ಮಂಜುನಾಥ್ ಶೆಟ್ಟಿ…

ಅಹಂಕಾರದಿಂದ ದೂರವಿರಬೇಕು : ಸ್ವಾಮೀಜಿ
ಶಿವಮೊಗ್ಗ : ಬ್ರಹ್ಮ ಪದವಿಯನೊಲ್ಲೆ, ವಿಷ್ಣು ಪದವಿಯನೊಲ್ಲೆ, ರುದ್ರ ಪದವಿಯನೊಲ್ಲೆ, ಮತ್ತಾವ ಪದವಿಯನೊಲ್ಲೆನಯ್ಯ.ಎಲ್ಲಾ ಪದವಿಗಳಿಗಿಂತ, ಗುರುಗಳ ಆಶೀರ್ವಾದ ಸಿಗುವುದು ಮಹತ್ವದ ಪದವಿ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಎಂದರು.

ಕುವೆಂಪು ರಂಗಮಂದಿರದಲ್ಲಿ ಅಯೋಜಿಸಿದ್ದ ದೀನಬಂಧು ಸೇವಾ ಟ್ರಸ್ಟ್ ಬೆಳ್ಳಿ ಹಬ್ಬದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಕೊಡುಗೈ ದಾನಿ-ನಾವಲ್ಲ ಅದನ್ನು ಭಗವಂತದ ಅನುಗ್ರಹವೆಂದು ಗ್ರಹಿಸಬೇಕು. ಭಗವಂತ ಕೊಟ್ಟಿರುವುದನ್ನು ನಾವು ಬಡವರಿಗೆ ಹಂಚಬೇಕು. ಇದೇ ಸೇವೆಯಲ್ಲಿ ನಿರತರಾಗಿರುವ ಜಿ. ಶಂಕರ್ ಸೇವೆ ಮುಂದುವರಿಯಲಿ ಎಂದರು.

ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ, ಮದ್ಯದಲ್ಲಿ ಏನು ಮಾಡುತ್ತಾನೆ ಎನ್ನುವುದರಿಂದ ವ್ಯಕ್ತಿಯ ನೈತಿಕತೆ ತಿಳಿಯುತ್ತದೆ. ೨೫ ವರ್ಷಗಳಿಂದ ಅವರು ಸೇವೆ ಮಾಡಿಕೊಂಡು ಬಂದಿದ್ದಾರೆ, ಈ ಸೇವೆಯ ಪಥವು ಮುಂದುವರಿಯಲಿ ಎಂದರು.


ನಾನು ಎಂಬ ಅಹಂಕಾರದಿಂದ ದೂರವಿರಬೇಕು. ಯುದ್ಧ, ಕಾರ್ಮೋಡ ಎಲ್ಲೆಡೆ ಕಾಣಿಸುತ್ತಿದೆ. ‘ನಾನು ದೊಡ್ಡವನು’ ಎಂದು ಯೋಚಿಸುವ ಅಹಂಕಾರವೇ ಈ ಪರಿಸ್ಥಿತಿಯನ್ನು ನಿರ್ಮಿಸಿದೆ. ಯಾರಿಗೆ ಕೊಲೆ ಮಾಡಿದವರು ಕೊನೆತನಕ ಉಳಿಯುತ್ತಾರೋ? ಎಂಬ ಜ್ಞಾನವೇ ಇಲ್ಲದಂತಾಗಿದೆ ಎಂದರು.
ನಾವು ತಾಳ್ಮೆಯಿಂದ, ವಿನಯದಿಂದ, ಒಳ್ಳೆಯ ಕಾರ್ಯಗಳನ್ನು ನಿರಂತರವಾಗಿ ಮಾಡೋಣ. ಸೇವೆ, ಧೈರ್ಯ ಮತ್ತು ಸಹಕಾರವೇ ನಿಜವಾದ ಶಕ್ತಿ.” ಎಂದರು.


ಪ್ರಾಸ್ತಾವಿಕ ಪ್ರಶಾಂತ ನಾಯ್ಕ ಮಾತನಾಡುತ್ತಾ ಸಮಾಜ ಸೇವೆ ಸಂಸ್ಥೆ ‘ಸೇವಾ’ಯಲ್ಲಿ ಬೆಳ್ಳಿ ಸಂಭ್ರಮವನ್ನು ಆಚರಿಸುತ್ತಿರುವುದು ನಿಜಕ್ಕೂ ಸಾರ್ಥಕ ಕ್ಷಣವಾಗಿದೆ. ಈ ಸಂದರ್ಭದಲ್ಲಿ ಶಂಕರ ಅವರಂತಹ ಮಹನೀಯ ವ್ಯಕ್ತಿಯನ್ನು ಸನ್ಮಾನಿಸುವ ಅವಕಾಶ ದೊರೆತಿರುವುದು ನಮಗೆ ದೊಡ್ಡ ಗೌರವ ಎಂದರು.
ಪ್ರಕೃತಿಯೇ ಈ ಅವಕಾಶವನ್ನು ನೀಡಿದಂತೆ ಅನ್ನಿಸುತ್ತದೆ. ಹಲವು ತಲ್ಲಣಗಳು, ಸವಾಲುಗಳ ನಡುವೆಯೂ ಅವರು ಸಮಾಜ ಸೇವೆಯಲ್ಲಿ ತೊಡಗಿ, ಜನರ ಬದುಕಿಗೆ ಬೆಳಕು ನೀಡುತ್ತಿರುವುದು ಪ್ರೇರಣಾದಾಯಕ. ೨೫ ವರ್ಷಗಳ ಸೇವಾ ಪಯಣವೆಂದರೆ ಒಂದು ದೊಡ್ಡ ಜವಾಬ್ದಾರಿ; ಇದು ೫೦ ವರ್ಷಗಳ ಸಂಭ್ರಮದತ್ತ ಸಾಗುವ ಮಹತ್ವದ ಹೆಜ್ಜೆಯಾಗಿದೆ ಎಂದರು.


ಸಣ್ಣ ಸಣ್ಣ ಸಹಾಯಗಳಿಂದ ಆರಂಭಿಸಿ, ಆಸ್ಪತ್ರೆಗಳಿಗೆ ಜಾಗ ಒದಗಿಸುವುದರಿಂದ ಹಿಡಿದು ಅನೇಕ ಜನರಿಗೆ ನೆರವಾಗುವ ಕೆಲಸಗಳನ್ನು ಮಾಡಿದರೂ “ನಾನು ಏನೂ ಮಾಡಿಲ್ಲ” ಎಂದು ವಿನಮ್ರವಾಗಿ ಹೇಳುವ ಶಂಕರ ಅವರ ವ್ಯಕ್ತಿತ್ವವೇ ಅವರ ಮಹತ್ವವನ್ನು ತೋರಿಸುತ್ತದೆ. ದಿನಬಂದುಗಳನ್ನು ಗುರುತಿಸಿ ನೆರವಾಗಿರುವುದು ಅವರ ಅತ್ಯುತ್ತಮ ಸಾಧನೆ ಎಂದು ಹೇಳಿದರು.


ಮನುಷ್ಯತ್ವವೇ ನಮ್ಮ ಸಂಸ್ಕೃತಿ ಎಂಬ ಸಂದೇಶವನ್ನು ಅವರು ತಮ್ಮ ಬದುಕಿನ ಮೂಲಕ ಸಾರುತ್ತಿದ್ದಾರೆ. ಕರ್ನಾಟಕದ ಪುಣ್ಯಕೋಟಿ ನೆಲದಲ್ಲಿ ಇಂತಹ ಮಹನೀಯರು ಹುಟ್ಟಿರುವುದು ನಮ್ಮ ಹೆಮ್ಮೆ ಎಂದು.
ಸನ್ಮಾನಿಸಿ ಸ್ವೀಕರಿಸಿ ಡಿ.ಹೆಚ್.ಶಂಕರಮೂರ್ತಿ ಮಾತನಾಡುತ್ತಾ ಒಂದು ಅದ್ಭುತ ಕಾರ್ಯ ಅಥವಾ ಕಾರ್ಯಕ್ರಮವೆಂದರೆ ಕೇವಲ ಸನ್ಮಾನ ಮಾತ್ರವಲ್ಲ. ನಿಜವಾದ ಕಾರ್ಯವೆಂದರೆ ಸಮಾಜದ ಒಳ್ಳೆಯದಿಗಾಗಿ ನಾವು ಒಟ್ಟಾಗಿ ಕೈಜೋಡಿಸುವುದು ಎಂದರು.


ಇಂದು ಭಾರತ ಎದುರಿಸುತ್ತಿರುವ ಸವಾಲುಗಳು, ಯುದ್ಧದ ಪರಿಣಾಮಗಳು ನಮ್ಮ ಮೇಲೂ ಬೀಳುತ್ತಿವೆ. ಈ ಪರಿಸ್ಥಿತಿಯಲ್ಲಿ ನಾವು ಪ್ರತ್ಯೇಕವಾಗಿ ನಿಲ್ಲದೇ, ಎಲ್ಲರೂ ಒಂದಾಗಿ ನಿಲ್ಲಬೇಕು ಎಂದರು.
ಈ ಸಂಕಷ್ಟವನ್ನು ನಾವು ಒಗ್ಗಟ್ಟಿನಿಂದ ಎದುರಿಸೋಣ. ಪರಸ್ಪರ ಸಹಕಾರದಿಂದ, ಧೈರ್ಯದಿಂದ ಮುಂದೆ ಸಾಗೋಣ. ದೇಶದ ಒಳಿತಿಗಾಗಿ ನಾವು ಪ್ರತಿಯೊಬ್ಬರೂ ನಮ್ಮ ಪಾತ್ರವನ್ನು ನಿಭಾಯಿಸೋಣ ಎಂದರು.


ಧಿನಬಂದ ಪ್ರಶಸ್ತಿ ಪಡೆದ ಜಿ. ಶಂಕರ ಮಾತನಾಡುತ್ತಾ ‘ಕನ್ನಡನಾಡು ಕಂಡ ಶ್ರೇಷ್ಠ ಕವಿ ಕುವೆಂಪು ಅವರ ಹೆಸರಿನ ರಂಗಮಂದಿರದಲ್ಲಿ ಸನ್ಮಾನ ಸ್ವೀಕರಿಸುವುದು ನನ್ನ ಭಾಗ್ಯವೆಂದು ನಾನು ಭಾವಿಸುತ್ತೇನೆ ಎಂದರು.ಸಮಾಜಕ್ಕೆ ಸೇವೆ ಮಾಡುವ ಅವಕಾಶ ದೊರೆತಿರುವುದೇ ನನ್ನ ಜೀವನದ ದೊಡ್ಡ ಭಾಗ್ಯ. ನಾನು ಮಾಡಿದ ಸೇವೆಗಿಂತ, ನನಗೆ ಸಿಕ್ಕಿರುವ ಈ ಅವಕಾಶವೇ ಹೆಚ್ಚು ಮಹತ್ವದ್ದು ಎಂದರು.
ಸರ್ಜಿ ರವರಿಗೆ ೫ ಡಯಾಲಿಸಿಸ್ ಮಿಷನ್ ಉಚಿತವಾಗಿ ಕೊಡಿಸುತ್ತಾನೆ, ಡಯಾಲಿಸಿಸ್ ಚಿಕಿತ್ಸೆಯನ್ನು ಪಡೆಯಬೇಕಾದ ಅನೇಕ ಬಡವರು ಇರುವರು. ಅವರಿಗೆ ಸಾಧ್ಯವಾದಷ್ಟು ಕಡಿಮೆ ಶುಲ್ಕದಲ್ಲಿ ಉತ್ತಮ ಸೇವೆ ನೀಡಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು
ಸೇವೆ ಎಂಬುದು ಕೇವಲ ಕರ್ತವ್ಯವಲ್ಲ, ಅದು ನಮ್ಮ ಮಾನವೀಯತೆಯ ಪ್ರತಿಬಿಂಬ. ನಾವು ಎಲ್ಲರೂ ಕೈಜೋಡಿಸಿ, ಇನ್ನಷ್ಟು ಜನರಿಗೆ ನೆರವಾಗೋಣ ಎಂದರು.


ವಿನಯ್ ಗುರೂಜಿ ಮಾತನಾಡುತ್ತಾ “ಜಿ. ಶಂಕರ ಅವರಿಗೆ ಸನ್ಮಾನ ಮಾಡುತ್ತಿರುವ ಈ ಕ್ಷಣ ನನಗೆ ತುಂಬಾ ಸಂತೋಷವನ್ನು ನೀಡುತ್ತಿದೆ ಎಂದರು.
ಜಗತ್ತಿನ ಎಲ್ಲವನ್ನೂ ಹೊಂದಿದ್ದರೂ ‘ನನಗೆ ಏನೂ ಆಗಿಲ್ಲ’ ಎನ್ನುವ ನಿರಹಂಕಾರ ಭಾವನೆ ಶಿವನಲ್ಲಿ ಇದೆ. ಅದೇ ಗುಣ ಜಿ. ಶಂಕರ ಅವರಲ್ಲಿಯೂ ಕಾಣಿಸುತ್ತದೆ ಎಂದರು.
ಕರಾವಳಿಯಿಂದ ಉಪ್ಪು ಬರುವಂತೆ, ತಮ್ಮ ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿ, ಇತರರ ಕಷ್ಟ ನಿವಾರಿಸಲು ಸದಾ ಸಿದ್ಧರಾಗಿರುವ ವ್ಯಕ್ತಿ ಶಂಕರರು ಎಂದು ಹೇಳಿದರು.
‘ಸಿಂಪ್ಲಿಸಿಟಿ’ ಎನ್ನುವುದು ಕೇವಲ ಭಾಷಣವಾಗಬಾರದು; ಅದು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯ. ಶಂಕರರು ಅದನ್ನು ತಮ್ಮ ಜೀವನದಲ್ಲಿ ತೋರಿಸಿದ್ದಾರೆ ಎಂದರು.


ಇವರಿಗೆ ರಾಜಕೀಯ, ಆರ್ಥಿಕ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದರು. ಬಸವಣ್ಣನವರ ಸಂದೇಶವನ್ನು ಮನೆಮನೆಗೆ ತಲುಪಿಸಿದ ಸಾಣೇಹಳ್ಳಿ ಸ್ವಾಮೀಜಿ, ಜ್ಞಾನಜ್ಯೋತಿಯನ್ನು ಬೆಳಗಿಸಿದ ಪ್ರಸನ್ನ ಸ್ವಾಮೀಜಿ, ಹಾಗೂ ಆದಿಚುಂಚನಗಿರಿ ಮಠದಂತಹ ದೊಡ್ಡ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಅಪಾರ ಕೊಡುಗೆ ನೀಡಿವೆ ಎಂದರು.


ಶ್ರೀಕಾಂತ್ ಮಂಜುನಾಥ್ ಗೌಡ ಅವರಂತಹವರು ರಾಜಕೀಯವನ್ನು ನಾಟಕವನ್ನಾಗಿಸದೆ, ಸೇವೆಯಾಗಿ ಕಾಣುವ ನಾಯಕರು.‘ಟ್ರಸ್ಟ್’ ಎಂದರೆ ನಂಬಿಕೆ. ಅದೇ ರೀತಿಯಲ್ಲಿ ಧೀನಬಂಧ ಟ್ರಸ್ಟ್ ಎಲ್ಲಾ ಧರ್ಮದ ಜನರನ್ನು ಒಂದಾಗಿಸುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದರು.
ಪ್ರಸನ್ನ ಸ್ವಾಮೀಜಿ ಮಾತನಾಡುತ್ತಾ “ಇದು ಒಂದು ಪವಿತ್ರ ಕಾರ್ಯಕ್ರಮ. ರಮೇಶ್ ಅವರ ವಿಶೇಷ ಪ್ರಯತ್ನದಿಂದ ದೀನಬಂಧು ಸೇವಾ ಟ್ರಸ್ಟ್ ಆರಂಭದಿಂದಲೇ ಉತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದರು.


ಈ ಬೆಳ್ಳಿ ಹಬ್ಬವು ಚಿನ್ನದ ಹಬ್ಬವಾಗಲಿ, ಮುಂದಕ್ಕೆ ವಜ್ರ ಹಬ್ಬವಾಗಿ ಶತಮಾನೋತ್ಸವವನ್ನು ಆಚರಿಸುವ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ ಎಂದರು.
ಇವರ ದೀನ-ದಲಿತ ಸೇವೆ ನಿರಂತರವಾಗಿ ಮುಂದುವರಿಯಲಿ. ಸಮಾಜದ ಹಿತಕ್ಕಾಗಿ ಅವರು ಕೈಗೊಂಡಿರುವ ಕಾರ್ಯಗಳು ಇನ್ನಷ್ಟು ವಿಸ್ತಾರವಾಗಲಿ ಎಂದರು.


ಪತ್ರಿಕೆಯನ್ನು ಕೊಂಡು ಓದುವ ಅಭ್ಯಾಸ ಬೆಳೆಬೇಕು; ಆಗ ಮಾತ್ರ ಪತ್ರಿಕೆ ಬೆಳೆಯುತ್ತದೆ. ಓದುಗರ ಬೆಂಬಲವೇ ಅದರ ಶಕ್ತಿ.ದಾನ ಮಾಡುವ ಮನಸ್ಸು ಪ್ರತಿಯೊಬ್ಬರಲ್ಲೂ ಮೂಡಬೇಕು. ವ್ಯಕ್ತಿಗೆ ಸಿಗುವ ಪ್ರಶಸ್ತಿ, ಗೌರವವು ಅವರ ಸೇವೆಯ ಪ್ರತಿಫಲ. ಒಳ್ಳೆಯ ಚಿಂತನೆ ಮತ್ತು ಯೋಜನೆಗಳು ಸದಾ ಉಳಿಯುತ್ತವೆ. ಎಲ್ಲರಿಗೂ ಸದ್ಭಾವನೆ, ಸೌಹಾರ್ದ ಸಿಗಲಿ ಎಂದು ಆಶೀರ್ವದಿಸುತ್ತೇನೆ ಎಂದರು.


ದೀನಬಂಧು ಪ್ರಶಸ್ತಿ ಪಡೆದ ಜಿ. ಶಂಕರ ಪರಿಚಯವನ್ನು ಜಿಲ್ಲಾ ಕಾಂಗ್ರೆಸ್ ವಕ್ತಾರ ಜಿ. ಡಿ ಮಂಜುನಾಥ್ ನಡೆಸಿಕೊಟ್ಟರು, ಸಾಂಕೇತಿಕವಾಗಿ ಉಡುಗೊರೆಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಶ್ರೀಕಾಂತ್ ನೀಡಿದರು
ಸಂದರ್ಭದಲ್ಲಿ ಡಾ.ಧನಂಜಯ ಸರ್ಜಿ, ಎಂ.ಶ್ರೀಕಾಂತ್, ಹೆಚ್.ಎನ್. ವಿದ್ಯಾದರ್, ಉಪಸ್ತಿತರಿದ್ದರು.
ದೀನಬಂಧು ಟ್ರಸ್ಟ್ ನ ರಮೇಶ್ ಶೆಟ್ಟಿ ಶಂಕರ್ಘಟ್ಟ ಎಲ್ಲರನ್ನೂ ಸ್ವಾಗತಿಸಿದರು.

Leave a Reply

Your email address will not be published. Required fields are marked *