ಜಿಲ್ಲೆಯಲ್ಲಿ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಗೆ ಒಳಪಡದ ಕುಟುಂಬಗಳು ಹಾಗೂ ಸದಸ್ಯರು ಸಮೀಕ್ಷೆಗೆ ಒಳಗೊಳ್ಳಲು ಆಯಾ ತಾಲ್ಲೂಕಿನಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.


ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷಾ ಕಾರ್ಯವು ಪ್ರಗತಿಯಲಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೂ ಶೇ.85 ರಷ್ಟು ಸಮೀಕ್ಷಾ ಕಾರ್ಯವು ಪೂರ್ಣಗೊಂಡಿದೆ.
ರಾಜ್ಯದ ಸರ್ಕಾರದ ಆದೇಶದಂತೆ ನಿಗದಿತ ಕಾಲಮಿತಿಯಲ್ಲಿ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಲಾಗಿದ್ದು, ಇನ್ನೂ ಹಲವು ಕುಟುಂಬಗಳು ಸಮೀಕ್ಷೆಗೆ ಒಳಪಟ್ಟಿರುವುದಿಲ್ಲ ಹಾಗೂ ಸಮೀಕ್ಷೆಗೆ ಒಳಪಟ್ಟಿರುವ ಮನೆಗಳಲ್ಲಿ ಕುಟುಂಬದ ಸದಸ್ಯರು ಸಹಿತ ಹೊರಗೆ ಉಳಿದಿರುವುದು ಕಂಡುಬಂದಿದೆ. ಹಾಗಾಗಿ ಸಮೀಕ್ಷೆಗೆ ಒಳಪಡದ ಕುಟುಂಬಗಳು ಹಾಗೂ ಸದಸ್ಯರು ಸಮೀಕ್ಷೆಗೆ ಒಳಗೊಳ್ಳಲು ಸಹಾಯವಾಣಿಯನ್ನು ತೆರೆಯಲಾಗಿದೆ.

ಆಯಾ ತಾಲ್ಲೂಕಿಗೆ ಸಂಬಂಧಿಸಿದ ದೂರವಾಣಿ ಸಂಖ್ಯೆ: ಶಿವಮೊಗ್ಗ-08182-279312, ಭದ್ರಾವತಿ-8904325166, ಶಿಕಾರಿಪುರ-7795352158, ಸಾಗರ-08183-298014, ಸೊರಬ-9611097690, ತೀರ್ಥಹಳ್ಳಿ-9901088210/9481075115, ಹೊಸನಗರ-9741621135 ಗಳನ್ನು ಸಂಪರ್ಕಿಸಿ ತಮ್ಮ ವಾಸ ಸ್ಥಳದ ವಿವರವನ್ನು ನೀಡಿದಲ್ಲಿ ಗಣತಿದಾರರು ತಮ್ಮ ಮನೆಗೆ ಬಂದು ಸಮೀಕ್ಷೆ ಕಾರ್ಯವನ್ನು ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *