ಕಲಬುರಗಿಯ ಶರಣ ಬಸವೇಶ್ವರ ಸಂಸ್ಥಾನದ ಡಾ. ಶರಣಬಸಪ್ಪ ಅಪ್ಪ ಅವರು ಇಹಲೋಕದ ಯಾತ್ರೆ ಮುಗಿಸಿದ್ದು ನಾಡು ಓರ್ವ ಕಾಯಕ ಯೋಗಿಯನ್ನು ಕಳೆದುಕೊಂಡು ಬಡವಾದಂತೆ ಭಾಸವಾಗುತ್ತಿದೆ. ಲಿಂಗಪೂಜಾ ನಿಷ್ಠರಾಗಿ, ಶಿಕ್ಷಣ ಪ್ರೇಮಿಯಾಗಿ ಕಲಬುರಗಿಯ ದಾಸೋಹ ಸಂಸ್ಥಾನವನ್ನು, ಅನ್ನ-ಅಕ್ಷರ -ಆಶ್ರಯದ ತ್ರಿವಿಧ ದಾಸೋಹ ಸಂಸ್ಥಾನವನ್ನಾಗಿಸಿದ್ದರು.

ಅಪ್ಪಾ ಅವರು ಸ್ಥಾಪಿಸಿದ ಸಂಸ್ಥೆಗಳಿಂದ ನಾಡು ಅತ್ಯುತ್ತಮ ನಾಗರಿಕರನ್ನು ಪಡೆದಿದೆ. ಕೆಜಿಯಿಂದ ಹಿಡಿದು ಪಿಜಿಯವರೆಗೆ ಶಿಕ್ಷಣ ರಂಗದ ಎಲ್ಲ ವಲಯದಲ್ಲೂ ತಮ್ಮ ಸೇವೆಯ ಛಾಪು ಮೂಡಿಸಿದ ಅಪ್ಪನವರು ದೈಹಿಕವಾಗಿ ನಮ್ಮನ್ನು ಅಗಲಿದ್ದರೂ, ಅವರ ಲಿಂಗ ಚೇತನ ಸದಾ ಜಾಗೃತವಾಗಿರುತ್ತದೆ. ಅವರ ಕಾಯಕದ ಪ್ರತಿಫಲ ಉಣ್ಣುತ್ತಿರುವ ಸಮುದಾಯದ ನಡುವೆ ಅವರು ಜೀವಂತವಾಗಿರುತ್ತಾರೆ.

ಅವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು, ದೇವರು ಅವರ ಕುಟುಂಬಕ್ಕೆ ಮತ್ತು ಅಪಾರ ಭಕ್ತ ಸಮೂಹಕ್ಕೆ ಕರುಣಿಸಲೆಂದು ಪ್ರಾರ್ಥಿಸಿಕೊಳ್ಳುತ್ತೇವೆ.

-ಶ್ರೀ ಮ. ನಿ. ಪ್ರ. ಡಾ. ಬಸವ ಮರುಳಸಿದ್ಧ ಸ್ವಾಮಿಗಳವರು
ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು- ಬಸವಕೇಂದ್ರ, ಶಿವಮೊಗ್ಗ