ಶಿವಮೊಗ್ಗ ನಗರದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿರುವ ಸುಲ್ತಾನ್ ಗೋಲ್ಡ್ ಕಟ್ಟಡ ಜಾಗ ಶಿವಮೊಗ್ಗ ಮಹಾನಗರ ಪಾಲಿಕೆಯ ಆಸ್ತಿ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಬಗ್ಗೆ ಮಾತನಾಡಿದ ವೇದಿಕೆಯ ಮುಖಂಡರು ಕಟ್ಟಡ ತಕ್ಷಣ ವಶಕ್ಕೆ ಪಡೆಯಲು ಎಂದು ಹೈಕೋರ್ಟ್ ಆದೇಶ ನೀಡಿದೆ. ಆದೇಶ ಪ್ರಕಾರ ಪಾಲಿಕೆ ಆಯುಕ್ತರು ಯಾವುದೇ ವಿಳಂಬ ಮಾಡದೆ ಕಟ್ಟಡವನ್ನು ಪಾಲಿಕೆ ಹೆಸರಿಗೆ ದಾಖಲಿಸಬೇಕು ಎಂದರು.
ಸಾರ್ವಜನಿಕರ ಆಸ್ತಿ ಕಬಳಿಕೆ ಮಾಡಿ ಕೋಟ್ಯಂತರ ಬಾಡಿಗೆ ಪಡೆದ ಆಸ್ತಿಯ ಖಾತೆದಾರರು ಹಾಗೂ ಖಾತೆ ಮಾಡಿಕೊಟ್ಟ ಪಾಲಿಕೆಯ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮುಖದಮ್ಮೆ ನ್ಯಾಯಾಲಯದಲ್ಲಿ ದಾಖಲಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಎಲ್ಲಾ ಕ್ರಮಗಳನ್ನು ಆಯುಕ್ತರು ತ್ವರಿತ ಗತಿಯಲ್ಲಿ ಕೈಗೊಂಡು ಸಾರ್ವಜನಿಕರ ಆಸ್ತಿ ರಕ್ಷಣೆ ಜೊತೆಗೆ ನಗರಕ್ಕೆ ನ್ಯಾಯವಾದಿಸಬೇಕೆಂದು ಜೊತೆಗೆ ಆಯುಕ್ತರು ತೆಗೆದುಕೊಳ್ಳುವ ಕಮದ ಬಗ್ಗೆ ಪತ್ರಿಕ ಪ್ರಕಟಣೆ ಹೊರಡಿಸಬೇಕೆಂದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಗೋಪಾಲ್ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಸಂಘಟನಾ ಕಾರ್ಯದರ್ಶಿ ಡಾ ಸತೀಶ್ ಕುಮಾರ್ ಶೆಟ್ಟಿ ಅಶೋಕ್ ಕುಮಾರ್ ವಿನೋದ್ ಪೈ ಪರಿಸರ ರಮೇಶ್ ಮುಂತಾದವರು ಉಪಸ್ಥಿತರಿದ್ದರು.