ಮಂಜುನಾಥ್ ಶೆಟ್ಟಿ…

ಅಖಿಲ ಕರ್ನಾಟಕ ಡಿಕೆ ಶಿವಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ ಆರ್ ಮೋಹನ್ ರವರ ನೇತೃತ್ವದಲ್ಲಿ DCM ಡಿಕೆ.ಶಿವಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟವನ್ನು ನಾದಮಾಯನಂದ ಸ್ವಾಮೀಜಿ ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು ಹುಟ್ಟುಹಬ್ಬದ ಸಂದರ್ಭದಲ್ಲಿ ಸಾರ್ಥಕತೆ ಮೆರೆಯುವ ಕಾರ್ಯಕ್ರಮ ಮಾಡಲಾಗುತ್ತಿದೆ.
ಆರ್ ಮೋಹನ್ ರವರು ಕಳೆದ 21 ವರ್ಷಗಳಿಂದ ಡಿಕೆಶಿ ಹುಟ್ಟು ಹಬ್ಬದಂದು ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ ಎಂದರು. ಇಂದು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ಸನ್ಮಾನ ಮಾಡುತ್ತಿರುವುದು ಉತ್ತಮ ಕಾರ್ಯಕ್ರಮ ಎಂದರು.


ಕಾರ್ಯಕ್ರಮದಲ್ಲಿ ಸುಡಾ ಅಧ್ಯಕ್ಷ ಸುಂದರೇಶ್ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ರಮೇಶ್ ಶೆಟ್ಟಿ ಶಂಕರ ಘಟ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಜಿಡಿ ಮಂಜುನಾಥ್ ಚಂದ್ರಪ್ಪ ಸತೀಶ್ ಶಶಿ ವಿನೋದ ಪ್ರಸನ್ನ ಶಂಕರ್ ವಿಜಿ ಮೈಕೆಲ್ ಕಿರಣ್ ಯಶ್ವಂತ್ ನಾಯ್ಕ್ ಮುಂತಾದವರು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *