ಮಂಜುನಾಥ್ ಶೆಟ್ಟಿ…
ಶರಾವತಿ ಮಹಿಳಾ ಮಂಡಳಿಯಿಂದ 25ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶರಾವತಿ ನಗರ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ನಡೆಯಿತು.
25ನೇ ವರ್ಷದಲ್ಲಿ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಪೂರ್ವ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಹಾಗೂ ಸಂಸ್ಥೆ ಆರಂಭ ಆದಾಗಿನಿಂದ ಇದ್ದ ಪೂರ್ವ ಸದಸ್ಯರನ್ನು ಗುರುತಿಸಲಾಯಿತು.
ಸಂಘದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಸಮುದಾಯ ಭವನಕ್ಕೆ ಒಂದು ವೀಲ್ ಚೇರ್ ನೀಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ, ಗೌರವ ಅಧ್ಯಕ್ಧೆ ಪುಷ್ಪ ಶೆಟ್ಟಿ, ಕಾರ್ಯದರ್ಶಿ ಶೋಭಾ ಯೋಗೇಂದ್ರ, ಖಜಾಂಜಿ ನೈನಾ ರಾಜೇಶ್, ಉಪಾಧ್ಯಕ್ಷರಾದ ವಿದ್ಯಾ ವೀರಣ್ಣ, ನಿರ್ಮಲ ಮಹದೇವ್, ಕಾರ್ಯಕಾರಿ ಮಂಡಳಿಯ ಜ್ಯೋತಿ, ಗೀತಾ ಶೆಟ್ಟಿ, ಗೀತಾ ರಾಜಶೇಖರ್, ಸುಷ್ಮಾ ನಿರಂಜನ್ ಹಾಗೂ ಅನಿತಾ. ಮುಖ್ಯ ಅತಿಥಿ ಯಾಗಿ ಸುರೇಖಾ ಮುರಳೀಧರ ಭಾಗವಹಿಸಿದ್ದರು.