17 ನೇ ವಾರ್ಡ್ ಗೋಪಾಲಗೌಡ ಬಡಾವಣೆಯ ಮೂಲಭೂತ ಸೌಕರ್ಯಕ್ಕಾಗಿ ಮನವಿ

ಗೋಪಾಲಗೌಡ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಇಂದು ಮಹಾನಗರ ಪಾಲಿಕೆಯ ಆಯುಕ್ತರದ ಕೆ, ಮಾಯಣ್ಣ ಗೌಡ ಅವರನ್ನು ಭೇಟಿ ಮಾಡಿ ಬಡಾವಣೆಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ತುರ್ತಾಗಿ ಗಮನಹರಿಸುವಂತೆ ಮನವಿ ಸಲ್ಲಿಸಿದರು.

ಎಸ್ ಬಂಗಾರಪ್ಪ ಇಂಡೋರ್ ಶಟಲ್ ಕೋರ್ಟ್ ನ ಕಾಮಗಾರಿ ತುರ್ತಾಗಿ ಕೈಗೊಳ್ಳಲು ಕ್ರಮ ಕೈಗೊಳ್ಳುವುದು.

ಬಡಾವಣೆಗೆ ಹೋಗುವ ಪ್ರಮುಖ ರಸ್ತೆ ಆಯನೂರು ಗೇಟ್ ನಿಂದ ಶಾರದಾದೇವಿ ಅಂಧ ವಿಕಾಸ ಶಾಲೆಯವರೆಗೆ ಗುಂಡಿ ಬಿದ್ದಿದ್ದು ತಕ್ಷಣ ವೆಟ್ ಮಿಕ್ಸಿ ಇಂದ ಗುಂಡಿ ಮುಚ್ಚುವಂತೆ ಕ್ರಮ ಕೈಗೊಳ್ಳುವುದು.

ಹೈ ವೋಲ್ಟೇಜ್ ವಿದ್ಯುತ್ ಲೈನ್ ನ ಕೆಳಗೆ ಗಿಡಗಂಟೆಗಳು ಬೆಳೆದಿದ್ದು ಇದನ್ನು ತಕ್ಷಣ ತೆರವುಗೊಳಿಸಿ.

ಚಂದನ ಆರೋಗ್ಯ ಪಾರ್ಕ್ ನ ತಡೆಗೋಡೆ ಕಾಮಗಾರಿ ತ್ವರಿತವಾಗಿ ಮುಗಿಸುವುದು.

ಬೀದಿ ನಾಯಿಗಳ ಸಂಖ್ಯೆ ವಿಪರೀತ ಹೆಚ್ಚಳವಾಗಿದ್ದು ತಕ್ಷಣ ಸಂತಾನ ಹರಣ ಚಿಕಿತ್ಸೆ ಕೈಗೊಳ್ಳುವುದು ಹಾಗೂ ಹಂದಿಗಳ ಹೆಚ್ಚಳಕ್ಕೆ ಕಡಿವಾಣ ಹಾಕುವುದು.

ಗೋಪಾಲಗೌಡ ಬಡಾವಣೆ ವಾರ್ಡ್ ಹದಿನೇಳರ ವಿಸ್ತರಣೆ ದೊಡ್ಡದಿದ್ದು ಇದಕ್ಕೆ ಹೊಂದಿಕೊಂಡಂತೆ ಸ್ವಾಮಿ ವಿವೇಕಾನಂದ ಬಡಾವಣೆಯ ಕಸ ವಿಲೇವಾರಿಯ ಜವಾಬ್ದಾರಿಯು ಇರುವುದರಿಂದ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇರುವುದನ್ನು ಪರಿಗಣಿಸಿ ಹೆಚ್ಚುವರಿ ಕಾರ್ಮಿಕರನ್ನು ನಿಯೋಜಿಸುವುದು.

ವಾರ್ಡಿನಲ್ಲಿ ಅತಿ ಹೆಚ್ಚು ಪಾರ್ಕ್ ಗಳಿದ್ದು ನಿರ್ವಹಣೆ ಇಲ್ಲವಾಗಿದೆ ಪಾರ್ಕ್ ಗಳ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸುವುದು.

ವಾರ್ಡಿನ ಒಳಬಾಗದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳುವುದು.

ರಾಜ ಕಾಲುವೆಯ ಕಾಮಗಾರಿ ಅವೈಜ್ಞಾನಿಕವಾಗಿದ್ದು ಮಳೆಗಾಲದಲ್ಲಿ ಬಡಾವಣೆಗೆ ನೀರು ನುಗ್ಗುತ್ತಿದ್ದು ವೈಜ್ಞಾನಿಕವಾಗಿ ಕಾಮಗಾರಿಯನ್ನು ಕೈಗೊಳ್ಳುವುದು.

ಬೀದಿ ದೀಪಗಳ ನಿರ್ವಹಣೆ ಅಸಮರ್ಪಕವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವುದು.*24/7 ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕವಾಗಿದ್ದು ನೀರಿನ ಅಭಾವ ಹೆಚ್ಚಾಗಿದ್ದು ಸಮಸ್ಯೆ ನಿರ್ವಹಣೆಗೆ ತುರ್ತು ಕ್ರಮ ಕೈಗೊಳ್ಳುವುದು.


ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಜಿ.ಡಿ. ಮಂಜುನಾಥ್ ಟಿ.ಡಿ ಗೀತೇಂದ್ರಗೌಡ, ಜಿ.ಎಸ್. ಶಿವಕುಮಾರ್,ಚಂದನ ಪಾರ್ಕ್ ನ ಪ್ರಧಾನ ಕಾರ್ಯದರ್ಶಿ ಶ್ರೀ ಗುರುರಾಜ್, ಅಶೋಕ್, ರವಿ, ಬೋರೇಗೌಡ, ನಾಗೇಶ್ ರಂಗೆಗೌಡ್ರು,ಆನಂದ್ ಮತ್ತು17ನೇ ವಾರ್ಡಿನ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಆರ್. ರಾಜಶೇಖರ್ ಹಾಗೂ ಇನ್ನು ಇತರರು ಉಪಸ್ಥಿತರಿದ್ದರು.