ಮಂಜುನಾಥ್ ಶೆಟ್ಟಿ…

2023-24 ಮತ್ತು 2024-25 ನೇ ಸಾಲಿಗೆ ರೇಷ್ಮೆ ಕೃಷಿ ಪ್ರಶಸ್ತಿ ನೀಡಲು ಉತ್ತಮ ಪ್ರಗತಿ ಸಾಧಿಸಿರುವ ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರೇಷ್ಮೆ ಬೆಳೆಗಾರರು ಕನಿಷ್ಠ 1 ಎಕರೆ ಹಿಪ್ಪುನೇರಳೆ ತೋಟ ಹಾಗೂ ಪ್ರತ್ಯೇಕ ಹುಳು ಸಾಕಾಣಿಕೆ ಮನೆ ಹೊಂದಿರಬೇಕು. 100 ಮೊಟ್ಟೆಗೆ ಸರಾಸರಿ ರೇಷ್ಮೆ ಗೂಡಿನ ಇಳುವರಿ 65 ಕೆಜಿ ಹಾಗೂ ಒಂದು ಎಕರೆಗೆ ರೇಷ್ಮೆ ಗೂಡಿನ ಉತ್ಪಾದನೆ 500 ಕೆಜಿ ಗಿಂತ ಕಡಿಮೆ ಇರಬಾರದು.

ರೇಷ್ಮೆ ಪಾಸ್ ಬುಕ್ , ರೇಷ್ಮೆ ಮೊಟ್ಟೆ /ಚಾಕಿ ಖರೀದಿಸಿರುವ ಬಗ್ಗೆ ಹಾಗೂ ರೇಷ್ಮೆ ಗೂಡು ಮಾರಾಟ ಮಾಡಿರುವ ಬಗ್ಗೆ ದಾಖಲಾತಿ ಹೊಂದಿರಬೇಕು.
ಆಸಕ್ತರು ಸ್ಥಳೀಯ ರೇಷ್ಮೆ ಸಹಾಯಕ ನಿರ್ದೇಶಕರ ಕಛೇರಿಗೆ ಸಂಪರ್ಕಿಸಿ ಅರ್ಜಿ ಪಡೆದುಕೊಂಡು ಅಗತ್ಯ ದಾಖಲಾತಿಗಳೊಂದಿಗೆ ಫೆಬ್ರವರಿ 6 ರೊಳಗಾಗಿ ಅರ್ಜಿ ರೇಷ್ಮೆ ಉಪ ನಿರ್ದೇಶಕರ ಕಛೇರಿ, ಶಿವಮೊಗ್ಗ ಇಲ್ಲಿಗೆ ಸಲ್ಲಿಸಬೇಕೆಂದು ರೇಷ್ಮೆ ಉಪನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *