ಇಂದು ಬೆಳಿಗ್ಗೆ ಶಿವಮೊಗ್ಗ ನಗರದಲ್ಲಿ ಬ್ಯಾಂಕ್ ಆಫ್ ಬರೋಡಾ ಕಚೇರಿ ಎಸ್ ಆರ್ ರಸ್ತೆಯಲ್ಲಿ ಕರವೇ ಯುವಸೇನೆ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಅವರ ನೇತೃತ್ವದಲ್ಲಿ ಎಟಿಎಂ ನಲ್ಲಿ ಕನ್ನಡ ಇಲ್ಲದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮ್ಯಾನೇಜರ್ ಗೆ ಮನವಿ ನೀಡಲಾಗಿತ್ತು. ಅಲ್ಲದೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಕರವೇ ಯುವ ಸೇನೆ ಎಚ್ಚರಿಕೆ ನೀಡಿತ್ತು.


ಫಲಶ್ರುತಿ : ಕರವೇ ಯುವಸೇನೆಯ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ತಕ್ಷಣ ತಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದು ರಾಜ್ಯಾದ್ಯಂತ ಬ್ಯಾಂಕ್ ಆಫ್ ಬರೋಡಾ ಎಲ್ಲ ಎಟಿಎಂಗಳಲ್ಲಿ ಕನ್ನಡವನ್ನು ಲಭ್ಯ ಗೊಳಿಸಿದ್ದಾರೆ. ಪ್ರಜಾಶಕ್ತಿ ಸ್ಟುಡಿಯೋದಲ್ಲಿ ಮಾತನಾಡಿದ ಕರವೇ ಯುವಸೇನೆ ಜಿಲ್ಲಾಧ್ಯಕ್ಷ ರಾದ ಕಿರಣ್ ಕುಮಾರ್ ಅವರು ತಕ್ಷಣ ಕಾರ್ಯ ಪ್ರವೃತ್ತರಾದ ಮ್ಯಾನೇಜರ್ ಅವರಿಗೆ ವಂದನೆಗಳನ್ನು ತಿಳಿಸಿದ್ದಾರೆ. ಅಲ್ಲದೆ ಖುದ್ದು ಮ್ಯಾನೇಜರ್ ದೂರವಾಣಿ ಮುಖಾಂತರ ಸರಿಪಡಿಸಿದ್ದನ್ನು ಖಚಿತಪಡಿಸಿದಾಗ ಸಂತಸವಾಯಿತು ಎಂದು ತಿಳಿಸಿದ್ದಾರೆ. ಅಲ್ಲದೆ ಕರವೇ ಯಾವತ್ತೂ ಕನ್ನಡವನ್ನು ಕಡೆಗಣಿಸಿ ಇದನ್ನು ಸಹಿಸುವುದಿಲ್ಲ. ಈ ದಿನದ ಕೆಲಸದಿಂದಾಗಿ ಸಾರ್ವಜನಿಕರಿಗೆ ಕನ್ನಡ ವಿಲ್ಲದ್ದರಿಂದ ಎಟಿಎಂ ಗಳಲ್ಲಿ ಆಗುತ್ತಿದ್ದ ತೊಂದರೆ ತಪ್ಪಿದೆ. ಈ ಗೆಲುವಿನಿಂದ ಇನ್ನೂ ಹೆಚ್ಚು ಹೋರಾಟ ಮಾಡಲು ಸ್ಫೂರ್ತಿ ಬಂದಿದೆ ಎಂದವರು ತಿಳಿಸಿದರು. ಅಲ್ಲದೆ ಈ ಸಂದರ್ಭದಲ್ಲಿ ಕರವೇ ಯುವ ಸೇನೆಯ ಎಲ್ಲ ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದರು

ಟೀಮ್ ಪ್ರಜಾಶಕ್ತಿ…