ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಿಪೇಡ್ ಆಟೋ ಸೆಂಟರ್ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಕಟ್ಟಿ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಸಂಚಾರಿ ಸಿಪಿಐ ದೇವರಾಜ್ ಉದ್ಘಾಟಿಸಿದರು.
ಶಿವಮೊಗ್ಗ ಜಿಲ್ಲಾ ಪೊಲೀಸ್ ಸಾರಿಗೆ ಇಲಾಖೆ ಮತ್ತು ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ ರವರ ಆಯೋಗದೊಂದಿಗೆ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಿಪೇಡ್ ಆಟೋ ಸೆಂಟರ್ ಅನ್ನು ಪ್ರಾರಂಭಿಸಲಾಯಿತು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಕಟ್ಟಿ ಖಾಸಗಿ ಮತ್ತು ಬಸ್ ನಿಲ್ದಾಣದಲ್ಲಿ ಎರಡು ಪ್ರಿಪೇಡ್ ಆಟೋಗಳು ಇಂದಿನಿಂದ ಆರಂಭವಾಗಿದೆ. ಇಲ್ಲಿ 5 ರೂಪಾಯಿಗಳು ಹೆಚ್ಚು ಪಡೆಯಲಾಗುತ್ತಿದೆ. ಪ್ರಯಾಣದ ನಂತರ ಅಂತರದ ಮೇಲೆ ಹಣವನ್ನು ನಿಗದಿಪಡಿಸಲಾಗಿದೆ. ಅದನ್ನು ಸಾರ್ವಜನಿಕರು ಪ್ರಯಾಣದ ಮೊದಲ ಕಟ್ಟಬೇಕು ಎಂದರು.
ಡಿಸಿ ಎಸ್‌ಪಿ ಮತ್ತು ಸಿಇಒ ಒಟ್ಟಿಗೆ ಸಾರ್ವಜನಿಕ ಜನರಂತೆ ಒಂದು ಪ್ರಿಪೇಯ್ಡ್ ಪಾಯಿಂಟ್ ನಿಂದ ಮತ್ತೊಂದು ಪ್ರಿಪೇಯ್ಡ್ ಪಾಯಿಂಟ್ ವರೆಗೆ ಆಟೋದಲ್ಲಿ ಒಟ್ಟಿಗೆ ಪ್ರಯಾಣಿಸಿದ್ದು ತುಂಬಾ ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲೆಯ ಬಹುತೇಕ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.