ಮಂಜುನಾಥ್ ಶೆಟ್ಟಿ…
ಎಂಎಸ್‌ಎAಇ ಗಳ ಕಾರ್ಯಕ್ಷಮತೆ ಹೆಚ್ಚಿಸಿ, ಸಹಕರಿಸಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಎಂಎಸ್‌ಎAಇ ವಲಯದಲ್ಲಿ ವ್ಯಾಪಾರ ಅಭಿವೃದ್ದಿಪಡಿಸಲು ಸೇವೆಯನ್ನು ಒದಗಿಸುತ್ತಿರುವ ಬಿಡಿಎಸ್‌ಪಿ ಯೋಜನೆಯ ಸದುಪಯೋಗವನ್ನು ಎಂಎಸ್‌ಎAಇಗಳು ಪಡೆಯಬೇಕೆಂದು ಅವೇಕ್ ಸಂಸ್ಥೆ ಅಧ್ಯಕ್ಷೆ ಭುವನೇಶ್ವರಿ ಸಿ ತಿಳಿಸಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೆ ಸಿ ಟಿ ಯು ಬೆಂಗಳೂರು ಹಾಗೂ ಅವೇಕ್-ಕರ್ನಾಟಕ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಸಭಾಂಗಣದಲ್ಲಿ ಎಂ ಎಸ್ ಎಂ ಇ ಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಖಂಒP) ಯೋಜನೆಯಡಿ ಬಿಡಿಎಸ್‌ಪಿ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಅವೇಕ್ ಸಂಸ್ಥೆಯು ಹಲವಾರು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವುತ್ತಿದೆ. ಎಂಎಸ್‌ಎAಇ ಗಳು ಜಿಎಸ್‌ಟಿ ಕುರಿತು ಭಯ ಪಡಬಾರದು. ಮುದ್ರಾ ಯೋಜನೆ ಸೇರಿದಂತೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ವ್ಯಾಪಾರ ಆರಂಭಿಸಿ, ಮುಂದುವರೆಸಲು ಅಗತ್ಯವಾದ ಎಲ್ಲ ರೀತಿಯ ಮಾಹಿತಿ, ಸಹಕಾರ ಒದಗಿಸುವ ಯೋಜನೆಗಳ ಕುರಿತು ತಿಳಿಸುವ ಇಂತಹ ಅರಿವು ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವ್ಯಾಪಾರ ಅಭಿವೃದ್ದಿ ಸೇವೆಯನ್ನು ಒದಗಿಸುವ ಸಂಸ್ಥೆಗಳು ಎಂಎಸ್‌ಎAಇ ಗಳಿಗೆ ಉತ್ತಮ ಮಾರ್ಗದರ್ಶನ, ಸಾಲ ಸೌಲಭ್ಯಗಳನ್ನು ಪಡೆಯುವ ಬಗೆ, ವ್ಯಾಪಾರ ಬೆಳೆವಣಿಗೆಯ ತಂತ್ರಗಳು , ವ್ಯಾಪಾರದ ಯೋಜನೆಗಳು ಸೇರಿದಂತೆ, ಟೆಕ್ನಾಲಜಿ ಅಪ್‌ಗ್ರೇಡ್, ಮಾರುಕಟ್ಟೆ ಮತ್ತು ಕಾನೂನಾತ್ಮಕ ಅವಶ್ಯಕತೆಗಳ ಬಗ್ಗೆಯೂ ಸಹಾಯ ಒದಗಿಸುತ್ತಿದ್ದು, ಎಂಎಸ್‌ಎAಇಗಳು ಇದರ ಸದುಪಯೋಗ ಪಡೆಯಬೇಕು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಆರ್ ಗಣೇಶ್ ಮಾತನಾಡಿ, ಕೃಷಿ ಕ್ಷೇತ್ರದ ನಂತರದ ಆದಾಯ ಮತ್ತು ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡುತ್ತಿರುವ ಎಂ ಎಸ್ ಎಂ ಇ ಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗಬೇಕು. ದುಡಿಯುವ ಕೈಗಳು ಹೆಚ್ಚಾಗಬೇಕು ಇದರಿಂದ ದೇಶಕ್ಕೆ ಉತ್ತಮ ಭವಿಷ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಎಂಎಸ್‌ಎAಇ ಗಳಿಗಾಗಿ ರೂಪಿಸಿದೆ. ಎಂಎಸ್‌ಎAಇ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು(ಆರ್‌ಎಎಂಪಿ) ಯೋಜನೆಯಡಿಯಲ್ಲಿ ಬಿಡಿಎಸ್‌ಪಿ ಯೋಜನೆ ಕುರಿತು ಅರಿವು ಮೂಡಿಸುತ್ತಿರುವುದು ಬಹು ಉಪಯುಕ್ತವಾಗಿದ್ದು ಇದನ್ನು ಬಳಸಿಕೊಂಡು ಸಣ್ಣ ಉದ್ಯಮಿಗಳು ಹಂತ ಹಂತವಾಗಿ ಬೆಳೆಯಬೇಕು.
ಕಾರ್ಯಕ್ರಮದಲ್ಲಿ ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು ಶರತ್ ಗೌಡ ಪಿ, ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಹನುಮಂತಪ್ಪ ಪಿ, ಅವೇಕ್ ಸಂಸ್ಥೆ ಕಾರ್ಯದರ್ಶಿ ಹೇಮಾಮಾಲಿನಿ, ಅವೇಕ್ ಸಂಸ್ಥೆ ಖಜಾಂಚಿ ಶ್ಯಾಮಲಾ, ಮುಂತಾದ ಅಧಿಕಾರಿಗಳು ಹಾಜರಿದ್ದರು.