ಮಂಜುನಾಥ ಶೆಟ್ಟಿ…
ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಎಸ್ಐಆರ್ ಪ್ರಕ್ರಿಯೆ ನಡೆಸಲು ದಿನಗಳನ್ನು ಪರಿಷ್ಕರಣೆ ಮಾಡುವುದರ ಮತ್ತು ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಸರ್ಕಾರದ ವತಿಯಿಂದ ನಡೆಯುತ್ತಿರುವ ಎಸ್ಐಆರ್ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ದಿನಗಳನ್ನು ಹೆಚ್ಚಿಸಬೇಕೆಂದು ಕರವೇ ಸಿಂಹ ಸೇನೆ ಸಂಘಟನೆಯು ಮತ್ತು ಸಾರ್ವಜನಿಕರ ಪರವಾಗಿ ಒತ್ತಾಯಿಸ್ತಿದ್ದೇವೆ ಎಂದರು.ಕೇವಲ ಒಂದು ತಿಂಗಳ ಕಾಲದಲ್ಲಿ ಸಮರ್ಪಕವಾಗಿ ಮತದಾರರಿಗೆ ಫಾರಂ ಹಂಚುವುದು ಮತ್ತು ಅವರಿಂದ ಫಾರಂ ಹಿಂಪಡೆಯುವುದು ಕಷ್ಟ.ಇದು ಬಹಳ ಕಡಿಮೆ ಸಮಯದಲ್ಲಿ ಆಗುತ್ತಿರುವ ಕೆಲಸವೆಂದು ಸಾರ್ವಜನಿಕ ವಲಯ ಮತ್ತು ಸಂಘಟನೆಯ ಅಭಿಪ್ರಾಯವಾಗಿರುತ್ತದೆ.
ತರಾತುರಿಯಲ್ಲಿ ಮಾಡುವ ಬದಲಾಗಿ ಇದರಿಂದ ಅಧಿಕಾರಿ ವರ್ಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅದರಲ್ಲೂ ಬಿ ಎಲ್ ಓ ಗಳಿಗೆ ಒತ್ತಡ ಹೆಚ್ಚಾಗುತ್ತಿದ್ದು ನಿನ್ನೆಯ ದಿವಸ ತುಮಕೂರಿನಲ್ಲಿ ಒಬ್ಬ ಗ್ರಾಮ ಆಡಳಿತ ಅಧಿಕಾರಿ ಭವನ ಆರ್ ಅವರ ಮರಣವಾಗಿರುವುದು ಮಾಧ್ಯಮಗಳ ಮುಖಾಂತರ ತಮಗೆ ತಿಳಿದಿರುವಂತಹ ವಿಚಾರವೆಂದು ತಿಳಿಸಿದರು. ಆದ್ದರಿಂದ ತಮ್ಮ ಕೆಳಮಟ್ಟದ ಅಧಿಕಾರಿಗಳಿಗೆ ಒತ್ತಡ ರಹಿತವಾಗಿ ಕಾರ್ಯನಿರ್ವಹಿಸಲು ಬಿಎಲ್ಓಗಳಿಗೆ ಸಹಕಾರಿಯಾಗುವಂತೆ ಮತ್ತು ಸಾರ್ವಜನಿಕರಿಗೂ ಸಹಕಾರಿಯಾಗುವಂತೆ ಈ ಒಂದು ಪ್ರಕ್ರಿಯೆಯನ್ನು ಸಮಾಧಾನದ ರೀತಿಯಲ್ಲಿ ನಡೆಸಲು ಅನುಕೂಲವಾಗುವಂತೆ ದಿನಗಳನ್ನು ಪರಿಷ್ತರಣೆ ಮಾಡಬೇಕಾಗಿ ವಿನಂತಿಸುತ್ತೇವೆ ಎಂದರು.
ತರಾತುರಿಯ ಈ ಒಂದು ಕೆಲಸದಲ್ಲಿ ನಿಜವಾದ ಫಲಾನುಭವಿಗಳು ಬಹಳಷ್ಟು ಜನರ ಮತ ಪಟ್ಟಿಯಿಂದ ಕೈಬಿಡುವ ಸಾಧ್ಯತೆಗಳಿದ್ದು ಈ ತರಾತುರಿಯ ಕೆಲಸದಲ್ಲಿ ರಾಜ್ಯದ ಬಹಳಷ್ಟು ಮಂದಿ ಅನಕ್ಷರಸ್ಥರು ರೈತರು ಮಹಿಳೆಯರು ವೃದ್ಧರು ಮತ್ತು ನಗರವಾಸಿಗಳನ್ನು ಸಹ ಈ ಫಾರಂ ಫಿಲಪ್ ಮಾಡುವುದರ ಬಗ್ಗೆ ಗೊಂದಲಗಳಿವೆ ಇದೆ ಎಂದರು.
ಮನವಿ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರು ರವಿಪ್ರಸಾದ್ ಎಂ., ಜಿಲ್ಲಾಧ್ಯಕ್ಷರು ಮಧುಸೂದನ್ ಎಸ್ ಎಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಜಿತ್ ನವಲೆ, ಜಿಲ್ಲಾ ವತ್ತಾರರು ಭರತ್ ಎಸ್, ಜಿಲ್ಲಾ ಕಾರ್ಯದರ್ಶಿ ಶಿವು ಮುಖಂಡರಾದ ನೂರುಲ್ಲಾ ಠಾಣಸೂರಿ ಮಂಜು ,ಅಶೋಕ, ಲಿಂಗಣ್ಣ ಪ್ರಧುಮ್ನ ಮತ್ತಿತರರು ಪಾಲ್ಗೊಂಡಿದ್ದರು.