ಮಂಜುನಾಥ್ ಶೆಟ್ಟಿ…

ಶಿವಮೊಗ್ಗದ ರವೀಂದ್ರ ನಗರ
ಗಣಪತಿ ದೇವಾಲಯದಲ್ಲಿ ಶುಕ್ರವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜನ್ಮದಿನಾಚರಣೆ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಲಾಯಿತು.


ಈ ಸಂದರ್ಭದಲ್ಲಿ ಬಿಳಿಕಿ ಮಠದ ಶ್ರೀಗಳಾದ ರಾಯಚೋಟೇಶ್ವರ ಸ್ವಾಮೀಜಿ, ಪ್ರತ್ಯಂಗಿರಾ ದೇವಾಲಯದ ಗುರುಗಳಾದ ಸುಪ್ರೀತ್ ಗುರೂಜಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್ , ರುದ್ರೇಗೌಡ, ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ, ಸೂಡ ಮಾಜಿ ಅಧ್ಯಕ್ಷರಾದ ಎಸ್ಎ. ದತ್ತಾತ್ರಿ, ಸ್.ಎಸ್ ಅರುಣ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಎಸ್. ಎಸ್. ಜ್ಯೋತಿ ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಜಗದೀಶ್, ನಾಗರಾಜ್, ಬಿಎಸ್ ವೈ ಅಭಿಮಾನಿ ಬಳಗದ ಸಂಚಾಲಕರಾದ ಬಳ್ಳೇಕೆರೆ ಸಂತೋಷ್, ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್, ಮಾಲತೇಶ್, ವೀರಭದ್ರಪ್ಪ ಪೂಜಾರ್, ರಾಜು ತಲ್ಲೂರ್, ಜಿ. ವಿಜಯ್ ಕುಮಾರ್, ಅಣ್ಣಪ್ಪ, ಸುರೇಖಾ ಮುರಳಿಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *