ಮಂಜುನಾಥ್ ಶೆಟ್ಟಿ…

ಮಹಿಳೆಯೊಬ್ಬರು ಏ.16 ರಂದು ದುರ್ಗಿಗುಡಿ ಬಟ್ಟೆ ಅಂಗಡಿಗೆ ಹೋದಾಗ ಅಲ್ಲೇ ವ್ಯಾನಿಟಿ ಬ್ಯಾಗ್ ನ್ನ‌ ಮರೆತು ಹೀಗಿದ್ದು ಅದನ್ನ ಅವರಿಗೆ ಅಲ್ಲಿ ಕೆಲಸ ಮಾಡುವ ಯುವತಿಯರು ವಾಪಾಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ನಗರದ ದುರ್ಗಿಗುಡಿ ನ್ಯೂ ಇತಿಹಾಸ ಕಲೆಕ್ಷನ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಕು. ಸ್ವಾತಿ ಮತ್ತು ಕು. ಸಂಗೀತ ರವರುಗಳು ದಿನಾಂಕ 16.4.26 ರಂದು ಗಾಯತ್ರಿ ರವರು ಮರೆತು ಬಿಟ್ಟು ಹೋದ ವ್ಯಾನಿಟಿ ಬ್ಯಾಗನ್ನು ಮಾಲೀಕರಿಗೆ ಕೊಟ್ಟಿದ್ದರು.

ನೊಂದ ಗಾಯತ್ರಿರವರು ನೆನಪಾಗಿ ಪೊಲೀಸರೊಂದಿಗೆ ವಿಚಾರಣೆಗೆ ಹೋದಾಗ ಬಿಚ್ಚಿಯೂ ನೋಡದೆ ಯಥಾವತ್ತಾಗಿ ಎತ್ತಿಟ್ಟಿದ್ದ ವ್ಯಾನಿಟಿ ಬ್ಯಾಗನ್ನು ಮಾಲೀಕ ಮಾರ್ತಾಂಡ ರವರು ಸುಮಾರು 5 ಲಕ್ಷ ಬೆಲೆ ಬಾಳುವ ಬಂಗಾರ ಮತ್ತು ಇತರೆ ಅಮೂಲ್ಯ ವಸ್ತುಗಳಿದ್ದ ಬ್ಯಾಗು ಹಿಂದಿರುಗಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಜಯನಗರ ಠಾಣೆಯ ರವಿ ಪಾಟೀಲ್ ಸಂಗಣ್ಣ ರವರು ಠಾಣೆಯಲ್ಲಿ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.


Leave a Reply

Your email address will not be published. Required fields are marked *