ಮಂಜುನಾಥ್ ಶೆಟ್ಟಿ…
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರು ರಾಜ್ಯದ 24 ನಾಲ್ಕನೇ ಮುಖ್ಯಮಂತ್ರಿ ಆಗಿ ಇಂದು ಸಂಜೆ 4:00ಗೆ ರಾಜ್ಯಪಾಲರ ಭವನದ ಲೋಕಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗ ನಗರದ ಶಿವಪ್ಪ ನಾಯಕ ಪ್ರತಿಮೆ ಬಳಿ ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪನವರ ನೇತೃತ್ವದಲ್ಲಿ ಭಗವಂತನಿಗೆ ಪ್ರಿಯವಾದ ಹೈಗ್ರಿವಾ ಪ್ರಸಾದ ಹಾಗೂ ಅನ್ನದಾನ ವಿತರಿಸಿ ಡಿಕೆ ಶಿವಕುಮಾರ್ ಅವರಿಗೆ ಶುಭ ಕೋರಿದರು. ನಂತರ ಮಾತನಾಡಿದ ಅವರು ಇನ್ನು ಎರಡು ವರ್ಷದ ಅವಧಿಯಲ್ಲಿ ಡಿಕೆ ಶಿವಕುಮಾರ್ ಸಮಾಜದ ಮುಖಿಯಾದ ರೈತರು ಕಾರ್ಮಿಕರು ವಿದ್ಯಾರ್ಥಿಗಳು ಯುವಕರು ಮಹಿಳೆಯರಿಗೆ. ಅನುಕೂಲವಾಗುವಂತಹ ಉತ್ತಮ ಕಾರ್ಯಗಳು ಅವರ ಮುಖ್ಯಮಂತ್ರಿ ಅವಧಿಯಲ್ಲಿ ನಡೆಯಲಿ ಎಂದರು.
ಪ್ರತಿಯೊಂದು ಸಮಾಜಕ್ಕೂ ಧರ್ಮಕ್ಕೂ. ಸಮನಂತರವಾಗಿ ಕೆಲಸ ಮಾಡುವ ಮೂಲಕ ರಾಜ್ಯದ ಆದರ್ಶ ಮುಖ್ಯಮಂತ್ರಿಯಾಗಿ ಇನ್ನು 2 ವರ್ಷಗಳ ಕಾಲ ರಾಜ್ಯ ಸರ್ಕಾರ ಸೇವೆ ಮಾಡಲಿ ಮುಖ್ಯಮಂತ್ರಿ ಆಗಿದ್ದು ಭಗವಂತನಲ್ಲಿ ಪಾತ್ರಸುತ್ತೇವೆ ಎಂದರು.ಈಗಿರುವ ಪಂಚ ಗ್ಯಾರಂಟಿಗಳ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.ಇವರು ಅವಧಿಯಲ್ಲಿ ಮಳೆ ಬೆಳೆ ಪ್ರಕೃತಿಯಲ್ಲಿ ಉತ್ತಮ ವಾತಾವರಣ ನಿರ್ಮಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಹೆಚ್ಚಿಸಿ ಯೋಗೇಶ್ ರಾಜ್ಯ ಹಿಂದುಳಿದ ವರ್ಗಗಳ ಮುಖಂಡ ಬಿಎಮ್ ಹರ್ಷ ಶಿವಮೊಗ್ಗ ಜಿಲ್ಲಾ ಐಎನ್‌ಟಿಯು ಸಿ ಮಹಿಳಾ ವಿಭಾಗದ ಅಧ್ಯಕ್ಷ ಕವಿತಾ ರಾಘವೇಂದ್ರ ಕೆಪಿಸಿಸಿ ಸಂಯೋಜಕ ಕವಿತಾ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಎಸ್ಎ ಬಾಬು ಹುಸೇನ್ ಜಿಲ್ಲಾ ಕಾಂಗ್ರೆಸ್ ಮುಖಂಡರು ಆದ ಸ್ಟೆಲಾ ಮಾರ್ಟಿನ್ ಗ್ಲಾಡಿನ ಗೋಂದಿ ಚಟ್ನಳ್ಳಿ ರಾಜೀವ ನಿಸಾರ್ ಅಹಮದ್ ಜೋಳ ದಾಲ್ ನಾಗರಾಜ್ ಮುಂತಾದ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.