ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ತಾಯಿ ಮತ್ತು ಮಗುವಿಗೆ ಆರೋಗ್ಯ ಮತ್ತು ಸಂರಕ್ಷಣೆ ಕುರಿತು ಅರಿವು ಮಾಹಿತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಡಾ ರೊಟೇರಿಯನ್ ಗುಡದಪ್ಪ ಕಸಬಿ ರವರು ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಸಂರಕ್ಷಣೆಯ ಕುರಿತು ಮಾತನಾಡಿ ತಾಯಂದಿರು ಮಗುವನ್ನು ಹೆಚ್ಚಿನ ಮುತುವರ್ಜಿ ವಹಿಸಿ ಲಾಲನೆ ಪಾಲನೆ ಮಾಡಿ ಬೆಳೆಸಬೇಕು. ಅದೇ ಮಕ್ಕಳು ಮುಂದಿನ ದಿನಗಳಲ್ಲಿ ಶಾಲಾ ಮತ್ತು ಕಾಲೇಜಿನಲ್ಲಿ ಒಳ್ಳೆಯ ವಿದ್ಯಾರ್ಥಿಗಳಾಗಿ ಶಾಲೆಗೆ ಮತ್ತು ಪೋಷಕರಿಗೆ ಹೆಸರನ್ನು ತಂದುಕೊಡುತ್ತಾರೆ ಎಂದು ಸಂಕ್ಷಿಪ್ತವಾಗಿ  ಮಾಹಿತಿಯನ್ನು ತಿಳಿಸಿದರು.

ಸಭೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲಿನ ಅಧ್ಯಕ್ಷರಾದ ರೋಟೆರಿಯನ್ ಬಸವರಾಜ್ ಬಿ, ಕಾರ್ಯದರ್ಶಿ ರೊಟೇರಿಯನ್ ಜಯಶೀಲ ಶೆಟ್ಟಿ, ಜೋನ್ 11ರ ವಲಯ ಸೇನಾನಿ ಕಿರಣ್ ಕುಮಾರ್ ಜಿ. ಹಾಗೂ ಪಿಡಿಜಿ ರೊಟೇರಿಯನ್ ಜಿಎಂ ಪ್ರಕಾಶ್, ಮತ್ತು ರೊಟೇರಿಯನ್ ರವಿ ಕೋಟೋಜಿ. ರೋಟೇರಿಯನ್ ಚುಡಾಮಣಿ ಪವರ್ ರೊಟೇರಿಯನ್ ಧರ್ಮೇಂದ್ರ ಸಿಂಗ್ ರೋಟೇರಿಯನ್ ರಮೇಶ್ ರೊಟೇರಿಯನ್ ಬಲರಾಮ್, ರೊಟೇರಿಯನ್ ಆನಂದ್ ಎ ಎಸ್ ರೊಟೇರಿಯನ್ ಸಂತೋಷ್ ಬಿಎ ರೊಟೇರಿಯನ್ ಅರುಣ್ ಕುಮಾರ್ ರೊಟೇರಿಯನ್ ಡಾಕ್ಟರ್ ಚಿದಾನಂದಯ್ಯ . Anns ಅಧ್ಯಕ್ಷ ರಾಜೇಶ್ರೀ ಬಸವರಾಜ್ ರೋಟೇರಿಯನ್ ವಿನುತ ಅಶ್ವಿನ್ ರೋಟೇರಿಯನ್ ಜ್ಯೋತಿ ಶ್ರೀ ರಾಮ್ ರೊಟೇರಿಯನ್ ಅನಿತಾ ಹಾಗೂ ರೋಟರಿ ಕ್ಲಬಿನ ಎಲ್ಲಾ ಸದಸ್ಯರು ಭಾಗವಹಿಸಿದ್ದರು.