ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ವತಿಯಿಂದ 125ನೇ ವರ್ಷದ ಶತಮಾನೋತ್ಸವದ ರಜತ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಕ್ರೀಡೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಆಹ್ವಾನ ಪತ್ರಿಕೆ ಕ್ರೀಡೋತ್ಸವದ ಪೋಸ್ಟರ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರದ ಗೌರವಾನ್ವಿತ ಮಂಜುನಾಥ್ ಜಿಎ ಮತ್ತು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಭಯ ದನಪಾಲ್ ಚೋಗಲಾ ಇವರು ಬಿಡುಗಡೆಗೊಳಿಸಿದರು.
ವಕೀಲರ ಸಂಘದ ಅಧ್ಯಕ್ಷರಾದ ಜಿ ಆರ್ ರಾಘವೇಂದ್ರ ಸ್ವಾಮಿ ಉಪಾಧ್ಯಕ್ಷರಾದ ಎನ್ ಆರ್ ನಂದಿನಿ ದೇವಿ , ಕಿಲಕ ಮಧುಸೂದನ್ ಪ್ರಧಾನ ಕಾರ್ಯದರ್ಶಿ ಎಸ್ ಎ ಶ್ರೀನಿವಾಸ್ ಖಜಾಂಚಿ ಎಂ ಬಿ ಮಾಲತೇಶ್ ಕ್ರೀಡಾ ಕಾರ್ಯದರ್ಶಿ ನಿರಂಜನ್ ಮೋಹಿತೆ ಸಾಂಸ್ಕೃತಿಕ ಕಾರ್ಯದರ್ಶಿ ಎಚ್ ಎಂ ಜನಾರ್ಧನ್ ಸಹ ಕಾರ್ಯದರ್ಶಿ ಎಂ ಜಗದೀಶ್ ಅತ್ತ ಪ್ರಚಾರ ಸಮಿತಿ ಕಾರ್ಯದರ್ಶಿ ಉಲ್ಲಾ ಖಾನ್ ಮತ್ತು ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.