ಮಂಜುನಾಥ್ ಶೆಟ್ಟಿ…
ಶ್ರೀ ಸಿದ್ಧಿ ವಿನಾಯಕ ಕ್ರೀಡಾ ಸಾಂಸ್ಕೃತಿಕ ಸಂಘ ಮತ್ತು ಚಂದನ ಪಾರ್ಕ್ ಗೆಳೆಯರ ಬಳಗ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಪರಿಸರ ಉಳಿಸುವಲ್ಲಿ ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳ ಸಹಕರಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಜಿ.ಡಿ. ಮಂಜುನಾಥ್ ಹೇಳಿದರು ಅವರು ಶಾಂತವೇರಿ ಗೋಪಾಲಗೌಡ ಬಡಾವಣೆಯ ಕ್ರೀಡಾ ಭವನದಲ್ಲಿ ಅಲ್ಲಿನ ಡಿ ಬ್ಲಾಕ್ ನಿವಾಸಿಗಳು, ಶ್ರೀ ಸಿದ್ಧಿ ವಿನಾಯಕ ಕ್ರೀಡಾ ಸಾಂಸ್ಕೃತಿಕ ಸಂಘ, ಚಂದನ ಪಾರ್ಕಿನ ಗೆಳೆಯರ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.
ಇಂದು ಪರಿಸರ ಕಲುಷಿತವಾಗುತ್ತಿದೆ ಮನುಷ್ಯನ ದಬ್ಬಾಳಿಕೆ ಹೆಚ್ಚಾಗುತ್ತದೆ, ಮನುಷ್ಯ ಮಾಡಿದ ತಪ್ಪನ್ನು ಮನುಷ್ಯನೇ ಸರಿಪಡಿಸಿಕೊಳ್ಳಬೇಕು ಎಲ್ಲರೂ ಸೇರಿ ಪರಿಸರ ಉಳಿಸೋಣ ಇರುವುದೊಂದೇ ಭೂಮಿಯನ್ನ ರಕ್ಷಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮೆಸ್ಕಾಂ ಸಲಹಾ ಸಮಿತಿ ಸಮಿತಿ ಸದಸ್ಯ ಆರ್.
ರಾಜಶೇಖರ್ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ,ಗೀತೇಂದ್ರ ಗೌಡ್ರು, ಗುರುರಾಜ್ ಎಲ್,
ಜಿ.ಎಸ್ ಶಿವಕುಮಾರ್, ಅಶೋಕ್, ಬೋರೇಗೌಡರು, ರವಿ, ಬಸವರಾಜ್, ರಂಗಣ್ಣ, ಮಲ್ಲಿಕಾರ್ಜುನ, ರವಿಕುಮಾರ್ , ವಿಜಯ್ ಕುಮಾರ್, ಸೇರಿದಂತೆ ಹಲವರಿದ್ದರು.