ಮಂಜುನಾಥ್ ಶೆಟ್ಟಿ…

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಮತ್ತು ಇತರ ಮರಾಠ ಸಂಘಟನೆಗಳ ಹಾಗೂ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಆಶ್ರಯದಲ್ಲಿ ಫೆಬ್ರವರಿ 19ರಂದು ಬೆಳಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 399 ನೇ ಜಯಂತೋತ್ಸವವನ್ನು ಅಳಗಿಸಲಾಗಿದೆ ಎಂದು ಮರಾಠ ಟ್ರಸ್ಟ್ ನ ಉಪಾಧ್ಯಕ್ಷ ರಮೇಶ್ ಬಾಬು ಜಾದವ್ ಹೇಳಿದರು.


ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರು ಸರ್ವಶ್ರೇಷ್ಠ ರಾಜರಾಗಿದ್ದರು. ದೈವ ಭಕ್ತಿ ದೇಶಭಕ್ತಿ ಆಚಾರ ಶೀಲ ವಿಚಾರ ಶೀಲ ನ್ಯಾಯಶೀಲ ಮುಂತಾದವುಗಳಿಗೆ ಅವರು ಪ್ರಸಿದ್ಧರಾಗಿದ್ದಾರೆ. ಸಮರ್ಥ ಆಡಳಿತ ನಡೆಸಿದವರು ಇಂತವರ ಜಯಂತಿಯನ್ನು ನಡೆಸುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ.

ಜಿಲ್ಲಾಡಳಿತ ಸಹಕಾರದಲ್ಲಿ ನಡೆಯುವ ಈ ಉತ್ಸವಕ್ಕೆ ಮರಾಠ ಪರಿಷತ್ ಮರಾಠ ಟ್ರಸ್ಟ್ ಮರಾಠ ಮಹಿಳಾ ಮಂಡಳಿ, ಮರಾಠ ಪತ್ತಿನ ಸಹಕಾರ ಸಂಘ ಸೇರಿದಂತೆ ಸಮಾಜದ ಎಲ್ಲಾ ಉಪ ಪಂಗಡಗಳು ಇದರಲ್ಲಿ ಭಾಗವಹಿಸುತ್ತವೆ ಎಂದರು.
ಕಾರ್ಯಕ್ರಮವನ್ನು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ವಿಶೇಷ ಆಹ್ವಾನನಿತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವರಾಜ್ ಸಂಗಪ್ಪ ಭಾಗವಹಿಸುವರು ಎಂದರು.

ಸಂಸದ ಬಿ ವೈ ರಾಘವೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ವಿಧಾನಪರಿಸ್ ಸದಸ್ಯರು ನಿಗಮ ಮಂಡಳಿ ಅಧ್ಯಕ್ಷರು ಜನಪ್ರತಿನಿಧಿಗಳು ಸಮಾಜದ ಮುಖಂಡರು ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಂದ್ರರಾವ್ ಸಿದ್ದೋಜಿ ರಾವ್ ಜಾದವ್ ದಿನೇಶ್ ರಾವ್ ಚೌಹಾಣ್ ಸುರೇಶ್ ಬಾಬು ರಘುನಾಥ್ ಬಾಮನೆ ರಾಜಕುಮಾರ್ ಜಗತ್ತಾಪ ತುಕಾರಾಂ ಮನೆ ರಮೇಶ್ ರಾಕೇಶ್ ಮೊರೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *