ಮಂಜುನಾಥ್ ಶೆಟ್ಟಿ…
ಯಕ್ಷದ್ರುವ ಪಟ್ಲ ಫೌಂಡೇಶನ್ ವತಿಯಿಂದ ಕೆಲವು ವರ್ಷದಿಂದ ರಾಜ್ಯ ದೇಶ ಮತ್ತು ವಿದೇಶದಲ್ಲಿ ವಿಶೇಷ ವಿನೂತನ ಯಕ್ಷಗಾನ ಕಾರ್ಯಕ್ರಮ ನಡೆಯುತ್ತಾ ಬರುತ್ತಿದೆ.
ಪಟ್ಲ ಸತೀಶ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ದೇಶ ಮತ್ತು ವಿದೇಶದಲ್ಲಿ ವಿಶೇಷ ಕಾರ್ಯಕ್ರಮ ನಡೆದಿದೆ.
ಅದೇ ರೀತಿ ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಫೆಬ್ರವರಿ 14ರಂದು ಬೆಳಗ್ಗೆ 9:00 ರಿಂದ ರಾತ್ರಿ 8:30ರ ತನಕ ವಿಶೇಷ ಯಕ್ಷಗಾನ ನಡೆಯಲಿದೆ.
ಹೊಸನಗರದ ಗಾಯತ್ರಿ ಮಂದಿರದಲ್ಲಿ ಪಟ್ಲ ಫೌಂಡೇಶನ್ ನಿಂದ ಶಿಕ್ಷಣ ಪಡೆದ 30 ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಸಂಗ ನಡೆಯಲಿದೆ.
ವಿಶೇಷ ಯಕ್ಷಗಾನದಲ್ಲಿ 700 ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಏಕಕಾಲದಲ್ಲಿ ಮೂರು ರಂಗಸ್ಥಳದಲ್ಲಿ ಯಕ್ಷಗಾನ ಪ್ರಸಂಗ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಸಮಸ್ತ ಯಕ್ಷಗಾನ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಪಟ್ಲ ಸತೀಶ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಗರ ರಾಘವೇಂದ್ರ
9449494324
9353593764
ವಿಶೇಷ ಸೂಚನೆ…
ಎಲ್ಲರಿಗೂ ಉಚಿತ ಪ್ರವೇಶ ಉಚಿತ ಮನೋರಂಜನೆ.