ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಶಿವಮೊಗ್ಗ ಉಪವಿಭಾಗವು ಶಿವಮೊಗ್ಗ ತಾಲೂಕಿನಲ್ಲಿ ಸ್ಥಗಿತಗೊಂಡಿದ್ದ ಅಬ್ಬಲಗೆರೆಯ ಹಿತೈಷಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿ., ಶಿವಮೊಗ್ಗ ನಗರದ ಗಾಂಧಿಬಜಾರ್ ಎಲೆರೇವಣ್ಣನ ಬೀದಿ, 4ನೇ ತಿರುವಿನಲ್ಲಿರುವ ಸಾನಿಧ್ಯ ಮಹಿಳಾ ಪತ್ತಿನ ಸೌಹಾರ್ದ ಸಹಕಾರ ನಿ., ವಿನೋಬನಗರ 60 ಅಡಿ ರಸ್ತೆ, ಎಪಿಎಂಸಿ ಹತ್ತಿರ ಸಪ್ನ ಬಿಲ್ಡಿಂಗ್‌ನಲ್ಲಿರುವ ಪ್ರಗತಿ ಸಿಟಿ ಸೌಹಾರ್ದ ಸಹಕಾರಿ ನಿ., ಸವಳಂಗ ರಸ್ತೆ, ವೆಂಕಟಪುರದ 2ನೇ ತಿರುವು, ಶ್ರೀನಿವಾಸ ನಿಲಯದ ಶಿವಮೊಗ್ಗ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ ಲಿ., ಈ 4 ಸೌಹಾರ್ದ ಸಹಕಾರಿ ಸಂಘಗಳನ್ನು ಸಮಾಪನೆ ಮಾಡಲು ಕ್ರಮಕೈಗೊಂಡಿದೆ.


ಈ ಬಗ್ಗೆ ಸಹಕಾರ ಸಂಘಗಳಿಂದ ಅಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಫೆ. 24 ರೊಳಗಾಗಿ ಸಲ್ಲಿಸುವಂತೆ ಶಿವಮೊಗ್ಗ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Leave a Reply

Your email address will not be published. Required fields are marked *