ಮಂಜುನಾಥ್ ಶೆಟ್ಟಿ…

ಶಿವಮೊಗ್ಗದ ಸಿಂಹ ಧಾಮದಲ್ಲಿ ಪಶುವೈದ್ಯ ಸಮೀಕ್ಷ ರೆಡ್ಡಿ ಮೃತಪಟ್ಟಿರುವುದು ಅರಣ್ಯ ಇಲಾಖೆಯ ನಿರ್ಲಕ್ಷದಿಂದಾಗಿ ಹಾಗಾಗಿ ಇಡೀ ಮತ್ತು ಅಲ್ಲಿನ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಇಂದು ಜಿಲ್ಲಾಧಿಕಾರಿ ಗಳಿಗೆ ಮನವಿ ನೀಡಿದರು.

ಸಫಾರಿಯಲ್ಲಿ ಗರ್ಭದರಿಸಿದ ನೀರು ಕುದುರೆಗೆ ಚಿಕಿತ್ಸೆ ನೀಡಲು ಮುಂದಾಗಿದ್ದ ಸಮೀಕ್ಷಾ ರೆಡ್ಡಿಯ ಮೇಲೆ ಏಕಾಏಕಿ ಆಕ್ರಮಣ ಮಾಡಿದ ಕಾರಣ ಮೃತಪಟ್ಟಿರುತ್ತಾರೆ ಎಂದು ಅಲ್ಲಿನ ಹಿರಿಯ ಕಾರ್ಯನಿರ್ವಹಣಾಧಿಕಾರಿ ಅಮರಕ್ಷರ್ ಅವರು ತಿಳಿಸಿರುತ್ತಾರೆ.

ಆದರೆ ಸಾವಿಗೆ ಅಸಲಿ ಕಾರಣವಾದರೂ ಏನು? ಇವರು ಸಾಮಾನ್ಯವಾಗಿ ಚಿಕಿತ್ಸೆ ನೀಡುವಾಗ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಎಸ್ ಓ ಪಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದ್ಯಾವುದೋ ಇಲ್ಲಿ ನಡೆದಿಲ್ಲ ಎಂಬುದು ಸ್ಪಷ್ಟವಾಗಲಿದೆ. ಎಸ್ ಒಪಿ ನಿಯಮಗಳ ಪ್ರಕಾರ ರಾತ್ರಿ ವೇಳೆ ಯಾವುದೇ ಕಾರಣಕ್ಕೂ ಸಫಾರಿಯಲ್ಲಿ ಪ್ರಾಣಿಗಳಿಗೆ ಚಿಕಿತ್ಸೆ ನೀಡಬಾರದು. ಒಂದು ವೇಳೆ ನೀಡಿದರು. ಸಹ ಅರವಳಿಕೆ ಚುಚ್ಚುಮದ್ದನ್ನು ನೀಡಬೇಕು. ಜೊತೆಗೆ ಒಂದಿಷ್ಟು ಜನ ಸಿಬ್ಬಂದಿಗಳು ಇರಬೇಕು ಪಟಾಕಿ ಇರಬೇಕು. ಅಥವಾ ತಜ್ಞ ವೈದ್ಯರು ಇರಬೇಕು ಎಂಬ ನಿಯಮಗಳು ಇದ್ದರೂ ಇದ್ಯಾವುದೋ ಇಲ್ಲದೆ ಇದರ ಚಿಕಿತ್ಸೆ ನೀಡಲು ನೀರು ಕುದುರೆ ಬಳಿ ವೈದ್ಯರನ್ನ ಇಳಿಸಿರುವುದು ಎಷ್ಟು ಸರಿ? ಎಂದು ಸಂಘಟನೆ ಪ್ರಶ್ನಿಸಿದೆ.

ಒಂದು ವೇಳೆ ಸಮೀಕ್ಷ ರೆಡ್ಡಿ ರವರ ಸಾವಿಗೆ ಕಾರಣರಾದ ಇವರನ್ನು ಕೂಡಲೆ ಸೇವೆಯಿಂದ ವಜಗೊಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಡಿಸಿ ಕಚೇರಿಯ ಬಾಗಿಲಲ್ಲೇ ಅಹೋ ರಾತ್ರಿ ಧರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಂಜು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *