ಮಂಜುನಾಥ ಶೆಟ್ಟಿ…
ಎಂಎಡಿಬಿ ಅಧ್ಯಕ್ಷರು ಮಂಜುನಾಥ್ ಗೌಡರು ಮತ್ತು ಸಮಾಜ ಸೇವಕ ಕುರುವಳ್ಳಿ ನಾಗರಾಜ್ ಗುಡ್ಡ ಕುಸಿತ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗಾಂಧಿನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಗುಡ್ಡ ಕುಸಿತ ದುರಂತದಲ್ಲಿ ಮೂರು ಮಂದಿ ಕಾರ್ಮಿಕರು ಬುದ್ಧಪಟ್ಟಿದ್ದು ವೀಣಾ ರಮೇಶ್ ಗೌಡ ದಂಪತಿಗಳ ಮನೆ ಸಂಪೂರ್ಣ ನಾಶವಾಗಿದೆ.
ಮನೆ ಕಳೆದುಕೊಂಡ ಕುಟುಂಬವು ತಾತ್ಕಾಲಿಕವಾಗಿ ಅಕ್ಕಪಕ್ಕದ ಮನೆಯಲ್ಲಿ ಆಶ್ರಯ ಪಡೆದು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ.
ಈ ಕುಟುಂಬದ ದುಸ್ಥಿತಿಯನ್ನು ಅರಿತು ಜಯ ಕರ್ನಾಟಕ ಸಂಘಟನೆ ತೀರ್ಥಹಳ್ಳಿ ತಾಲೂಕ ಅಧ್ಯಕ್ಷರಾದ ಕುರುಬಳ್ಳಿ ನಾಗರಾಜ್ ಪಟ್ಟಣ ಪಂಚಾಯಿತಿ ತಾಲೂಕು ಆಡಳಿತದಿಂದ ಶಾಶ್ವತ ವ್ಯವಸ್ಥೆ ಆಗುವವರಿಗೆ ತಮ್ಮ ಗುರುಗಳಿಗೆ ಸ್ವಂತ ಮನೆಯನ್ನು ತಾತ್ಕಾಲಿಕ ವ್ಯವಸ್ಥೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಕಾರ್ಯಕ್ಕೆ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತರು ಹಾಗೂ ಕನಕಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧುಸೂದನ್ ಅವರ ನೆರವು ದೊರೆತಿದ್ದು ಜೊತೆಗೆ ತಾಯಿಮನೆ ಸುದರ್ಶನ್ ಎಂ ಶ್ರೀಕಾಂತ್ ಅವರ ಸಂಬಂಧಿ ರಾಕೇಶ್ ಹಾಗೂ ಕುರುವಳ್ಳಿ ನಾಗರಾಜ್ ಅವರ ಅಪಾರ ಸ್ನೇಹಿತರ ಬಳಗದ ಸಹಾಯದಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕುಟುಂಬಕ್ಕೆ ವಿತರಿಸಿದರು.
ಈ ಸಮಾಜಮುಖಿ ಕೆಲಸದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ಶೆಟ್ಟಿ ಅಂಜನ್ ಹೆಗಡೆ ಸುಂದರೇಶ್ ಅರ್ಜುನ್ ಗೌಡ ಹರೀಶ್ ಶೆಟ್ಟಿ ಕವಿರಾಜ್ ಸನತ್ ಗೌಡ ಶ್ರೀಕಾಂತ್ ಸಚಿನ್ ಶೆಟ್ಟಿ ರಂಜಿತ್ ಅರವಿಂದ್ ಮುಂತಾದವರು ಉಪಸ್ಥಿತರಿದ್ದರು.