ಮಂಜುನಾಥ್ ಶೆಟ್ಟಿ…

2026-27 ನೇ ಸಾಲಿಗೆ ಪ್ರಥಮ ಪಿಯುಸಿಗೆ ದಾಖಲಾತಿ ಮಾಡುವಾಗ ಪೋಷಕರು ದಾಖಲಾತಿ ಮಾಡುವ ಕಾಲೇಜಿಗೆ ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಖಲಿಸುವಂತೆ ಶಾಲಾ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲೆಯ ಕೆಲವೊಂದು ಸಂಸ್ಥೆಯವರು ಹೊಸ ಕಾಲೇಜಿನ ಅನುಮತಿ ಪಡೆಯದೇ ಜಾಹಿರಾತುಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಕಾಲೇಜುಗಳ ಬಗ್ಗೆ ಪೋಷಕರು ಎಚ್ಚರ ವಹಿಸುವುದು. ಒಂದು ವೇಳೆ ಈ ಸಂಸ್ಥೆ/ ಕಾಲೇಜುಗಳು ಅನಧಿಕೃತವಾಗಿ ದಾಖಲಾತಿ ಮಾಡಿಕೊಂಡಲ್ಲಿ ಅವರ ಮೇಲೆ ಇಲಾಖಾ ನಿಯಮಾನುಸಾರ ಶಿಸ್ತು ಕ್ರಮ ತೆಗೆದುಕೊಳ್ಳಾಗುವುದು.

ಪೋಷಕರಿಗೆ ಅನುಮಾನ ಬಂದರೆ ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಬಿ.ಹೆಚ್ ರಸ್ತೆ ಶಿವಮೊಗ್ಗ ಇಲ್ಲಿಯ ಕಚೇರಿ ಸಮಯದಲ್ಲಿ ಬಂದು ವಿಚಾರಿಸುವಂತೆ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *