ಶಿವಮೊಗ್ಗ ಮಹಾನಗರ ಪಾಲಿಕೆಯ ನಲ್ಮ್ CAO ಅನುಪಮಾ ತಂಡದಿಂದ ನಗರದಲ್ಲಿ ಫೂಟ್ ಪಾತ್ ತೆರವು ಕಾರ್ಯಕ್ರಮ ನಡೆಯಿತು.
ನಗರದ ವೀರಶೈವ ಕಲ್ಯಾಣ ಮಂದಿರದ ಪಕ್ಕದಲ್ಲಿರುವ ಮತ್ತು ಇತರ ಪ್ರಮುಖ ರಸ್ತೆಯ ಫೂಟ್ ಪಾತ್ ನಲ್ಲಿ ಹಣ್ಣು ಮತ್ತು ಇತರ ವಸ್ತುಗಳ ವ್ಯಾಪಾರ ಮಾಡುತ್ತಿದ್ದರು. ಈ ಸಮಯದಲ್ಲಿ ಪಾಲಿಕೆ ಅಧಿಕಾರಿ ಅನುಪಮಾ ರವರು ಸ್ಥಳಕ್ಕೆ ಭೇಟಿ ನೀಡಿ ವ್ಯಾಪಾರಸ್ಥರಿಗೆ ಇಟ್ಕೊಂಡಿರುವ ಹಣ್ಣುಗಳನ್ನು ಹಿಂದಕ್ಕೆ ಇಟ್ಟುಕೊಂಡಿ ವ್ಯಾಪಾರ ಮಾಡುವಂತೆ ಸೂಚನೆ ನೀಡಿದರು.ಮತ್ತು ಸಾರ್ವಜನಿಕರಿಗೆ ಆಗುವ ಅನಾನುಕೂಲಗಳು ಬಗ್ಗೆ ತಿಳಿಸುವ ಮೂಲಕ ವ್ಯಾಪರಿಸ್ತರಿಗೆ ತಿಳಿ ಹೇಳಿದರು.
ಅನುಪಮಾ ಅವರು ಸಾರ್ವಜನಿಕರಿಗೆ ಮತ್ತು ಪಾದಚಾರಿಗಳಿಗೆ ಅನುಕೂಲವಾಗುವಂತೆ ವ್ಯಾಪಾರ ಮಾಡಿಕೊಳ್ಳಿ. ಸಾರ್ವಜನಿಕರಿಗೆ ಅನಾನುಕೂಲವಾಗುವ ಯಾವುದೇ ರೀತಿಯ ತೊಂದರೆ ಆಗಬಾರದು ಎಂದರು.ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿದಾಗ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಹೆಲ್ತ್ ವಿಭಾಗದ ಹೆಲ್ತ್ ಇನ್ಸ್ಪೆಕ್ಟರ್ ವಸಂತ್ ನಲ್ಮ್ ಅಧಿಕಾರಿ ಅನುಪಮಾ ತಂಡ ಮತ್ತು ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.