ಮಂಜುನಾಥ್ ಶೆಟ್ಟಿ…


ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ಮನೋಸ್ಥೈರ್ಯಾಭಿವೃದ್ಧಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಮಾನ್ಯ ಶ್ರೀ ಸಂತೋಷ್. ಎಂ. ಎಸ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಮತ್ತು ಶ್ರೀ ನಿಖಿಲ್ ಬಿ. ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದು, ಡಾ|| ವೀಣಾ ಭಟ್, ಸ್ತ್ರೀ ರೋಗ ತಜ್ಞರು ಭದ್ರಾವತಿ ಮತ್ತು ಪ್ರೊ|| ಕಿರಣ್ ಆರ್ .ದೇಸಾಯಿ, ನಿವೃತ್ತ ಪ್ರಾಧ್ಯಾಪಕರು, ಕಮಲ ನೆಹರು ಕಾಲೇಜು ಶಿವಮೊಗ್ಗ ಹಾಗೂ ಶ್ರೀ ಕಾರ್ಯಪ್ಪ ಎ. ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅತಿಥಿ ಡಾ ವೀಣಾ ಭಟ್ ಅವರು ಮಹಿಳೆಯರ ಆರೋಗ್ಯ, ಮಹಿಳೆಯರಲ್ಲಿ, ಆತ್ಮ ವಿಶ್ವಾಸ, ಕರ್ತವ್ಯದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಮಹಿಳೆಯರಿಗೆ ಕಾನೂನು ನೆರವು ಕುರಿತು ಮಾಹಿತಿಗಳು ತಿಳಿದುಕೊಳ್ಳಬೇಕು ಎಂದರು. 

ಮತ್ತೋರ್ವ ಅತಿಥಿ ಪ್ರೊ|| ಕಿರಣ್ ಆರ್ .ದೇಸಾಯಿ ಮಾತನಾಡಿ ಪ್ರಸ್ತುತ ಎಲ್ಲಾ ರಂಗದಲ್ಲೂ ಮಹಿಳೆಯರು ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾರೆ. ಇದೇ ರೀತಿ ಮುಂದುವರೆದು ಜಯಶಾಲಿ ಆಗಲಿ ಎಂದು ಆಶಿಸುತ್ತೇನೆ ಎಂದರು.ಶ್ರೀಮತಿ ನಾಗಮ್ಮ, ಸಿಪಿಐ ಭದ್ರಾವತಿ ನಗರ ವೃತ್ತ ರವರು ಕರ್ತವ್ಯ ದಲ್ಲಿನ ಒತ್ತಡ ನಿವಾರಣೆ ಹಾಗೂ ತನಿಖ ಕ್ರಮ ಗಳ ಬಗ್ಗೆ ತಿಳಿಸಿದರು.

Leave a Reply

Your email address will not be published. Required fields are marked *