ಮಂಜುನಾಥ್ ಶೆಟ್ಟಿ…

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಡಾ.ಕೆ.ಪಿ. ಅಂಶುಮಂತ್ ರವರ ಅಧ್ಯಕ್ಷತೆಯಲ್ಲಿ ವಿವಿಧ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಪ್ರಗತಿಪರ ರೈತರು, ಕೃಷಿಕರು ಹಾಗೂ ಕೃಷಿ ತಜ್ಞರುಗಳೊಂದಿಗೆ ಭದ್ರಾ ಕಾಡ ಪ್ರಾಧಿಕಾರದ ಉದ್ದೇಶ ಕಾರ್ಯ ಚಟುವಟಿಕೆಗಳ ಕುರಿತು ಸಭೆ ನಡೆಯಿತು.ಮಾಹಿತಿ ನೀಡಿ ಭದ್ರಕಾಡ ಪ್ರಾಧಿಕಾರವು ಸಾಧಿಸಿರುವ ಪ್ರಗತಿಯ ಕುರಿತು ಸಮಾಲೋಚನೆ ಮತ್ತು ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿದರು.

ಅಧ್ಯಕ್ಷರು ಮಾತನಾಡುತ್ತಾ - ನೀರಾವರಿ ಕ್ಷೇತ್ರದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಜವಾಬ್ದಾರಿಗಳ ಬಗ್ಗೆ ವಿವರಿಸಿದರು.ರೈತರು ಬಹು ಬೆಳೆ ಮಾದರಿಯನ್ನು ಅನುಸರಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ನೀರನ್ನು ಮಿತವಾಗಿ ಬಳಸಬೇಕು, ರೈತರು ವಿವಿಧ ಮಾದರಿಯ ಬೆಳೆಯನ್ನು ಬೆಳೆದು ಕೊಯ್ಲಿನ ಬಳಿಕದ ತಂತ್ರಜ್ಞಾನಗಳನ್ನು ಬಳಸಿ ಮಾರುಕಟ್ಟೆಯನ್ನು ಕಂಡುಕೊಳ್ಳಬೇಕು. ಹೆಚ್ಚಿನ ಲಾಭವನ್ನು ಗಳಿಸಿಕೊಳ್ಳಬೇಕು ಇದಕ್ಕೆ ನೀರು ಬಳಕೆದಾರರ ಸಹಕಾರ ಸಂಘಗಳು ಹೊಸ ಚಿಂತನೆಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೃಷಿಯಲ್ಲಿ ವಿವಿಧ ರೀತಿಯಲ್ಲಿ ಅಭಿವೃದ್ಧಿಗಳನ್ನು ಸಾಧಿಸಿ ಆರ್ಥಿಕವಾಗಿ ಸಬಲರಾಗಿ ಮುನ್ನಡೆಯಬೇಕು ಎಂದು ತಿಳಿಸಿದರು.

ಕಾಡಾ ಪ್ರಾಧಿಕಾರದ ಕಾಮಗಾರಿಗಳ ಮತ್ತು ತರಬೇತಿ ಹಾಗೂ ಸಾಧಿಸಿದ ಪ್ರಗತಿ ಯಂತ್ರೋಪಕರಣಗಳ ವಿತರಣೆ ಮತ್ತಿತರ ಕಾರ್ಯ ಚಟುವಟಿಕೆಗಳ ಕುರಿತು ಭೂ ಅಭಿವೃದ್ಧಿ ಅಧಿಕಾರಿಗಳು ಕೆ, ಪ್ರಶಾಂತ್ (ತಾಂತ್ರಿಕ),(ಕೃಷಿ)(ಪ್ರ) ರವರು ಮತ್ತು ಡಾ.ನಾಗೇಶ್ ಎಸ್ ಡೋಂಗರೆ , ಭೂ ಅಭಿವೃದ್ಧಿ ಅಧಿಕಾರಿ ( ಸಹಕಾರ ) ಇವರುಗಳು ವಿವರಿಸಿದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ತಾಂತ್ರಿಕ ಕೃಷಿ ಮತ್ತು ಸಹಕಾರ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *