75ನೇ ಸ್ವಾತಂತ್ರೋತ್ಸವದಲ್ಲಿ ರಾಷ್ಟ್ರಗೀತೆಯನ್ನು ತಪ್ಪುತಪ್ಪಾಗಿ ಹಾಡಿದ ಸೂಡಾ ಮಾಜಿ ಅಧ್ಯಕ್ಷ. ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ವಿ.ರಾಜು ಮತ್ತು ರಾಷ್ಟ್ರಗೀತೆ ಹಾಡಿದ ಸಂಗಡಿಗರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಖಿಲ ಕರುನಾಡ ಯುವಶಕ್ತಿ ಸಂಘಟನೆ ಆಗ್ರಹಿಸುತ್ತದೆ. ನಗರದ ಜ್ಯುವೆಲ್ ರಾಕ್ ಎದುರಿನ ರಸ್ತೆಯಲ್ಲಿರುವ ಶ್ರೀ ಕಂಚಿ ಕಾಮಾಕ್ಷಿ ಕೋ ಆಪರೇಟಿವ್ ಸೊಸೈಟಿಯಲ್ಲಿ 75ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸೊಸೈಟಿ ಮಾಜಿ ಅಧ್ಯಕ್ಷ ವಿ. ರಾಜು ಸೇರಿದಂತೆ ಹಲವು ನಿರ್ದೇಶಕರು ಭಾಗವಹಿಸಿ ರಾಷ್ಟ್ರಗೀತೆಯನ್ನು ಹಾಡುವ ಸಂದರ್ಭದಲ್ಲಿ ಮೊದಲಿನಿಂದ ಆರಂಭ ಮಾಡದೆ ಮದ್ಯದಿಂದ ಆರಂಭ ಮಾಡಿ ಲೋಪವೆಸಗಿದ್ದಾರೆ. ಅಲ್ಲದೆ ತಪ್ಪು ತಪ್ಪಾಗಿ ರಾಷ್ಟ್ರಗೀತೆಯನ್ನು ಹೇಳಿ ಸಾಹಿತ್ಯವನ್ನೇ ಮರೆತು ರಾಷ್ಟ್ರಗೀತೆ ಹಾಡುವ ಮಧ್ಯದಲ್ಲಿ ಯಾರನ್ನು ಕರೆಯುತ್ತಾ ರಾಷ್ಟ್ರಗೀತೆ ಹೇಳುವ ನಿಯಮವನ್ನು ಉಲ್ಲಂಘಿಸಿದ್ದಾರೆ. ಜನರಿಂದ ಆಯ್ಕೆಗೊಂಡ ಈ ಸಹಕಾರ ಸಂಘದ ಸದಸ್ಯರು ಈ ರೀತಿ ರಾಷ್ಟ್ರಗೀತೆಗೆ ಅವಮಾನ ಮಾಡುವುದು ಸರಿಯಲ್ಲ. ವಿ. ರಾಜು ಮತ್ತು ಸೊಸೈಟಿಯ ನಿರ್ದೇಶಕರುಗಳ ಸೇರಿದಂತೆ ಹಲವಾರು ಕಾಟಾಚಾರಕ್ಕೆ ರಾಷ್ಟ್ರಗೀತೆ ಹಾಡಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘಟನೆ ಆಗ್ರಹಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸಿಡಿ ಫೋಟೋಗಳನ್ನು ಕೂಡ ಮನವಿಯೊಂದಿಗೆ ಲಗತ್ತಿಸಲಾಗಿದೆ. ರಾಜ್ಯಾಧ್ಯಕ್ಷ ಶರವಣ ಎ. ಆರ್, ರಾಜ್ಯ ಯುವ ಘಟಕದ ಅಧ್ಯಕ್ಷ ಎ .ಎಸ್ ಚಿದಾನಂದ, ಹಾಗೂ ಜಿ .ವಿ ನಂದೀಶ್ ಪಾಟೀಲ್, ನಂದೀಶ್ ಕುಮಾರ್, ವೆಂಕಟ ಕೃಷ್ಣ, ತೇಜು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153