ಮಂಜುನಾಥ್ ಶೆಟ್ಟಿ…

ರಾಷ್ಟ್ರೀಯ ಶಿಕ್ಷಣ ಸಮಿತಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಶಿವಮೊಗ್ಗ ನೂತನ ಹಾಸ್ಟೆಲ್ ಕಟ್ಟಡದ ಮುಖ್ಯದ್ವಾರದ ಬಾಗಿಲು ಚೌಕಟ್ಟು ಕುರಿಸುವ ಪೂಜಾ ಕಾರ್ಯಕ್ರಮ ನಡೆಯಿತು.
ಸಂಘದ ಅಧ್ಯಕ್ಷರಾದ ಡಾ ಎ ಸತೀಶ್ ಕುಮಾರ್ ಶೆಟ್ಟಿ ಮತ್ತು ವಾತ್ಸಲ್ಯ ಶೆಟ್ಟಿ ದಂಪತಿಗಳು ಪಾಲ್ಗೊಂಡು ಪೂಜಾ ಕಾರ್ಯಕ್ರಮ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರೊಫೆಸರ್ ಬಿ. ಆರ್. ದಯಾನಂದ್, ಖಜಾಂಚಿಗಳಾದ ಪ್ರೊಫೆಸರ್ ಹೆಚ್. ಬಿ. ಮಡಿವಾಳರ್, ಆಂತರಿಕ ಲೆಕ್ಕಪರಿಶೋಧಕರಾದ ಹೆಚ್. ಬಸವರಾಜ್, ಕಟ್ಟಡ ಸಮಿತಿ ಅಧ್ಯಕ್ಷರಾದ ಮೃತ್ಯುಂಜಯ ತಿ. ಹಿರೇಮಠ್, ನಿರ್ದೇಶಕರುಗಳಾದ ಎಮ್. ಜಿ. ಕೆ. ರಂಗಪ್ಪ, ಬಾಲಕೃಷ್ಣರಾವ್, ಗುರುರಾಜ್, ಸುರೇಶ್, ತಾರಾದೇವಿ, ಸಂಘದ ಕಾರ್ಯದರ್ಶಿ ಜಿ ಪ್ರಭಾಕರ್ ಹಾಗೂ ಕಟ್ಟಡದ ಸಿವಿಲ್ ಇಂಜಿನಿಯರ್ ಉಲ್ಲಾಸ್ ಹೆಗ್ಡೆ ಇವರುಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.