ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಅಧ್ಯಕ್ಷರಾದ ಕಿರಣ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ನವೆಂಬರ್ ೧ರಂದು ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆದಿದ್ದರೂ, ಮಹಾರಾಷ್ಟçದ ಸಂಸದ ಧೈರ್ಯಶೀಲ್ ಮಾನೆ ಅವರು, ಕರ್ನಾಟಕದ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೊಹಮ್ಮದ್ ರೋಷÀನ್ ವಿರುದ್ಧ ಹಕ್ಕುಚ್ಯುತಿ ಪ್ರಕರಣ ದಾಖಲಿಸುವಂತೆ ಲೋಕಸಭಾ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದಾರೆ. ಈ ಬೆಳವಣಿಗೆ, ಕರ್ನಾಟಕ–ಮಹಾರಾಷ್ಟç ಗಡಿವಿವಾದಕ್ಕೆ ಸಂಬAಧಿಸಿದAತೆ ಮತ್ತೊಂದು ಸಂಘಷÀðಕ್ಕೆ ಕಾರಣವಾಗುವ ಆತಂಕವಿದೆ.
ರಾಜ್ಯೋತ್ಸವ ದಿನ ಯಾವುದೇ ಅಶಾಂತಿ ಉಂಟಾಗದAತೆ ಕಠಿಣ ಆಡಳಿತ ಕ್ರಮಗಳನ್ನು ಕೈಗೊಂಡಿದ್ದ ಜಿಲ್ಲಾಧಿಕಾರಿ ರೋಷÀನ್, ಕರ್ನಾಟಕ ವಿರೋಧಿ ಪ್ರತಿಭಟನೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಕಟ್ಟುನಿಟ್ಟಿನ ಕ್ರಮಗಳಿಂದ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಮತ್ತು ಯಾವುದೇ ಅಡಚಣೆ ಇಲ್ಲದೆ ಆಚರಿಸಲು ಸಾಧ್ಯವಾಯಿತು ಎಂಬ ಪ್ರಶಂಸೆ ಕೂಡ ದೊರೆತಿತ್ತು.
ನವದೆಹಲಿನಲ್ಲಿ ಲೋಕಸಭಾ ಸ್ಪೀಕರ್‌ಗೆ ಸಲ್ಲಿಸಿದ ಪತ್ರದಲ್ಲಿ, ನವೆಂಬರ್ ೧ರಂದು ಕರ್ನಾಟಕ ಗಡಿಯಲ್ಲಿ ತನ್ನನ್ನು ಅಕ್ರಮವಾಗಿ ತಡೆಹಿಡಿಯಲಾಗಿದೆ ಎಂದು ಧೈರ್ಯಶೀಲ್ ಮಾನೆ ಆರೋಪಿಸಿದ್ದಾರೆ. ಜಿಲ್ಲಾಧಿಕಾರಿ ರೋಷÀನ್ ಅವರು “ಅಕ್ರಮ ನೋಟಿಸ್” ಹೊರಡಿಸಿದ್ದು, ಅದರ ಆಧಾರದ ಮೇಲೆ ಪೊಲೀಸರು ತನ್ನನ್ನು ಕರ್ನಾಟಕ ಪ್ರವೇಶಿಸುವುದನ್ನು ತಡೆದರು ಎಂದು ಅವರು ತಿಳಿಸಿದ್ದಾರೆ. ಇದು ತಾನೊಬ್ಬ ಜನಪ್ರತಿನಿಧಿಯಾಗಿರುವ ನಿಟ್ಟಿನಲ್ಲಿ ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆ ಹಾಗೂ ಗಂಭೀರ ಅನ್ಯಾಯ ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಮಹಾರಾಷÀ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಬೆಳಗಾವಿಯ ಮರಾಠಿ ಭಾಷಿಕರು ನವೆಂಬರ್ ೧ನ್ನು “ಕಪ್ಪು ದಿನ”ವಾಗಿ ಆಚರಿಸುತ್ತಾರೆ ಎಂದು ಮಾನೆ ಹೇಳಿದ್ದಾರೆ.
ಇದರಿಂದ ಜಿಲ್ಲಾಧಿಕಾರಿಗಳು ದಿಟ್ಟ ನಿರ್ಧಾರ ಕೈಗೊಂಡು ಕನ್ನಡದ ರಾಜ್ಯೋತ್ಸವದ ಕಾರ್ಯಕ್ರಮ ಯಶಸ್ವಿಗೊಳಿಸಿ ಕನ್ನಡಿಗರ ಆತ್ಮ ಗೌರವವನ್ನು ಎತ್ತಿ ಹಿಡಿದಿದ್ದು, ಕನ್ನಡ ವಿರೋಧಿ ಶಕ್ತಿಗಳಿಗೆ ಪ್ರಖರ ಸಂದೇಶವನ್ನು ರವಾನಿಸಿರುತ್ತಾರೆ. ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧಿಕಾರಿಗಳ ಈ ಕ್ರಮವನ್ನು ಪ್ರಶಂಶಿಸುತ್ತದೆ. ಹಾಗೂ ರಾಜ್ಯದ ಎಲ್ಲಾ ಸಂಸದರು ಮಾನ್ಯ ಜಿಲ್ಲಾಧಿಕಾರಿಗಳ ಪರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತಬೇಕೆಂದು ಆಗ್ರಹಿಸುತ್ತದೆ.
ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್ಎಸ್ ಜಿಲ್ಲಾ ಉಪಾಧ್ಯಕ್ಷರಾದ ಮುಜಬುಲ್ಲ ಹಾಗೂ ವಿಜಯ್ ಕುಮಾರ್ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಸಿ. ಆಮೇಲೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಸಾಧಿಕ್ ಜಿಲ್ಲಾ ಖಜಾಂಚಿ ಗಣೇಶ್ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಪದ್ಮ ಮಾಲತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್ಥಿಕ ತಿವಾರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜ್ಯೋತಿ ಗ್ರಾಮಾಂತರ ಘಟಕದ ಅಧ್ಯಕ್ಷರಾದ ಮಂಜುನಾಥ್ ನಗರ ಪ್ರಧಾನ ಕಾರ್ಯದರ್ಶಿಯಾದ ನಾಗರಾಜ್ ಕರವೇ ಮುಖಂಡರಾದ ಆನ್ಸರ್ ಹಾಗೂ ಅಜ್ಗರ್ ಭಾಷಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.