ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರುಾ ಕೂಡ ಕೊರೋನಾ ಸಂದರ್ಭದಲ್ಲಿ ಸೂಚನೆ ಕೊಟ್ಟಕೂಡಲೇ ಯಾವುದೇ ಷರತ್ತುಗಳಿಲ್ಲದೆ ಕೆಲಸವನ್ನು ನಿರ್ವಹಿಸಿದ್ದಾರೆ. ಈ ಕೆಲಸ ಮಾಡುವಾಗ ಒತ್ತಡದಿಂದ 35 ಜನ ಕೊಡುವ ಕೆಲಸ ಮಾಡುವಾಗ 28 ಜನ ತಮ್ಮ ಜೀವನಗಳನ್ನೇ ಪಣಕ್ಕಿಟ್ಟು ಬಲಿಯಾಗುತ್ತಿದ್ದಾರೆ.173 ಜನರಿಗೆ ಕೊರೊನ ಬಂದಿದೆ. 2ನೇ ಹಂತದ ಸಂದರ್ಭದಲ್ಲಿ ಹಲವರಿಗೆ ಪಾಸಿಟಿವ್ ಆಗಿದೆ.16 ಜನ ನಿಧನರಾಗಿದ್ದಾರೆ.ಆದರೆ ಇದುವರೆಗೂ ಅವರಿಗೆಲ್ಲರಿಗೂ ಪರಿಹಾರ ಸಿಕ್ಕಿಲ್ಲ. ಜಿಲ್ಲೆಗಳಲ್ಲಿ ತಮ್ಮ ಕುಟುಂಬದ ಆದಾಯವನ್ನು ಕಳೆದು ಕೊಂಡಿದ್ದಾರೆ ರಾಜ್ಯದ ಹೈಕೋರ್ಟ್ ಕರೋನ ಸಂದರ್ಭದಲ್ಲಿ ಮಕ್ಕಳ ಮಹಿಳೆಯರ ಅಪೌಷ್ಟಿಕತೆ ತಡೆಯಲು ಪೌಷ್ಠಿಕ ಆಹಾರ ಫಲಾನುಭವಿಗಳಿಗೆ ತಲುಪಿಸುವಲ್ಲಿ ಖಾತ್ರಿ ಪಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟಿತು.ಅಂತಹ ಎಲ್ಲ ದೂರುಗಳಿಂದ ಎಚ್ಚರಿಕೆಯಿಂದ ಸರ್ಕಾರದ ಘಟನೆಯನ್ನು ಕಾಪಾಡಿದ್ದು ಇದೆ ಅಂಗನವಾಡಿ ನೌಕರರು.ತಮ್ಮ ಜೀವಗಳನ್ನೇ ಪಣಕಿಟ್ಟು ಫಲಾನುಭವಿಗಳಿಗೆ ಆಹಾರ ಧಾನ್ಯಗಳ ಹಂಚಿಕೆ, ಗರ್ಭಿಣಿ ಬಾಣಂತಿ ಮತ್ತು ಮಕ್ಕಳ ಮೇಲ್ವಿಚಾರಣೆ ಮಾತ್ರವಲ್ಲದೆ ಕರೊನ ಕೆಲಸದ ಭಾಗವಾಗಿ ಆಶಾ ಕಾರ್ಯಕರ್ತೆಯರು ಇಲ್ಲದ ಕಡೆ ಅಂಗನವಾಡಿ ನೌಕರರ ಕಪ ಸಂಗ್ರಹಿಸುವುದು. ಲಸಿಕೆ ಹಾಕಿಸಲು, ಮನವೊಲಿಸುವುದು ಪ್ರಚಾರ ಮಾಡುವುದು. ಪಾಸಿಟಿವ್ ಬಂದವರನ್ನು ಕ್ವಾರಂಟೈನ್ ಮಾಡಿ ಮೇಲ್ವಿಚಾರಣೆ ನಡೆಸುವುದು. ಅಗತ್ಯವಿದ್ದವರನ್ನು ಆಸ್ಪತ್ರೆಗೆ ದಾಖಲು ಮಾಡುವುದು.ಹೀಗೆ ಹಲವು ಸ್ವರೂಪದ ಕೆಲಸಗಳನ್ನು ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಕರೋನ ಸಾಂಕ್ರಾಮಿಕ ಭಯಂಕರತೆ ಇದ್ದಾಗಲೂ ಮಲೆನಾಡು ಗುಡ್ಡಗಾಡು ಕೊಳಚೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಕುಟುಂಬದ ವಾಹನಗಳನ್ನು ಬಳಸಿ ಆಹಾರ ಸಾಮಗ್ರಿಗಳನ್ನು ಮನೆ ಮನೆಗೆ ಹಂಚಿದ್ದು ಕ್ವಾರಂಟೈನ್ ಆದ ಸ್ಥಳಗಳಿಗೆ ಮಾಸ್ಕ್ ಸ್ಯಾನಿಟೇಷನ್‌ , ಇಲ್ಲದಿದ್ದರೂ ಮಾತ್ರೆಗಳನ್ನು ನೀಡಿದ್ದಾರೆ. ಅಲ್ಲದೆ ತಮ್ಮ ಕೈಯಿಂದ ಹಣ ಖರ್ಚು ಮಾಡಿಕೊಂಡು ಆಹಾರ ವಿತರಣೆ ಮಾಡಿದರೆ ಕೊರೊನ ರೋಗಿಗಳನ್ನು ಸಂತೈಸಿದ್ದು ಮಾತ್ರವಲ್ಲದೆ ಸಾರ್ವಜನಿಕರಿಂದ ಹಲ್ಲೆಗೊಳಗಾದರೂ ಕೂಡ ಎದೆಗುಂದದ ಕೆಲಸ ಮಾಡಿದ್ದ. ಈ ಹೆಣ್ಣುಮಕ್ಕಳ ಧೈರ್ಯವನ್ನು ಮತ್ತು ಸೇವೆಯನ್ನು ಬರಿಯ ಮಾತುಗಳನ್ನು ಹೇಳಿದರೆ ಸಾಕೆ ಇವರ ಕೆಲಸವನ್ನು ಮೆಚ್ಚು ಜುಾನ್ 9 ರಂದು ಮುಖ್ಯಮಂತ್ರಿಗಳು ಸಭೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.* ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಶಿಫಾರಸು ಮಾಡಿರುವ 339.48 ಲಕ್ಷ ಅನುದಾನ ಬಿಡುಗಡೆ ಮಾಡಿ. * ಇಲಾಖೆ ಸಚಿವರಿಂದಲೇ ಕೋಳಿ ಮೊಟ್ಟೆಗಳಲ್ಲಿರುವ ಭ್ರಷ್ಟಾಚಾರ ತನಿಖೆ ನಡೆಸಬೇಕು.* Parent: child A/C ಮಾದರಿ ಶೂನ್ಯ ಶುಲ್ಕದ ಉಪ ಖಾತೆಗಳನ್ನು ತೆರೆಯುವ ಪ್ರಸ್ತಾವನೆ ಸಲ್ಲಿಸಬೇಕು. * ಕರೋನ ಸಂದರ್ಭದಲ್ಲಿ ನಿಧನರಾದ ಕುಟುಂಬದವರಿಗೆ ಕಾರ್ಯಕರ್ತೆ ಅಥವಾ ನಾಯಕಿ ಹುದ್ದೆ ಕೊಡಬೇಕು. * ಕರೊನ ವಾರಿಯರ್ಸ್ ಆಗಿ ಕೆಲಸಮಾಡಿ ಸಂಘಟಿತರಾಗಿ ನಿಧನರಾದ ಅಂಗನವಾಡಿ ನೌಕರರಿಗೆ ಕೂಡಲೇ 30ಲಕ್ಷ ಪರಿಹಾರ ಬಿಡುಗಡೆ ಮಾಡಬೇಕು.* ಕರೊನ ಸಂದರ್ಭದ ಕೆಲಸಕ್ಕೆ 10 ಸಾವಿರ ರಿಸ್ಕ್ ಅಲೋವೆನ್ಸ್ ನೀಡಬೇಕು.* ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮತ್ತು ILC ಶಿಫಾರಸ್ಸಿನಂತೆ ನೌಕರರಂತೆ ಗುರುತಿಸಿ ಕನಿಷ್ಠ ವೇತನ ಜಾರಿ ಮಾಡಬೇಕು.* ಅಂಗನವಾಡಿ ನೌಕರರನ್ನು ಕಾಯಂ ಮಾಡಬೇಕು.ಮಾಡುವ ತನಕ 21ಸಾವಿರ ವೇತನ ಕೊಡಬೇಕು.*ಖಾಲಿಯಲ್ಲಿರುವ ಸಹಾಯಕಿಯರು ಕಾರ್ಯಕರ್ತೆಯರ ಹುದ್ದೆಗಳನ್ನು ಮತ್ತು ಇಲಾಖೆ ಸಿಬ್ಬಂದಿಗಳ ಹುದ್ದೆಗಳನ್ನು ಭರ್ತಿ ಮಾಡಬೇಕು. * ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಗುಲ್ಬರ್ಗಾ, ಉತ್ತರ ಕನ್ನಡ ಇನ್ನಿತರ ಮಹಾನಗರಗಳಲ್ಲಿ ಸಹಾಯಕಿಯ ಆಯ್ಕೆಯ ಮಾನದಂಡ ಬದಲಿಸಬೇಕು. * ಐಸಿಡಿಎಸ್ ಯೋಜನೆಗೆ ಅನುದಾನವನ್ನು ಹೆಚ್ಚಳ ಮಾಡಬೇಕು ಬಜೆಟ್ ಲ್ಲಿ ಕಡಿತವಾಗಿರುವ 8452.38ಕೋಟಿ ಹಣ ವಾಪಸ್ ನೀಡಬೇಕು. ದೇಶದ ಮತ್ತು ಮಹಿಳೆಯರನ್ನು ರಕ್ಷಿಸಬೇಕು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153

<script async src="https://pagead2.googlesyndication.com/pagead/js/adsbygoogle.js?client=ca-pub-7738144875953013"
     crossorigin="anonymous"></script>