ಮಂಜುನಾಥ್ ಶೆಟ್ಟಿ…
ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಭಾರತದ ಸರ್ವೋಚ್ಛ ನ್ಯಾಯಾಲಯ ‘ಸಮಾಧಾನ ಸಮಾರೋಹ-2026’ ಎಂಬ ವಿಶೇಷ ಲೋಕ ಅದಾಲತ್‍ನ್ನು ಆಗಸ್ಟ್ 21, 22 ಮತ್ತು 23 ರಂದು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದು ಕಕ್ಷಿದಾರರು ಇದರ ಸದುಪಯೋಗ ಪಡೆಯಬೇಕೆಂದು ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರಾದ
ನ್ಯಾಯಮೂರ್ತಿ ಅನು ಶಿವರಾಮನ್ ತಿಳಿಸಿದರು.
ಬಾಕಿಯಿರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ‘ಸಮಾಧಾನ್ ಸಮರೋಹ್’ ವಿಶೇಷ ಲೋಕ್ ಅದಾಲತ್ ಕುರಿತು ಜಿಲ್ಲಾ ನ್ಯಾಯಾಲಯದ ವಿ.ಸಿ ಕೊಠಡಿ ಮೂಲಕ ಗುರುವಾರ ಏರ್ಪಡಿಸಲಾಗಿದ್ದ ಆನ್ ಲೈನ್ ಪತ್ರಿಕಾಗೋಷ್ಟಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶೇಷ ಲೋಕ್ ಅದಾಲತ್…
ಈ ಅಭಿಯಾನದ ಸಮಾರೋಪದ ಅಂಗವಾಗಿ ಆಗಸ್ಟ್ 21 ರಿಂದ 23 ರವರೆಗೆ ವಿಶೇಷ ಲೋಕ್ ಅದಾಲತ್ ಆಯೋಜಿಸಲಾಗುವುದು.
ಪರಸ್ಪರ ಒಪ್ಪಿಗೆಯ ಮೂಲಕ ಇತ್ಯರ್ಥಪಡಿಸಬಹುದಾದ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಯಾವ ರೀತಿಯ ಪ್ರಕರಣಗಳಿಗೆ ಅವಕಾಶ?
ಈ ವಿಶೇಷ ಅದಾಲತ್‌ನಲ್ಲಿ ಈ ಕೆಳಗಿನ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ:
ವೈವಾಹಿಕ ವಿವಾದಗಳು ಮತ್ತು ಮಕ್ಕಳ ಪಾಲನೆಗೆ ಸಂಬಂಧಿಸಿದ ಪ್ರಕರಣಗಳು.
ಮೋಟಾರು ವಾಹನ ಅಪಘಾತ ವಿಮಾ ಪರಿಹಾರದ ಪ್ರಕರಣಗಳು.
ಭೂಸ್ವಾಧೀನ ಪರಿಹಾರದ ವಿವಾದಗಳು.
ಸೇವಾ ವಿಷಯಗಳು ಮತ್ತು ಕಾರ್ಮಿಕ ವಿವಾದಗಳು.
ಚೆಕ್ ಬೌನ್ಸ್ ಮತ್ತು ಇತರ ಸಿವಿಲ್ ಪ್ರಕರಣಗಳು.
ಕಕ್ಷಿದಾರರು ಮತ್ತು ವಕೀಲರು ತಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 31, 2026.
ನೋಂದಣಿ: ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ (www.sci.gov.in) ನೀಡಿರುವ ಗೂಗಲ್ ಫಾರ್ಮ್ ಲಿಂಕ್ ಮೂಲಕ ಮಾಹಿತಿ ಸಲ್ಲಿಸಬಹುದು.
ವರ್ಚುವಲ್ ವ್ಯವಸ್ಥೆ…
ಕಕ್ಷಿದಾರರು ದೆಹಲಿಗೆ ಭೌತಿಕವಾಗಿ ಬರುವ ಅಗತ್ಯವಿಲ್ಲದೆ, ವಿಡಿಯೋ ಕಾನ್ಫರೆನ್ಸ್ ಮೂಲಕವೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ವೆಚ್ಚವಿಲ್ಲದ ನ್ಯಾಯ…
ಇಲ್ಲಿ ಪ್ರಕರಣ ಇತ್ಯರ್ಥವಾದರೆ ಯಾವುದೇ ನ್ಯಾಯಾಲಯದ ಶುಲ್ಕ ಇರುವುದಿಲ್ಲ (ಪಾವತಿಸಿದ ಶುಲ್ಕವಿದ್ದರೆ ವಾಪಸ್ ಪಡೆಯಬಹುದು).
ಲೋಕ್ ಅದಾಲತ್ ನೀಡುವ ತೀರ್ಪು ಅಂತಿಮವಾಗಿದ್ದು, ಇದರ ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಇದರಿಂದ ವ್ಯಾಜ್ಯಕ್ಕೆ ಕಾಯಂ ಮುಕ್ತಿ ಸಿಗುತ್ತದೆ.
ಉಭಯ ಕಕ್ಷಿದಾರರ ಒಪ್ಪಿಗೆಯ ಮೇರೆಗೆ ತೀರ್ಪು ನೀಡಲಾಗುವುದರಿಂದ ಯಾವುದೇ ಕಹಿಯಿಲ್ಲದೆ ವಿವಾದ ಅಂತ್ಯಗೊಳ್ಳುತ್ತದೆ.
ಹೆಚ್ಚಿನ ನೆರವಿಗಾಗಿ ಸುಪ್ರೀಂ ಕೋರ್ಟ್ ‘ಒನ್ ಸ್ಟಾಪ್ ಸೆಂಟರ್’ (War Room) ಸ್ಥಾಪಿಸಿದ್ದು, ಕಕ್ಷಿದಾರರು 011-23112428 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ರಾಜ್ಯದಲ್ಲಿ ಒಟ್ಟು 4328 ಪ್ರಕರಣಗಳು ಬಾಕಿ ಇದ್ದು, ಶಿವಮೊಗ್ಗದಲ್ಲಿ 69 ಪ್ರಕರಣಗಳು ಬಾಕಿ ಇವೆ.
ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಒಟ್ಟು 4,328 ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಸಂಧಾನಕ್ಕಾಗಿ ಗುರುತಿಸಲಾಗಿದ್ದು ಅದರಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 1,245, ಬೆಳಗಾವಿ 517, ಕಲಬುರಗಿ 269, ವಿಜಯಪುರ 213, ಧಾರವಾಡ 188, ಬಾಗಲಕೋಟೆ 159, ಗದಗದಲ್ಲಿ 125, ಬಳ್ಳಾರಿ 109, ತುಮಕೂರು 101, ಕೊಪ್ಪಳ 98, ಹಾವೇರಿ 81, ಉಡುಪಿ 78, ಬೀದರ್ 77, ದಕ್ಷಿಣ ಕನ್ನಡ 75, ಶಿವಮೊಗ್ಗ 69, ರಾಯಚೂರು 69, ಚಿತ್ರದುರ್ಗ 58, ಮೈಸೂರು 56, ದಾವಣಗೆರೆ 47, ಉತ್ತರ ಕನ್ನಡ 35 ಮಂಡ್ಯ 30, ಚಿಕ್ಕಮಗಳೂರು 27, ಹಾಸನ 24, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 18, ರಾಮನಗರ 17, ಚಿಕ್ಕಬಳ್ಳಾಪುರ 17, ಕೊಡಗು 15, ಯಾದಗಿರಿ 14 ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 4 ಪ್ರಕರಣಗಳು ಒಳಗೊಂಡಿವೆ.
ಸುಪ್ರೀಂ ಕೋರ್ಟ್ ಈಗಾಗಲೇ ಗುರುತಿಸಲಾದ ಪ್ರಕರಣಗಳಲ್ಲಿ 937ಕ್ಕೂ ಹೆಚ್ಚು ಪ್ರಕರಣಗಳು ಸರ್ಕಾರವು ಪಕ್ಷವಾಗಿರುವ ಪ್ರಕರಣಗಳಾಗಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಲು ಮತ್ತು ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗುವಂತೆ ಮಾನ್ಯ ಅಡ್ವಕೇಟ್ ಜನರಲ್ ಅವರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ
ಎಂದು ಮಾಹಿತಿ ನೀಡಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ಆರ್ ದೇವದಾಸ್ ಅವರು ಮಾತನಾಡಿ ಈ ವಿಶೇಷ ಲೋಕ ಅದಾಲತ್ ಜನಸಾಮಾನ್ಯರಿಗೆ ತಮ್ಮ ಕಾನೂನು ಹೋರಾಟವನ್ನು ತ್ವರಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಮುಗಿಸಿಕೊಳ್ಳಲು ಸಿಕ್ಕಿರುವ ಮಹತ್ವದ ಅವಕಾಶವಾಗಿದೆ. ಇದರಿಂದ ಸಮಯ ಮತ್ತು ಹಣ ಉಳಿತಾಯವಾಗುವುದಲ್ಲದೆ, ಉಭಯ ಪಕ್ಷಗಳ ನಡುವೆ ಸೌಹಾರ್ದ ಸಂಬಂಧ ಉಳಿಯಲು ಸಹಕಾರಿಯಾಗಲಿದೆ. ಸಾರ್ವಜನಿಕರು ಈ ಅದಾಲತ್ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಆಸಕ್ತ ಕಕ್ಷಿದಾರರು ಅಥವಾ ಅವರ ವಕೀಲರು ಸರ್ವೋಚ್ಚ ನ್ಯಾಯಾಲಯದ ವೆಬ್‍ಸೈಟ್‍ನಲ್ಲಿ ನೀಡಲಾದ ಗೂಗಲ್ ಫಾರ್ಮ್ ಲಿಂಕ್ https://forms.gle/jqxefqF4BCWzukoP6 ಮೂಲಕ ಮೇ 31, 2026 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ನೋಟಿಸ್ ಪಡೆದ ಕಕ್ಷಿದಾರರು ತಾವಿರುವ ಜಿಲ್ಲಾ ಅಥವಾ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಮುಂದೆ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಪೂರ್ವ ಸಂಧಾನ ಸಭೆಗಳಿಗೆ ಹಾಜರಾಗಬಹುದು.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಭಾರತದ ಸರ್ವೋಚ್ಚ ನ್ಯಾಯಾಲಯದ ಒನ್ ಸ್ಟಾಪ್ ಕೇಂದ್ರದ ಸಂಪರ್ಕ ಸಂಖ್ಯೆ: 011-23112428, 011-23112528, 011-23116464, 011-23116465, 011-23115652. ಇಮೇಲ್: speciallokadalat2026 @sci.nic.in.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಸಂಪರ್ಕ ಸಂಖ್ಯೆ: 011-23382778, 011-23382121 ಹಾಗೂ ಟೋಲ್ ಫ್ರೀ ಸಂಖ್ಯೆ. 15100
ಸರ್ವೋಚ್ಚ ನ್ಯಾಯಾಲಯದ ಕಾನೂನು ಸೇವಾ ಸಮಿತಿಯ ಸಂಪರ್ಕ ಸಂಖ್ಯೆ: 011-23381257, 211-23116353, 011-23116354. ಇಮೇಲ್: sclsc@nic.in
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಪರ್ಕ ಸಂಖ್ಯೆ: 080-22111729, 080-22111714.
ಇಮೇಲ್: samadhansamaroh@gmail.com ಹಾಗೂ ಟೋಲ್ ಫ್ರೀ ಸಂಖ್ಯೆ: 15100 (24*7)
ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ, ಬೆಂಗಳೂರು ಸಂಪರ್ಕ ಸಂಖ್ಯೆ: 080-22869988. ಇ-ಮೇಲ್ : hclscbng@gmail.com ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.