ಮಂಜುನಾಥ್ ಶೆಟ್ಟಿ…

ಹೆರಿಗೆಯ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲಾ ಮೆಗಾನ್ ಆಸ್ಪತ್ರೆಯಲ್ಲಿ ಜಿಲ್ಲಾ ಸರ್ಜನ್ ಆಗಿ ಮುಂಬಡ್ತಿ ಪಡೆದ ಹಿರಿಯ ವೈದ್ಯೆ ಡಾ. ಗೀತಾ ರವರಿಗೆ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣರವರು ಮಾತನಾಡಿ ಡಾಕ್ಟರ್ ಗೀತಾ ರವರು ಈ ಹಿಂದೆ ಶಿಕಾರಿಪುರದಲ್ಲಿ ಸತತ 12 ವರ್ಷಗಳ ಕಾಲ ಹೆರಿಗೆ ವಿಭಾಗದ ಡಾ. ಆಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಎಲ್ಲಾ ಸಾರ್ವಜನಿಕರ ಮತ್ತು ತಾಯಂದಿರ ಅಚ್ಚುಮೆಚ್ಚಿನ ವೈದ್ಯ ಆಗಿ ಈಗ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಜಿಲ್ಲಾ ಸರ್ಜನ್ ಆಗಿ ಮುಂಬಡ್ತಿ ಪಡೆದು ಅಧಿಕಾರ ಸ್ವೀಕರಿಸಿರುವುದು ಜಿಲ್ಲೆಯ ಅನೇಕ ಗರ್ಭಿಣಿಯರ, ತಾಯಿಯಂದಿರ ಹೆಣ್ಣುಮಕ್ಕಳಿಗೆ, ರೋಗಿಗಳಿಗೆ ಇನ್ನೂ ಉತ್ತಮ ಚಿಕಿತ್ಸೆ ಲಭಿಸಲಿದೆ. ಇವರ ಸೇವೆ ಹಾಗೆ ಮುಂದುವರೆಯಲಿ ಎಂದು ಅಭಿನಂದಿಸಿದರು.
ಶಿಕಾರಿಪುರ ತಾಲೂಕು ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿರವರು ಮಾತನಾಡಿ ಸಂಸ್ಥಾಪಕ ಅಧ್ಯಕ್ಷರಾದ ಬಿ ಗುಣರಂಜನ್ ಶೆಟ್ಟಿ ಹಾಗೂ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ರವರ ಸಲಹೆಯಂತೆ ಸಾರ್ವಜನಿಕವಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದ ಸಲಹೆಯಂತೆ ಸಂಘಟನೆ ವತಿಯಿಂದ ಸನ್ಮಾನಿಸುತ್ತಿರುವುದು ನಮಗೆ ಸಂತಸ ತಂದಿದ್ದು, ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸೇವೆಯ ಸಲ್ಲಿಸುವ ಮೂಲಕ ಡಾ. ಗೀತಾ ರವರು ದೊಡ್ಡಮಟ್ಟದ ಹುದ್ದೆಯನ್ನು ಅಲಂಕರಿಸಲಿ ಎಂದು ಸಂಘಟನೆ ಬಯಸುತ್ತದೆ ಎಂದರು.
ಅಭಿನಂದನ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾಕ್ಟರ್ ಗೀತಾ ರವರು ನಾನು ವೈದ್ಯ ವೃತ್ತಿಯನ್ನು ಪ್ರಾಮಾಣಿಕವಾಗಿ, ಇಷ್ಟಪಟ್ಟು ಮಾಡುತ್ತಿದ್ದು ಉತ್ತಮ ಸೇವೆ ಸಲ್ಲಿಸಿದರೆ ಜನ ಸರ್ಕಾರ ಗುರುತಿಸುತ್ತದೆ ಎನ್ನುವುದಕ್ಕೆ ಸಂಘ ಸಂಸ್ಥೆಗಳ ನಿಮ್ಮೆಲ್ಲರ ಈ ರೀತಿಯ ಪ್ರೋತ್ಸಾಹವು ನಮಗೆ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲು ಪುಷ್ಟಿ ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಕೆ ರಘುವೀರ್ ಸಿಂಗ್, ಶಿಕಾರಿಪುರ ತಾಲೂಕು ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿ, ನವೀನ್, ವಿಜಯ್, ಮಾ ಹೋಟೆಲ್ ಉದ್ಯಮಿ ಅಕ್ಬರ್ ಆಲಿ, ನೇಮೇಶ್ ರಿಪ್ಪನ್ ಪೇಟೆ, ತಿರುಪತಿ ವೆಂಕಟೇಶ್ ಸೇರಿದಂತೆ ಹಲವರಿದ್ದರು.