ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ನಗರದಲ್ಲಿ ಕಲುಷಿತ ನೀರು ಸರಬರಾಜು ಹೋಗುತ್ತಿರುವ ಬಗ್ಗೆ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳು ಒಕ್ಕೂಟ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಶಾಶ್ವತ ಪರಿಹಾರಕ್ಕೆ ಅಗ್ರಹಿಸಿದರು.

ನಗರದ ಕುಡಿಯುವ ನೀರು ಕಳೆದ ಕೆಲವು ದಿನಗಳಿಂದ ಅತ್ಯಂತ ಕಲುಷಿತ ಆಗಿ ಕುಡಿಯಲು ಸಾಧ್ಯವೇ ಇರುವುದಿಲ್ಲ ಎಂಬ ಸ್ಥಿತಿಯಲ್ಲಿ ಸರಬರಾಜಾಗುತ್ತಿದ್ದು ಇದನ್ನು ಒಕ್ಕೂಟವು ಕಠಿಣ ಶಬ್ದಗಳಿಂದ ಖಂಡಿಸಿದೆ.

ನೀರು ಸರಬರಾಜು ಮಂಡಳಿಯವರ ನಿರ್ಲಕ್ಷದಿಂದ ಈ ರೀತಿ ಕಲುಷಿತ ನೀರು ಸರಬರಾಜಾಗುತ್ತಿದ್ದು ನೀರು ಶುದ್ದೀಕರಣ ಘಟಕದಲ್ಲಿ ಮಳೆಗಾಲಕ್ಕೆ ಮುಂಚಿತವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ಪಾಲಿಸಿದೆ ಇರುವುದರಿಂದ ನಿರ್ವಹಣಾ ಕಾರ್ಯ ಸರಿ ಆಗದೆ ಇರುವುದರಿಂದ ಕಲುಷಿತ ನೀರು ಸರಬರಾಜಾಗುತ್ತಿದೆ.

ಆದರೆ ಮಂಡಳಿಯು ಮಳೆ ಅತಿಯಾಗಿ ಬಂದಿದ್ದರಿಂದ ಈ ರೀತಿ ಕಲುಷಿತ ನೀರು ಬಂದಿದೆ ಎನ್ನುವುದು ಸಬುಬಾಗಿ ನೀಡುತ್ತಿದೆ. ಇದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಯತ್ನವೇ ಹೊರ್ತು ಬೇರೇನು ಅಲ್ಲ ಎಂದು ಒಕ್ಕೂಟ ತೀವ್ರ ವಾಗ್ದಾಳಿ ನಡೆಸಿದೆ.

ಮಳೆಗಾಲಕ್ಕೆ ಮುಂಚಿತವಾಗಿ ಒಂದು ದಿನ ಇಡೀ ಘಟಕವನ್ನು ಶಟ್ ಡೌನ್ ಆಡಿ ಸಿಲ್ಟ್ ತೆಗೆಯುವ ಕಾರ್ಯ ನಡೆಯಬೇಕು ಶುದ್ಧೀಕರಣ ಘಟಕದಲ್ಲಿ ಕಾರ್ಯ ನಿರ್ವಹಿಸಬೇಕಾದ ಅನೇಕ ಮೆಕ್ಯಾನಿಕಲ್ ಉಪಕರಣಗಳು ಶಿಥಿಲವಾಗಿದ್ದು ಸಮರ್ಥಕವಾಗಿ ನಿರ್ವಹಿಸುತ್ತಿಲ್ಲ. ನೀರಿನಲ್ಲಿರುವ ಮಣ್ಣಿನ ಅಂಶವನ್ನು ಕಡಿಮೆ ಮಾಡಲು ಈ ಉಪಕರಣಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಹಾಗೆಯೆ ಆಲಂ ರಾಸಾಯನಿಕವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿ ನೀರಿನಲ್ಲಿರುವ ಮಣ್ಣಿನ ಅಂಶವನ್ನು ಸಂಪೂರ್ಣವಾಗಿ ತೆಗೆದುಹಾಕುವ ಪ್ರಕ್ರಿಯೆ ವೈಜ್ಞಾನಿಕವಾಗಿ ನಡೆಯಬೇಕು.

ಕುಡಿಯುವ ನೀರಿಗೆ ಸಂಬಂಧಿಸಿದ ವಿಶ್ವ ಸಂಸ್ಥೆಯ ಹಾಗೂ ಭಾರತೀಯ ಕುಡಿಯುವ ನೀರಿನ ಮಾನದಂಡಗಳನ್ನು ಅಳವಡಿಸಿಕೊಂಡು ಪರೀಕ್ಷಾಲಯದಲ್ಲಿ ನೀರಿನ ಪರೀಕ್ಷೆಗಳನ್ನು ವೈಜ್ಞಾನಿಕವಾಗಿ ನಡೆಸಬೇಕು ನೀರು ಶುದ್ದಿಕರಣ ಘಟಕದಲ್ಲಿ ಇಂತಹ ಹಲವಾರು ಕೊರತೆಗಳು ಎದ್ದು ಕಾಣುತ್ತಿರುವ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಮನವಿಯಲ್ಲಿ ಆಗ್ರಹಿಸಿದೆ.

ಭದ್ರಾವತಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಶಿಮೊಗ್ಗದ ವಾರ್ಷಿಕ ಬಳಕೆಯ 3 ಪಟ್ಟು ಹೆಚ್ಚು ಆಲಂಬಳಿಸಲಾಗುತ್ತದೆ. ಆಲಂ ಬಳಕೆಯನ್ನು ಸರಿಪಡಿಸಲು ಶಿವಮೊಗ್ಗದ ನೀರಿನ ಸರಬರಾಜು ಪ್ರಮಾಣ ಭದ್ರಾವತಿಯ ಪ್ರಮಾಣಕ್ಕಿಂತ ಹಲವು ಪಟ್ಟು ಜಾಸ್ತಿ ಇದೆ ಎಂಬ ಪ್ರಮುಖ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕು.

ನೀರು ಶುದ್ಧೀಕರಣ ಘಟಕವನ್ನು ಜನಸಂಖ್ಯೆಗೆ ಆಧಾರವಾಗಿ ಎಂಎಲ್‌ಡಿ ಗಳನ್ನು ಹೆಚ್ಚಿಸಬೇಕು ಎನ್ಎಬಿಎಲ್ ಮಾನ್ಯತೆ ಪಡೆದ ನೀರು ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಬೇಕು ಪರಿಣಿತ ಸಿಬ್ಬಂದಿಗಳನ್ನು ನೇಮಿಸಬೇಕು ಜನರ ಮೇಲೆ ಆಗುವ ಅನಾರೋಗ್ಯದ ಬಗ್ಗೆ ಅಧಿಕಾರಿಗಳ ನೇರ ಹೊಣೆ ಹೋರಿಸುವಂತಾಗ ಆಗಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

Leave a Reply

Your email address will not be published. Required fields are marked *