ವರದಿ ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ವಿಠ್ಠಲ ಕೋಲ್ಹರ ಎಂಬ ವಿಲೇಜ್ ಅಕೌಂಟೆಂಟ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಖಾತಾ ಮಾಡಿಕೊಡಲು 1 ಲಕ್ಷ ರೂ. ಹಣ ಸ್ವೀಕರಿಸುವಾಗ ಲೋಕಯುಕ್ತರ ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ಚಿಕ್ಕಬಂಜೂರಿನಲ್ಲಿರುವ ಜಮೀನಿನ ಖಾತೆ ಮಾಡಿಕೊಡಲು ಶಿಕಾರಿಪುರದ ತಾಲೂಕು ಕಚೇರಿಯ ಕಂದಾಯ ಇಲಾಖೆಗೆ ಜಮೀನಿನ ಮಾಲೀಕರಾದ ಜಕ್ರಿಯಾ ಬೇಗ್ ಎಂಬುವರು ವಿಠ್ಠಲ ಕೋಲ್ಹರ ಎಂಬ ವಿಎ ನ್ನ ಭೇಟಿಯಾಗಿದ್ದರು. ವಿಎ ಖಾತೆ ಬದಲಾವಣೆಗೆ 4 ಲಕ್ಷ ರೂ. ಬೇಡಿಕೆ ಇಟ್ಟಿದ್ದ. ಜಕ್ರಿಯಾ ಬೇಗ್ ಅವರಿಗೆ 4 ಲಕ್ಷ ಕೊಡಲು ಮನಸ್ಸಿಲ್ಲದ ಕಾರಣ ಲೋಕಾಯುಕ್ತರನ್ನ ಭೇಟಿ ನೀಡಿದ್ದರು.
ಇಂದು ವಿಎ ಕೊಲ್ಹರ 1 ಲಕ್ಷ ರೂ. ಹಣ ಸ್ವೀಕರಿಸುವಾಗ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಸಿಬ್ಬಂದಿಗಳು ಉಪಸ್ಥಿರಿದ್ದರು.