ಮಂಜುನಾಥ್ ಶೆಟ್ಟಿ…

ಬೆಂಗಳೂರುನ ಅಂಬೇಡ್ಕರ್ ಸ್ಟೇಡಿಯಂನಲ್ಲಿ ಕರ್ನಾಟಕ ಪೆಂಕಾಕ್ ಸಿಲಾಟ್ ಅಸೋಸಿಯೇಷನ್, ಹಾಗೂ ದೊಡ್ಡವಾಡ ಸ್ಪೋರ್ಟ್ಸ್ ಫೌಂಡೇಶನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡಿದ್ದ 12 ನೆಯ ಕರ್ನಾಟಕ ರಾಜ್ಯ ಪೆಂಕಾಕ್ ಸಿಲಾಟ್ ಕ್ರೀಡಾ ಕೂಟ 2026 ರಲ್ಲಿ ಮಕ್ಕಳ ವಿಭಾಗವಾದ 6 ವರ್ಷ ಮೇಲ್ಪಟ್ಟ 9 ವರ್ಷ್ದೊಳಗಿನ ಬಾಲಕಿಯರ ವಿಭಾಗದಲ್ಲಿ ಶ್ರೀ ಗೌರೀಶ ಭಾರ್ಗವ ಮತ್ತು ಮಾಧುರಿ ಇವರ ಪುತ್ರಿ ಕು.ತ್ರಿಶಿಕಾ. ಜಿ. ಭಾರ್ಗವ್ ಚಿನ್ನದ ಪದಕವನ್ನು ಪಡೆದು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿರುತ್ತಾಳೆ.

ಇವಳು ಶಿವಮೊಗ್ಗ ಜಿಲ್ಲಾ ಪೆಂಕಾಕ್ ಸಿಲಾಟ್ ಸ್ಪೋರ್ಟ್ಸ್ ಅಸೋಸಿಯೇಷನ್ (ರಿ ) ಶ್ರೀ. ಚಂದ್ರಕಾಂತ G ಭಟ್ ಇವರಲ್ಲಿ ತರಬೇತಿ ಪಡೆಯುತ್ತಿದ್ಧು , ಈ ಸಾಧನೆಗೆ ಸಂಸ್ಥೆಯು ಅಭಿನಂದಿಸಿದರು.

Leave a Reply

Your email address will not be published. Required fields are marked *