ಮಂಜುನಾಥ್ ಶೆಟ್ಟಿ…
ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ 60 ಅಡಿ ರಸ್ತೆ ವಿನೋಬನಗರ 16 ಕ್ರಾಸ್ ನ ರಸ್ತೆಯಲ್ಲಿ ಮಹಿಳೆಯು ನಡೆದುಕೊಂಡು ಹೋಗುವಾಗ ಅಪರಿಚಿತ ವ್ಯೆಕ್ತಿ ಹಿಂಬದಿಯಿಂದ ಬಂದು ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ತಳ್ಳಿ ಸ್ವಲ್ಪ ದೂರದಲ್ಲಿ ಬೈಕ್ ಸ್ಟಾಟ್ ಮಾಡಿಕೊಂಡು ಕಾಯುತ್ತಿದ್ದ ವ್ಯೆಕ್ತಿಯ ಬೈಕ್ ಹತ್ತಿಕೊಂಡು ಹೋಗಿದ್ದು.
ಈ ಬಗ್ಗೆ ಪಿರ್ಯಾದುದಾರರಾದ ಶ್ರೀಮತಿ ಹೊನ್ನಮ್ಮ ರವರು ದೂರು ನೀಡಿದ ಮೇರೆಗೆ ವಿನೋಬನಗರ ಪೊಲೀಸ್ ಠಾಣೆ ಸಿ ಆರ್ ನಂ 265/2025 ಕಲಂ 309(4) ಬಿಎನ್ ಎಸ್ 2023 ರೀತ್ಯಾ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.ಈ ಮೇಲ್ಕಂಡ ಪ್ರಕರಣದಲ್ಲಿ ಕಿತ್ತುಕೊಂಡು ಹೋದ ಬಂಗಾರದ ಮಾಂಗಲ್ಯ ಸರ ಮತ್ತು ಆರೋಪಿತರನ್ನು ಪತ್ತೆ ಮಾಡಲು ಶ್ರೀ ನಿಖಿಲ್ ಬಿ. ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ , ಶ್ರೀ ಕಾರಿಯಪ್ಪ. ಎ.ಜಿ ಕೆ.ಎಸ್.ಪಿ.ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಶ್ರೀ ರಮೇಶ್ ಕೆ.ಎಸ್.ಪಿ.ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-02 ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಶ್ರೀ ಸಂಜೀವ್ ಕುಮಾರ್ ಟಿ ಡಿ.ವೈ.ಎಸ್.ಪಿ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ಶ್ರೀ ಸಂತೋಷಕುಮಾರ್ ಡಿ.ಕೆ ಪೊಲೀಸ್ ನೀರಿಕ್ಷಕರು ವಿನೋಬನಗರ ಪೊಲೀಸ್ ಠಾಣೆ ರವರ ಉಸ್ತುವಾರಿಯಲ್ಲಿ ಶ್ರೀ ತಿರುಮಲೇಶ್ ಜಿ ಪಿಎಸ್ಐ ಮತ್ತು ಸಿಬ್ಬಂದಿಗಳಾದ ಶ್ರೀ ರಾಜು ಕೆ ಆರ್ ಸಿಪಿಸಿ, ಶ್ರೀ ಚಂದ್ರಾನಾಯ್ಕ ಬಿ ಸಿಪಿಸಿ, ಶ್ರೀ ಮಲ್ಲಪ್ಪ ಎಸ್ ಜಿ ಸಿಪಿಸಿ 1174, ಅರುಣಕುಮಾರ್ ಎನ್ ಕೆ ಸಿಪಿಸಿ 1543, ಶ್ರೀ ಮನುಶಂಕರ ಸಿಪಿಸಿ 1556, ರವರ ತಂಡ ರಚಿಸಿದ್ದು, ಸದರಿಯವರು ಆರೋಪಿತರಾದ ಪತ್ತೆಯಲ್ಲಿದ್ದಾಗ ಮಾಹಿತಿ ಸಂಗ್ರಹಿಸಿ ಮೇಲ್ಕಂಡ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತನಾದ 1. ಅರಸು @ ವಲ್ಲರಸು ಆರ್ 25 ವರ್ಷ, ಕೊಯಮತ್ತೂರು ವಾಸ ನಂ 199, ಉತ್ತರ ಈ.ಬಿ. ಬೀದಿ ಸೋಮಾಸಿಪಡಿ ಗ್ರಾಮ ತಿರುವಣಮಲೈ ತಾಲ್ಲೂಕ್ ಮತ್ತು ಜಿಲ್ಲೆ ತಮಿಳುನಾಡು ರಾಜ್ಯ 2. ಕಾಲು @ ಇಬ್ರಾಹಿಂ ಪಾಶಾ @ ಇಬ್ರಾಹಿಂ ಬಾಶಾ, ಗೋರಿ ಪಾಳ್ಯ 1ನೇ ಕ್ರಾಸ್ ಜೆ.ಜೆ.ಆರ್ ನಗರ ಪಾದರಾಯಪುರ ಗುಡ್ಡದಹಳ್ಳಿ ಹತ್ತಿರ ಬೆಂಗಳೂರು 3. ಕೇಶವನ್ 43 ವರ್ಷ ಸೇಲಂ ತಾಲ್ಲೂಕ್ ಮತ್ತು ಜಿಲ್ಲೆ ತಮಿಳುನಾಡು 4. ಸತೀಶ್ ಕುಮಾರ್ 40 ವರ್ಷ ಈಡಿಗ ಜಾತಿ ಡ್ರೈವರ್ ಕೆಲಸ ವಾಸ ತರಕಾರಿ ಮಾರುಕಟ್ಟೆ ಹತ್ತಿರ ಬತ್ತಲಪಲ್ಲಿ ಹೊಸೂರು ತಮಿಳುನಾಡು ರಾಜ್ಯ ಹಾಲಿ ವಾಸ ಎಡವನಹಳ್ಳಿ ಅತ್ತಿಬೆಲೆ ಬೆಂಗಳೂರು ಇವರುಗಳನ್ನು ವಶಕ್ಕೆ ಪಡೆದುಕೊಂಡು ವಲ್ಲರಸು ಮತ್ತು ಇಬ್ರಾಹಿಂ ಪಾಶಾ ಆರೋಪಿತರ ಕಡೆಯಿಂದ 40 ಗ್ರಾಂ ತೂಕದ ಬಂಗಾರದ ಗಟ್ಟಿ ಬಂಗಾರ ಅದರ ಬೆಲೆ 4,80,000/- ರೂ ಗಳು ಇದು ವಿನೋಬನಗರ ಠಾಣೆ ಸಿ ಆರ್ ನಂ 265/2025 ಕಲಂ 309(4) ಬಿಎನ್ಎಸ್ ಕೇಸಿಗೆ ಸಂಬಧಿಸಿದ್ದು, ಕೃತ್ಯಕ್ಕೆ ಉಪಯೋಗಿಸಿದ ಟಿಎನ್ 90 ಎಲ್ 6618 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ಎನ್ 250 ಬೈಕ್ ಅದರ ಬೆಲೆ 1,50,000/- ರೂ ಗಳು ಮತ್ತು ಎ3. ಕೇಶವನ್ ಆರೋಪಿತನ ಕಡೆಯಿಂದ 70 ಗ್ರಾಂ ತೂಕದ ಮಾಂಗಲ್ಯ ಸರ ಅದರ ಬೆಲೆ 8,50,000/- ರೂ ಗಳು ಇದು ಮೈಸೂರು ಪಿರಿಯಾಪಟ್ಟಣ ಠಾಣೆ ಸಿ ಆರ್ ನಂ 243/2025 ಕಲಂ 309(4) ಬಿಎನ್ಎಸ್ ಕೇಸಿಗೆ ಸಂಬಂಧಿಸಿದ್ದು ಹಾಗೂ 60 ಗ್ರಾಂ ತೂಕದ ಬಂಗಾರದ ಆಭರಣಗಳು ಅದರ ಬೆಲೆ 10,20,000/- ರೂ ಇವು ವಿನೋಬನಗರ ಠಾಣೆ ಸಿ ಆರ್ ನಂ 197/2022 ಕಲಂ 380 ಐಪಿಸಿ ಕೇಸಿಗೆ ಸಂಬಂಧಿಸಿದ್ದವುಗಳನ್ನು ವಶಪಡಿಸಿ ಕೊಳ್ಳಲಾಗಿರುತ್ತದೆ.
ಒಟ್ಟು ಅಂದಾಜು ಮೌಲ್ಯ 25,00,000/- ರೂ ಗಳಾಗಿರುತ್ತವೆ. ಈ ಪತ್ತೆ ಕಾರ್ಯವನ್ನು ಶಿವಮೊಗ್ಗ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ನಿಖಿಲ್ ಬಿ. ಐ.ಪಿ.ಎಸ್ ರವರು ಶ್ಲಾಘೀಸಿರುತ್ತಾರೆ.