ಮಂಜುನಾಥ ಶೆಟ್ಟಿ…
ಹರೋಹರ ಜಾತ್ರೆಯ ಅಂಗವಾಗಿ ಗುಡ್ಡೆ ಕಲ್ಲಿನ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ನಡೆಯಿತು. ಭಕ್ತರು ಹರೋಹರ ಹರೋಹರ ಎಂದು ದೇವರ ನಾಮಸ್ಮರಣೆ ಮಾಡುತ್ತಾ ಗುಂಪು ಗುಂಪಾಗಿ ದೂರದ ಊರುಗಳಿಂದ ಪಾದಯಾತ್ರೆಯಲ್ಲಿ ದೇವಸ್ಥಾನಕ್ಕೆ ಬಂದು ಹರಿಕೆ ತೀರಿಸಿದರು.
ಕೆನ್ನೆ ನಾಲಿಗೆಯನ್ನು ಛೇದಿಸಿದ ತ್ರಿಶೂಲ ಹೊತ್ತವರು, ಬೆನ್ನಿಗೆ ಕಬ್ಬಿಣದ ಕೊಂಡಿ ಚುಚ್ಚಿಕೊಂಡು ತೇರು ಎಳೆಯುವವರು, ನಿಂಬೆಹಣ್ಣನ್ನು ದಾರದಿಂದ ಪೋಣಿಸಿ ಅದನ್ನು ಸೂಜಿ ಮೂಲಕ ಚರ್ಮಕ್ಕೆ ಚುಚ್ಚಿ ಕೊಂಡವರು, ಭುಜದ ಮೇಲೆ ಕಾವಡಿ ಹೊತ್ತು ಮೇಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಹರೋಹರ ಎಂದು ಬಾಲ ಸುಬ್ರಹ್ಮಣ್ಯನ ನಾಮ ಸ್ಮರಣೆ ಮಾಡುತ್ತ ಪಾದಯಾತ್ರೆಯಲ್ಲಿ ಸಾಲು ಸಾಲಾಗಿ ಬಂದರು.
ಆಷಾಢ ಮಾಸದ ಆಡಿಕೃತಿಕೆ ಅಂಗವಾಗಿ ಹಳದಿ ಉಡುಪು, ವಸ್ತ್ರಗಳನ್ನು ತೊಟ್ಟ ಭಕ್ತರು ಹರೋಹರ ಹರೋಹರ ಎಂದು ದೇವರ ನಾಮಸ್ಮರಣೆ ಮಾಡುತ್ತಾ ಗುಂಪುಗುಂಪಾಗಿ ದೂರದ ಊರುಗಳಿಂದ ಪಾದಯಾತ್ರೆಯಲ್ಲಿ ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿದರು. ಆಡಿಕೃತಿಕೆ ಜಾತ್ರೆಯಲ್ಲಿ ಕಾವಡಿ ಹೊತ್ತು ಬರುವ ಭಕ್ತರು ಜನಾಕರ್ಷಣೆಗೆ ಒಳಗಾಗಿದ್ದರು. ಜಾತ್ರೆಗೆ ಲಕ್ಷಾಂತರ ಜನಸೇರಿದರೆ ಅವರಲ್ಲಿ ನವಿಲು ಕಾವಡಿ, ಅರಮನೆ ಕಾವಡಿ, ಎಳನೀರುಕಾವಡಿ, ಜೇನುತುಪ್ಪ ಕಾವಡಿ, ಹಾಲು ಕಾವಡಿ ಮತ್ತು ಕಾವಡಿ ಹೊತ್ತು ಬರುವವರೆ ಸಾವಿರಾರು ಮಂದಿ ಇದ್ದರು.
ಇನ್ನು ಕೆಲವರು ದೇಹ ದಂಡಿಸುವಂತಹ, ನೋವು ಉಂಟು ಮಾಡುವಂತಹ ಹರಕೆಗಳಲ್ಲಿ ನಾಲಗೆಗೆ ಬೆಳ್ಳಿ ಅಥವಾ ಕಬ್ಬಿಣದ ತ್ರಿಶೂಲ, ಕೆನ್ನೆಗೆ 3ರಿಂದ 15 ಅಡಿ ಉದ್ದದ, ರಿಂದ 15 ಕೆ.ಜಿತೂಕದ ಕಬ್ಬಿಣದ ತ್ರಿಶೂಲ ಚುಚ್ಚಿಕೊಂಡವರು, ಶ್ರೀ ಬಾಲಸುಬ್ರಹ್ಮಣ್ಯ ದೇವರನು ಹೊತ್ತ ಸಣ್ಣ ತೇರನ್ನು ಬೆನ್ನಿನ ಚರ್ಮಕ್ಕೆ ಕಬ್ಬಿಣದ ಕೊಂಡಿ ಚುಚ್ಚಿಕೊಂಡವರು, ನಿಂಬೆಹಣ್ಣನ್ನು ಸೂಜಿಯಿಂದ ಚರ್ಮಕ್ಕೆ ಪೋಣಿಸಿಕೊಂಡವರೂ ಇದ್ದರು. ಕಾವಡಿ ಹೊತ್ತು ಹರಕೆ ತೀರಿಸಿದವರಲ್ಲಿ ಚಿಕ್ಕ ಮಕ್ಕಳಿಂದ ವಯೋವೃದ್ಧರೂ ಇದ್ದರು.
ಭಕ್ತರ ಭಕ್ತಿಯ ಪರಾಕಾ ನೋಡಿದವರಿಗೆ ಮೈ ಜುಂ ಎನ್ನು ವಂತಿತ್ತು. ನಿಜವಾಗಲೂ ಇದು ಸಾಧ್ಯವಾ? ಸಣ್ಣ ಮುಳ್ಳು ಚುಚ್ಚಿದರೂ ನೋವಿನಿಂದ ನರಳುವ ಮನು? ದೇಹದ ಚರ್ಮವನ್ನೇ ಛೇದಿಸಿ ಅದರಲ್ಲಿ ಅತಿಭಾರವನ್ನು ಹೇಗೆ ಹೊರುತ್ತಾನೆ, ಹೇಗೆ ಎಳೆಯುತ್ತಾನೆ ಎಂದು ನೋಡುಗರ ಮನಸ್ಸಿನಲ್ಲಿ ಮೂಡಿಸುತ್ತಿತ್ತು.
ಭದ್ರಾವತಿ, ಹೊಳೆಹೊನ್ನೂರು, ಚನ್ನಗಿರಿ, ಹೊನ್ನಾಳಿ, ತರೀಕೆರೆ, ಲಕ್ಕವಳ್ಳಿ ಮುಂತಾದೆಡೆಗಳಿಂದ ಭಕ್ತರು ಬೆಳಗ್ಗೆಯಿಂದ ರಾತ್ರಿವರೆಗೆ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಆಗಾಗ್ಗೆ ಜೋರಾಗಿ ಸುರಿದ ಮಳೆ ಸಹ ಭಕ್ತರ ಭಕ್ತಿಯ ಪರಾಕಾ? ಮುಂದೆ ಸೋತಿತು. ಸುರಿವ ಮಳೆ ನಡುವೆಯೂ ಭಕ್ತ ಸಾಗರ ಹರಿದು ಬಂತು. ಹರಕೆ ಹೊತ್ತವರು ಪಾದಯಾತ್ರೆಯಲ್ಲಿ ಬಂದರೆ, ಕೆಲವರು ದ್ವಿಚಕ್ರವಾಹನ, ಕಾರು, ಟ್ರ್ಯಾಕ್ಟರ್, ಬಸ್‌ಗಳಲ್ಲಿ ಬಂದರು. ಜಾತ್ರೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿತ್ತು.