಪ್ ರಾಮ್ ಎಸ್.ಬಿಳಗಿ ಗಾರ್ಡ್ ಆಫ್ ಆನರ್ ನೆರವೇರಿಸಿದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ