ನಗರಾಭಿವೃದ್ಧಿ ಸಚಿವರಾದ ಸುರೇಶ್ ಅವರ ಹುಟ್ಟುಹಬ್ಬ ಯುವ ಕಾಂಗ್ರೆಸ್ ನಿಂದ ಆಚರಣೆ ಅನ್ನದಾಸೋಹ ಪುಣ್ಯದ ಕೆಲಸ – ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್…
ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವರು, ಅಹಿಂದ ವರ್ಗದ ನಾಯಕ ಬೈರತಿ ಸುರೇಶ್ ರವರ ಹುಟ್ಟುಹಬ್ಬದ ಅಂಗವಾಗಿ ಇಂದು ಶಿವಮೊಗ್ಗ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಮೆಗನ್ ಆಸ್ಪತ್ರೆ ಆವರಣದಲ್ಲಿ ಅನ್ನದಾಸೋಹ ನಡೆಸುವ ಮುಖಾಂತರ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ ಕುಮಾರ್ ಅವರು ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ಅನ್ನದಾಸೋಹ ಕಾರ್ಯಕ್ರಮ ಪುಣ್ಯದ ಕೆಲಸವಾಗಿದ್ದು ನಮ್ಮ ರಾಜ್ಯದ ನಾಯಕರು, ಸಚಿವರಾದ ಬೈರತಿ ಸುರೇಶ್ ರವರಿಗೆ ಹುಟ್ಟುಹಬ್ಬವನ್ನು ಸಾಮಾಜಿಕ ಕಾರ್ಯಕ್ರಮದ ಮುಖಾಂತರ ಯುವ ಕಾಂಗ್ರೆಸ್ ಸಮಿತಿ ಆಚರಿಸುತ್ತಿರುವುದು ಶ್ಲಾಘಿನಿಯ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ ರವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಅಹಿಂದ ವರ್ಗಗಳಿಗೆ ಧ್ವನಿ, ಸಚಿವರಾದ ಬೈರತಿ ಸುರೇಶ್ ರವರ ಹುಟ್ಟು ಹಬ್ಬವನ್ನು ಇಂದು ಹಲವಾರು ವಿಶೇಷ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿದ್ದು ಭಗವಂತ ಅವರಿಗೆ ಈ ರಾಜ್ಯದ ಜನರ ಸೇವೆ ಮಾಡಲು ಇನ್ನು ಹೆಚ್ಚಿನ ಶಕ್ತಿ ಮತ್ತು ಉನ್ನತ ಮಟ್ಟದ ಅಧಿಕಾರ ಸಿಗಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಉಪಮೇಯರ್, ಎಚ್ ಪಾಲಾಕ್ಷಿ ,ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಸೂಡ ಸದಸ್ಯರಾದ ಎಮ್ ಪ್ರವೀಣ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಹೆಚ್.ಪಿ .ಗಿರೀಶ್, ರಾಜ್ಯ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಸೋನಿಯಾ, ಯುವ ಕಾಂಗ್ರೆಸ್ ಮುಖಂಡ ಬಿ ಲೋಕೇಶ್, ಡಾ. ಶರತ್ ಮರಿಯಪ್ಪ, ಪಂಚ ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಎಮ್ ರಾಹುಲ್, ಎಸ್ ಕುಮಾರೇಶ್, ಬಸವರಾಜ್, ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಕೆಎಲ್ ಪವನ್, ಎಂ ರಾಕೇಶ್, ರಾಹಿಲ್, ನದೀಮ್, ರಾಹುಲ್ ಸಿಗೆಹಟ್ಟಿ, ಮಹೇಂದ್ರ ಜೈನ್ , ರಾಜೇಶ್ ಮಂದಾರ, ಸಾಹಿಲ್, ಮಿಥುನ್, ಪೃಥ್ವಿಕ್ ದಿವಾಕರ್ ,ಮನ್ವಿತ್ ಜೈನ್, ಸಂಜಯ್, ನಿತಿನ್, ಮಹಿಳಾ ಮುಖಂಡರಾದ ಕವಿತಾ, ಸುಶೀಲಾ ಷಣ್ಮುಗಂ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.