ಪುದುಚೆರಿಯಲ್ಲಿ ಮೇ 16 ಮತ್ತು 17 ರಂದು ನಡೆದ 15 ವರ್ಷದೊಳಗಿನ ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಶಿಫ್‌ನಲ್ಲಿ ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾಶಾಲಯ ಕ್ರೀಡಾಪಟುಗಳಾದ ಅನಿಲ್‌ಕುಮಾರ್ ಸೌಧಿ ಫ್ರೀಸ್ಟೈಲ್-41 ಕೆ.ಜಿ.ಯಲ್ಲಿ ಮತ್ತು ಮನೋಜ್ ಭಜಂತ್ರಿ ಗ್ರೀಕೋ ರೋಮನ್ -52 ಕೆ.ಜಿ. ಕುಸ್ತಿಯಲ್ಲಿ ಭಾಗವಹಿಸಿ ಬಂಗಾರ ಪದಕ ವಿಜೇತರಾಗಿದ್ದಾರೆ.
ಈ ಕ್ರೀಡಾಪಟುಗಳು ಇಲಾಖೆಯ ಕ್ರೀಡಾ ವಸತಿ ನಿಲಯದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ವಿಜೇತರಿಗೆ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾ ನಾಯ್ಕ್, ಕುಸ್ತಿ ತರಬೇತುದಾರರಾದ ರಾಜಪ್ಪ ಎಂ. ಫಳಕೆ ಮತ್ತು ಸಂಜಯ್ ಈ. ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.