ಶ್ರೀ ಮದನ ಘಟ್ಟಮ್ಮ ದೇವಿ ಜಾತ್ರಾ ಮಹೋತ್ಸವ 2026 ನಿಟ್ಟೂರ ಹೋಬಳಿ ಗುಬ್ಬಿ ತಾಲೂಕು ಐತಿಹಾಸಿಕ ಪ್ರಸಿದ್ಧ ಶ್ರೀ ಕೆಂಪುಮುಖದ ಚೆಲುವೆ ಉದ್ಭವ ದೇವಿ ದೊಡ್ಡಮ್ಮ ದೇವಿ ಹಾಗೂ ಶ್ರೀ ಬೆಳ್ಳಿಮುಖಿ ಚಿಕ್ಕಮ್ಮ ದೇವಿ ಯವರ ಅದ್ದೂರಿ ಜಾತ್ರಾ ಮಹೋತ್ಸವ ಹಾಗೂ ನೂತನ ಕಲ್ಲು ಗಾಲಿ ರಥೋತ್ಸವ ಇದೇ ತಿಂಗಳ 07/04/2026 ರಿಂದ 10/04/2026ರವರೆಗೂ ನಡೆಯಲಿದೆ.

ಜಾತ್ರಾ ಮಹೋತ್ಸವದಲ್ಲಿ ಕಳಸ ಸ್ಥಾಪನೆ ಸಹಿತ ಹೊಸ ಗಂಗಾಪೂಜೆ, ವಿಶೇಷವಾಗಿ ಕಿಡಿಗಣ್ಣ ರುದ್ರೀ ಬೆಳ್ಳಿಮುಖಿ ಅಮ್ಮನವರನ್ನು ಸಾಂಪ್ರದಾಯಿಕ ಕತ್ತಿ ವರೆಸೆಯ ಮೂಲಕ ಕಣದಿಂದ ಬರಮಾಡಿಕೊಂಡು ಸೋಮನ ಕುಣಿತ ಸಹಿತ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಏರ್ಪಡಿಸಲಾಗಿದೆ.

ಕನಸಿನ ಕೂಸಾದ ಅಮ್ಮನವರ ರಥೋತ್ಸವ 09/04/2026 ಗುರುವಾರ ವೃಷಭ ಲಗ್ನ ಸುಸಮಯದಲ್ಲಿ ನಡೆಯಲಿದೆ. ಮೂರು ದಿನಗಳ ಮಹಾ ದಾಸೋಹವಿರುತ್ತದೆ.ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಮದನಘಟ್ಟಮ್ಮ ಅರ್ಚಕ ಮಂಡಳಿ ಹಾಗೂ ಕಮಿಟಿಯವರೂ ಆಸ್ತಿಕ ಭಕ್ತ ಮಹಾಶಯರಿಗೆ ಸ್ವಾಗತಕೋರಿದ್ದಾರೆ.

ನೂತನ ತೇರಿನ ಮನೆ ಜೀರ್ಣೋದ್ದಾರ ಕಾರ್ಯ ನಡೆಯುತಿದ್ದು ಭಕ್ತಾದಿಗಳು ತನು ಮನ ಧನ ಸಹಾಯರ್ಥ ಕೋರಲಾಗಿದೆ.

ವರದಿ:: ಪ್ರವೀಣ್ ಎಂ ಟಿ ಮದನಘಟ್ಟ

Leave a Reply

Your email address will not be published. Required fields are marked *