ಮಂಜುನಾಥ ಶೆಟ್ಟಿ…

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಘಟಕದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಹಿರಿಯ ಪತ್ರಕರ್ತರಿಗೆ ಸನ್ಮಾನ ಪ್ರತಿಭಾ ಪುರಸ್ಕಾರ ವಿವಿಧ ಕಾರ್ಯಕ್ರಮಗಳನ್ನು ಸಂಸದ ಬಿ ವೈ ರಾಘವೇಂದ್ರ ಉದ್ಘಾಟಿಸಿದರು.
ಸಂಸದ ಬಿ ವೈ ರಾಘವೇಂದ್ರ…
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ವ್ಯವಸ್ಥೆಗೆ ಮತ್ತು ಕಟ್ಟಕಡೆಯ ವ್ಯಕ್ತಿಗೆ ತಲುಪುವ ವ್ಯವಸ್ಥೆ. ಪತ್ರಿಕೆಯ ಲೇಖನಿಗಳನ್ನು ಓದಿದ ತೃಪ್ತಿ ಆನ್ ಲೈನ್ ನಲ್ಲಿ ಸಿಗುವುದಿಲ್ಲ. ಹಾಗಾಗಿ ಮಕ್ಕಳು ಪುಸ್ತಕವನ್ನು ಓದಬೇಕು. ಪತ್ರಿಕೋದ್ಯಮ ಕೇವಲ ಒಂದು ವೃತ್ತಿಯಲ್ಲ. ಅತ್ಯಂತಾಹತ್ವದ ಪ್ರಜಾಪ್ರಭುತ್ವದ ಜವಾಬ್ದಾರಿ. ತಪ್ಪುಗಳನ್ನು ತಿದ್ದಿಕೊಂಡು ಸರಿಪಡಿಸಿಕೊಂಡು ಹೋಗುವುದು ಪತ್ರಿಕಾರಂಗಕ್ಕೆ ನೀಡುವ ಗೌರವ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಯಡಿಯೂರಪ್ಪ ಅವರು ಮಾಡಿದ್ದಾರೆ. ಪತ್ರಕರ್ತರ ಶ್ರಮಕ್ಕೆ ಗೌರವಕೊಟ್ಟು ಮಾತನಾಡಿಸಿಕೊಂಡು ಹೋಗುವುದನ್ನು ಸಹ ನಾನು ನೋಡಿದ್ದೇನೆ.

ಶಿವಾನಂದ್ ತಗಡೂರು…
ಮಾತನಾಡಿ ಪತ್ರಿಕಾ ದಿನಾಚರಣೆ ಎಂದರೆ ನಮ್ಮದೇ ಹಬ್ಬ ನಮ್ಮದೇ ದಿನ. ಇನ್ನಷ್ಟು ಅರ್ಥ ಪೂರ್ಣವಾಗಲು ರಕ್ತದಾನ ಶಿಬಿರ ಪ್ರಮುಖ ಕಾರಣವಾಗಿದೆ. ನಮ್ಮ ವೃತ್ತಿ ಬಾಂಧವರು ಅವರವರ ಪ್ರತಿಭೆಗೆ ತಕ್ಕ ಹಾಗೆ ಸಾಧನೆ ಮಾಡಿದ್ದಾರೆ. ಅವರೆಲ್ಲರಿಗೂ ಗೌರವಾರ್ಪಣೆಗಳು. ಗುಮಾಸ್ತರು ಮಾಡುವ ಕೆಲವನ್ನು ಒಬ್ಬ ಎಂಪಿ ಆಗಿ ಮಾಡುತ್ತಿದ್ದಾರೆ. ಮಾಜಿ ಸಿಎಂ ಮಗ ಎಂಬುದನ್ನು ಸಹ ಪಕ್ಕಕ್ಕಿಟ್ಟು ಅತ್ಯಂತ ಸರಳತನದಿಂದ ಕೆಲಸ ಮಾಡುತ್ತಿದ್ದಾರೆ. ಸಂಘಕ್ಕೆ ಒಂದು ಸೈದ್ಧಾಂತಿಕ ನೆಲೆಯನ್ನು ಕಟ್ಟಿದ್ದಾರೆ.
ನಮ್ಮ ಆಸಕ್ತಿಗೆ ಬೇಕೋ ಬೇಡವೋ ಈ ವೃತ್ತಿಗೆ ಬಂದಿದ್ದೇವೆ. ಹಾಗಾಗಿ ಈ ವೃತ್ತಿಗೆ ಬಂದ ಮೇಲೆ ಆ ಘನತೆಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಇದೆ. ಇದನ್ನೂ ಉಳಿಸಿಕೊಂಡು ಹೋಗುವ ಕೆಲಸವನ್ನು ನಾವು ನೀವು ಎಲ್ಲರೂ ಮುಂದಿನ ಪೀಳಿಗೆಗೂ ಆ ಆದೇಶವನ್ನು ಉಳಿಸಿಕೊಂಡು ಹೋಗುವುದು ಮುಖ್ಯವಾಗಿದೆ.

ಪರಾಕಾಷ್ಠೆ ಇದೆ ನೈಜ ಪತ್ರಕರ್ತರು ಅದನ್ನು ಉಳಿಸಿಕೊಂಡು ಹೋಗುವುದು ದೊಡ್ಡ ಸವಾಲು ಇದೆ. ಇವತ್ತಿಗೂ ಕೂಡ ಹಿಂದಿನ ಅನೇಕರು ಕಟ್ಟಿಕೊಂಡು ಬಂದಿರುವ ಪರಂಪರೆಯನ್ನು ನಾವು ಕಟ್ಟಿ ಅದಕ್ಕೆ ಲೋಪ ಆಗದ ರೀತಿಯಲ್ಲಿ ಮುಂದುವರೆಸುವ ಅಗತ್ಯವಿದೆ. ನಮ್ಮ ಹೃದಯಕ್ಕೆ ಸರಿಯಾದ ರೀತಿಯಲ್ಲಿ ಸತ್ಯಕ್ಕೆ ಹತ್ತಿರವಾದ ರೀತಿಯಲ್ಲಿ ಸುದ್ದಿ ಮಾಡಿದರೆ ನಿಜಕ್ಕೂ ಈ ವೃತ್ತಿಯಲ್ಲಿ ಇದ್ದು ಸಾರ್ಥಕವಾಗುತ್ತದೆ.
ನೊಂದವರ ಕಣ್ಣೀರು ಹೊರೆಸುವಲ್ಲಿ, ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ ಎಂದರೆ ಆ ವೃತ್ತಿಯಲ್ಲಿ ಇದ್ದೂ ಸಹ ವ್ಯರ್ಥವಾಗುತ್ತದೆ. ಸ್ವಾತಂತ್ರ್ಯದ ಪೂರ್ವದಲ್ಲಿ ಇದ್ದ ಪತ್ರಿಕೋದ್ಯಮವೇ ಬೇರೆ, ನಂತರದ ಪತ್ರಿಕೋದ್ಯಮವೇ ಬೇರೆ. 80ರ ದಶಕದಲ್ಲಿ ಬಂದ ಪತ್ರಕರ್ತರ ಸಿದ್ಧಾಂತಿಕತೆ ಬೇರೆ. ಅದನ್ನು ಹಾಗೆಯೇ ಮುಂದುವರೆಸಿಕೊಂಡು ಒಳ್ಳೆಯ ರೀತಿಯಲ್ಲಿ ಸತ್ಯದ ದಾರಿಯಲ್ಲಿ ಮುಂದುವರೆಸಬೇಕು.
ಸಮಾಜದ ವ್ಯವಸ್ಥೆಗೆ ಮತ್ತು ಕಟ್ಟಕಡೆಯ ವ್ಯಕ್ತಿಗೆ ತಲುಪುವ ವ್ಯವಸ್ಥೆ. ಪತ್ರಿಕೆಯ ಲೇಖನಿಗಳನ್ನು ಓದಿದ ತೃಪ್ತಿ ಆನ್ ಲೈನ್ ನಲ್ಲಿ ಸಿಗುವುದಿಲ್ಲ. ಹಾಗಾಗಿ ಮಕ್ಕಳು ಪುಸ್ತಕವನ್ನು ಓದಬೇಕು. ಪತ್ರಿಕೋದ್ಯಮ ಕೇವಲ ಒಂದು ವೃತ್ತಿಯಲ್ಲ. ಅತ್ಯಂತಾಹತ್ವದ ಪ್ರಜಾಪ್ರಭುತ್ವದ ಜವಾಬ್ದಾರಿ. ತಪ್ಪುಗಳನ್ನು ತಿದ್ದಿಕೊಂಡು ಸರಿಪಡಿಸಿಕೊಂಡು ಹೋಗುವುದು ಪತ್ರಿಕಾರಂಗಕ್ಕೆ ನೀಡುವ ಗೌರವ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಯಡಿಯೂರಪ್ಪ ಅವರು ಮಾಡಿದ್ದಾರೆ. ಪತ್ರಕರ್ತರ ಶ್ರಮಕ್ಕೆ ಗೌರವಕೊಟ್ಟು ಮಾತನಾಡಿಸಿಕೊಂಡು ಹೋಗುವುದನ್ನು ಸಹ ನಾನು ನೋಡಿದ್ದೇನೆ.

ಮದನ್…
ಕೆ ಯು ಡಬ್ಲ್ಯೂ ಜೆ ಇತಿಹಾಸ ಬಹಳ ದೊಡ್ಡದು. ಶಿವಮೊಗ್ಗ ಜಿಲ್ಲಾ ಘಟಕ ಅತ್ಯಂತ ಕಾರ್ಯಕ್ಷಣೆಯಾಗಿ ಕಾರ್ಯ ನಿರ್ವಹಿಸಿ ರಾಜ್ಯಕ್ಕೆ ಮಾದರಿಯಾಗಿದೆ.
ಕೆ.ವಿ.ಶಿವಕುಮಾರ್…
ಈ ಸಂದರ್ಭದಲ್ಲಿ ಪತ್ರಿಕಾ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ತಾಲೂಕುವಾರು ಮಾಡಿದ್ದೇವೆ. ಆತ್ಮಾವಲೋಕನ ಬಹಳ ಮುಖ್ಯ. ವೃತ್ತಿ ಧರ್ಮವನ್ನು ಮರೆಯಬಾರದು. ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಮೇಲಿನವರೆಗೆ ಕೊಂಡಿಯಾಗಿ ಕೆಲಸ ನಿರ್ವಹಿಸಬೇಕು. ಇದನ್ನು ನಮ್ಮ ಮುಂದಿನ ಪೀಳಿಗೆವರೆಗೂ ಮುಂದುವರೆಸಿಕೊಂಡು ಹೋಗಲು ವೃತ್ತಿ ಬದ್ಧತೆಯನ್ನು ಕಾಪಾಡಬೇಕು. ಆ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಂಡು ಮುಂದೆ ಹೋಗಣ.
ಚೇತನ್ ಕುಮಾರ್…
ರಾಜ್ಯಕ್ಕೆ ನಾಲ್ಕು ಜನ ಮುಖ್ಯಮಂತ್ರಿಗಳನ್ನು ನೀಡಿದೆ. ಇದಕ್ಕೆ ಕಾರಣ ಇದರ ಹಿಂದಿರುವ ಹಿಂದಿನ ಪತ್ರಕರ್ತರು. ಪತ್ರಕರ್ತರ ಸಹಕಾರ ಖಂಡಿತ ನಮ್ಮ ಯುವಕರಿಗಿದೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳು ಹೆಚ್ಚು ಆಕ್ಟಿವ್ ಆಗಿವೆ. ಎಲ್ಲ ಪತ್ರಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಎಲ್ಲ ಅಭಿವೃದ್ಧಿ ಹಿಂದೆ ಪತ್ರಕರ್ತರ ಸಹಕಾರ ಇದೆ.
ವೈದ್ಯನಾಥ್…
ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಮಾಡಬೇಕು ಎಂಬ ನಿಟ್ಟಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವೆ. ಆ ನಿಟ್ಟಿನಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿಯೂ ಹೀಗೆ ಸಹಕರಿಸಿ.