ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಟೋರ್ ಕೀಪರ್ ಕೆಲಸ ಮಾಡುವ ವ್ಯಕ್ತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಆಸ್ಪತ್ರೆಯ ಸ್ಟೋರ್ ಕೀಪರ್ ಆಗಿರುವ ನೀಲಕಂಠೇಗೌಡ ಎಂದು ಗುರುತಿಸಲಾಗಿದೆ.ವಿಕಲಚೇತನರಿಗೆ ಪ್ರಮಾಣ ಪತ್ರಕೊಡಲು ಲಂಚ ಕೇಳಿದ ಆರೋಪದ ಮೇರೆಗೆ ನೀಲಕಂಠೇಗೌಡ ಲೋಕಾ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್ ಪಿ ಮಂಜುನಾಥ ಚೌಧರಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.ಸಾಗರ ತಾಲೂಕು ಆಚಾಪುರ ಅಂಚೆ ನಿವಾಸಿ ನಾಗರಾಜ್ ಎಂಬವರ ಮಗಳಿಗೆ ಅಂಗವೈಕಲ್ಲಿನಿಂದ ಬಳಲುತ್ತಿದ್ದು ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಅಂಗವಿಕಲ ಸರ್ಟಿಫಿಕೇಟ್ ಪಡೆದುಕೊಳ್ಳಲು 15 20 ದಿನಗಳ ಹಿಂದೆ ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ಹೋಗಿ ಚೀಟಿ ಮಾಡಿಸಿದ್ದರು.
ಆಡಳಿತ ವಿಭಾಗದಲ್ಲಿ ಇದ್ದ ಕ್ಲರ್ಕ್ ನೀಲಕಂಠೇಗೌಡ ಅವರನ್ನು ಭೇಟಿ ಮಾಡಿದಾಗ ಪಿರ್ಯಾದಿಗೆ ವೈದ್ಯರಿಂದ ಮಗಳನ್ನು ತಪಾಸಣೆ ಮಾಡಿಸಿ ರೈತರಿಂದ ಸಹಿ ಪಡೆದು ಪಾರಂಗಗಳನ್ನು ತಂದು ನೀಡುವಂತೆ ತಿಳಿಸಿದ್ದರು.ಅದರಂತೆ ನಾಗರಾಜ್ ಅವರು ವೈದ್ಯರಿಂದ ಪರೀಕ್ಷೆ ಮಾಡಿಸಿ ಫೋಟೋ ಇತರೆಲ್ಲ ದಾಖಲಾತಿಗಳನ್ನು ಲ್ಯಾಬ್ ಗೆ ನೀಡಿದ್ದರು ಎಂದು ಕ್ಲರ್ಕ್ ಒಂದುವರೆ ಸಾವಿರ ಲಂಚದ ಹಣದ ಬೇಡಿಕೆ ಇಟ್ಟಿದ್ದರು ಈ ಹಣದ ಬೇಡಿಕೆಯ ಸಂಭಾಷಣೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ನಾಗರಾಜ್ ರವರು ಲೋಕಾಯುಕ್ತರಿಗೆ ದೂರು ನೀಡಿದರು.ಇಂದು ನೀಲಕಂಠಗೌಡರು ನಾಗರಾಜ್ ರವರಿಂದ ಒಂದುವರೆ ಸಾವಿರ ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತರಿಂದ ಟ್ರ್ಯಾಪ್ ಆಗಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಬಿಪಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆಯಿತು.ಪೊಲೀಸ್ ಇನ್ಸ್ಪೆಕ್ಟರ್ ವೀರಬಸಪ್ಪ ಕುಸ್ಲಾಪುರ ರುದ್ರೇಶ್ ಕೆಪಿ ಗುರುರಾಜ ಸಿಬ್ಬಂದಿಗಳಾದ ಯೋಗೇಶ್ ಕೆ ಸಿ ಮಂಜುನಾಥ್ ಪ್ರಶಾಂತ್ ಕುಮಾರ್ ಪ್ರಕಾಶ್ ಭಾರಿ ಮರದ ಅರುಣ್ ಕುಮಾರ್ ಆದರ್ಶ ಶ್ರೀಮತಿ ಅಂಜಲಿ ಚಂದ್ರಿಬಾಯಿ ಪ್ರದೀಪ್ ತರುಣ್ ಗಂಗಾಧರ್ ಆನಂದ್ ಗೋಪಿ ರವರು ದಾಳಿಯಲ್ಲಿ ಭಾಗಿಯಾಗಿದ್ದರು.