ಚಂದ್ರಗುತ್ತಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಬಗರ್ ಹುಕುಂ, ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ಡಾಂಬರೀಕರಣ, ಭೂ ದಾಖಲೆಗಳ ತಿದ್ದುಪಡಿ, ಮೆಸ್ಕಾಂ ಇಲಾಖೆ ಸೇರಿದಂತೆ
65ಕ್ಕೂ ಹೆಚ್ಚು ಅರ್ಜಿಗಳನ್ನು ಸಾರ್ಜನಿಕರಿಂದ ಸ್ವೀಕರಿಸಿ, ಸ್ಥಳದಲ್ಲೇ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಗುಡ್ಡೆಕೊಪ್ಪದ ಗ್ರಾಮಸ್ಥರು, ೨೦೨೧ ರಿಂದ ಸರ್ವೇ ಕಾರ್ಯ ಆಗಿಲ್ಲವೆಂದು, ಚಂದ್ರಗುತ್ತಿಯಲ್ಲಿ ಸಮಗ್ರ ವಿದ್ಯುತ್ ಪೂರೈಕೆ ಆಗುತ್ತಿಲ್ಲವೆಂದು ಅರ್ಜಿ ನೀಡಿದರು.
ತ್ಯಾವರೆತಪ್ಪ ಗ್ರಾಮದಲ್ಲಿ ಸ್ಮಶಾನ ಜಾಗದಲ್ಲಿ ಕಲ್ಲುಕ್ವಾರಿ ಚಟುವಟಿಕೆ ನಡೆಯುತ್ತಿದ್ದು ಅದನ್ನು ತೆರವುಗೊಳಿಸಬೇಕೆಂದು ಹಾಗೂ ಗ್ರಾಮದ ಕೆಲವರು ತಮಗೆ ಪಡಿತರ ಚೀಟಿಗಳನ್ನು ಕೊಡಿಸುವಂತೆ ಮನವಿ ಮಾಡಿದರು.
ಪುರದೂರು ಗ್ರಾಮದ ಪ್ರವಾಹದ ಸಂತ್ರಸ್ತರು ಸೂಕ್ತ ದಾಖಲೆಗಳನ್ನು ನೀಡಿರಿ, ಮನೆಗಳನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.