ಮಂಜುನಾಥ ಶೆಟ್ಟಿ…
ಶಿವಮೊಗ್ಗ ನಗರದ ಜೈಲ್ ಸರ್ಕಲ್ (ಅಂಬೇಡ್ಕರ್ ಸರ್ಕಲ್)ದಿಂದ ಲಕ್ಷ್ಮೀ ಟಾಕೀಸ್ ಸರ್ಕಲ್‌ವರೆಗಿನ ರಸ್ತೆಯಲ್ಲಿ ಜಾರಿಯಲ್ಲಿರುವ ದಿನ ಬಿಟ್ಟು ದಿನ (Alternative Parking) ಪಾರ್ಕಿಂಗ್ ವ್ಯವಸ್ಥೆ ಕುರಿತು ಸಾರ್ವಜನಿಕರಿಗೆ ಸಂಚಾರಿ ಸಿಪಿಐ ದೇವರಾಜ್ ಅವರು ಅರಿವು ಮೂಡಿಸಿ, ನಿಗದಿತ ನಿಯಮಾನುಸಾರ ವಾಹನಗಳನ್ನು ಪಾರ್ಕಿಂಗ್ ಮಾಡುವಂತೆ ಅರಿವು ಮೂಡಿಸಿದರು.
ಇದೇ ವೇಳೆ, ಸದರಿ ರಸ್ತೆಯ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ಇಡಲಾಗಿದ್ದ ಹಣ್ಣಿನ ಅಂಗಡಿಗಳು ಮತ್ತು ಕಟ್ಟಡ ನಿರ್ಮಾಣದ ಸಾಮಗ್ರಿಗಳು ಹಾಗೂ ಇತರೆ ಎಲ್ಲಾ ಬಗೆಯ ಅಂಗಡಿಗಳನ್ನು ತೆರವುಗೊಳಿಸಿ, ಪಾದಚಾರಿಗಳು ಸುರಕ್ಷಿತವಾಗಿ ಮತ್ತು ಸುಗಮವಾಗಿ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಯಿತು.
ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ, ನಿಗದಿತ ಸ್ಥಳದಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಿ, ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸದೆ ಶಿವಮೊಗ್ಗ ನಗರವನ್ನು ಸ್ವಚ್ಛ, ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಸಂಚರಿ ಸಿಪಿಐ ದೇವರಾಜ್ ಮನವಿ ಮಾಡಿದ್ದಾರೆ.