ಮಂಜುನಾಥ ಶೆಟ್ಟಿ…
ಯುವ ಕಾಂಗ್ರೆಸ್ನ ಸಂಸ್ಥಾಪನ ದಿನ ಅಂಗವಾಗಿ ಶಿವಮೊಗ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.ಈ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.
ಪ್ರಸನ್ನಕುಮಾರ್ ಯುವ ಕಾಂಗ್ರೆಸ್ ಇದು ಕೇವಲ ಒಂದು ಸಂಘಟನೆಯ ಸಂಸ್ಥಾಪಕ ದಿನವಲ್ಲ.ಇದು ದೇಶದ ಯುವಕರ ಧ್ವನಿಗೆ ರಾಜಕೀಯ ವೇದಿಕೆ ದೊರೆತ ದಿನ.ಇದು ಯುವಕರ ಕನಸು, ಹೋರಾಟ, ಶಕ್ತಿ ಮತ್ತು ನಾಯಕತ್ವಕ್ಕೆ ದಿಕ್ಕು ತೋರಿದ ದಿನ ಎಂದರು.
ಯುವ ಕಾಂಗ್ರೆಸ್ ಎಂದರೆ ಕೇವಲ ಒಂದು ಸಂಘಟನೆಯ ಹೆಸರು ಅಲ್ಲ.ಯುವ ಕಾಂಗ್ರೆಸ್ ಎಂದರೆ ಹೋರಾಟ.ಯುವ ಕಾಂಗ್ರೆಸ್ ಎಂದರೆ ಸೇವೆ.ಯುವ ಕಾಂಗ್ರೆಸ್ ಎಂದರೆ ಸಾಮಾಜಿಕ ನ್ಯಾಯ.ಯುವ ಕಾಂಗ್ರೆಸ್ ಎಂದರೆ ದೇಶದ ಭವಿಷ್ಯವನ್ನು ಕಟ್ಟುವ ಯುವ ಶಕ್ತಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು N ರಮೇಶ್ ಮಾತನಾಡಿ
ನಮ್ಮ ದೇಶದ ಇತಿಹಾಸವನ್ನು ನೋಡಿದಾಗ, ಅನೇಕ ಮಹತ್ವದ ಬದಲಾವಣೆಗಳ ಹಿಂದೆ ಯುವಕರ ಶಕ್ತಿ ಇದೆ. ವಿದ್ಯಾರ್ಥಿಗಳು, ಯುವಕರು ಮತ್ತು ಸಾಮಾನ್ಯ ಕಾರ್ಯಕರ್ತರು ಬೀದಿಗಿಳಿದು ಹೋರಾಡಿದಾಗಲೇ ಅನೇಕ ಹಕ್ಕುಗಳು ಜನರಿಗೆ ದೊರೆತಿವೆ ಎಂದು ತಿಳಿಸಿದರು.
ಈ ಸಂಸ್ಥಾಪನೆಯನ್ನು ಉದ್ದೇಶಿಸಿ ಮಾತನಾಡಿದ HC ಯೋಗೇಶ್ ಇಂದು ಯುವಕರು ಎದುರಿಸುತ್ತಿರುವ ಸಮಸ್ಯೆಗಳು ಹಲವಾರು.
ಉದ್ಯೋಗದ ಕೊರತೆ, ಶಿಕ್ಷಣದ ದುಬಾರಿ ವೆಚ್ಚ, ವಿದ್ಯಾರ್ಥಿಗಳ ಸಮಸ್ಯೆಗಳು, ರೈತರ ಸಂಕಷ್ಟ, ಬೆಲೆ ಏರಿಕೆ, ಸಾಮಾಜಿಕ ಅಸಮಾನತೆ— ಇಂತಹ ಸಮಸ್ಯೆಗಳ ವಿರುದ್ಧ ಯುವ ಕಾಂಗ್ರೆಸ್ ಸದಾ ಜನರ ಪರವಾಗಿ ಧ್ವನಿ ಎತ್ತಬೇಕು.
ನಾವು ಕೇವಲ ಚುನಾವಣೆಯ ಸಮಯದಲ್ಲಿ ಕಾಣಿಸಿಕೊಳ್ಳುವ ಕಾರ್ಯಕರ್ತರಾಗಬಾರದು.ಜನರ ಕಷ್ಟದಲ್ಲಿ ಜೊತೆ ನಿಲ್ಲುವ ಕಾರ್ಯಕರ್ತರಾಗಬೇಕು.
ಒಬ್ಬ ವಿದ್ಯಾರ್ಥಿಗೆ ಸಮಸ್ಯೆ ಬಂದಾಗ ಅವನ ಜೊತೆ ನಿಲ್ಲಬೇಕು.ಒಬ್ಬ ಯುವಕನಿಗೆ ಉದ್ಯೋಗ ಸಿಗದಾಗ ಅವನ ಧ್ವನಿಯಾಗಬೇಕು.ಒಬ್ಬ ಬಡ ಕುಟುಂಬಕ್ಕೆ ಅನ್ಯಾಯವಾದಾಗ ನ್ಯಾಯಕ್ಕಾಗಿ ಹೋರಾಡಬೇಕು. ನಿಜವಾದ ಯುವ ಕಾಂಗ್ರೆಸ್ ಕಾರ್ಯಕರ್ತನ ಜವಾಬ್ದಾರಿ ಎಂದು ತಿಳಿಸಿದರು ಉದ್ದೇಶಿಸಿ ಮಾತನಾಡಿದ. ಈ ಸಭೆನ ಉದ್ದೇಶಿಸಿ ಮಾತನಾಡಿದ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ರವಿಕುಮಾರ್
ನಮ್ಮ ಸಂಘಟನೆಯ ಶಕ್ತಿ ದೊಡ್ಡ ನಾಯಕರಲ್ಲಿ ಮಾತ್ರ ಇಲ್ಲ.ನಮ್ಮ ಸಂಘಟನೆಯ ನಿಜವಾದ ಶಕ್ತಿ ಸಾಮಾನ್ಯ ಕಾರ್ಯಕರ್ತರಲ್ಲಿ ಇದೆ.
ಒಬ್ಬ ಸಾಮಾನ್ಯ ಕಾರ್ಯಕರ್ತನ ಪರಿಶ್ರಮದಿಂದಲೇ ಸಂಘಟನೆ ಬಲವಾಗುತ್ತದೆ.ಕಾರ್ಯಕರ್ತರ ಬೆವರಿನಿಂದಲೇ ಪಕ್ಷದ ಬಾವುಟ ಎತ್ತರಕ್ಕೆ ಹಾರುತ್ತದೆ.
ಆದ್ದರಿಂದ ಇಂದು ನಾವು ಒಂದು ಸಂಕಲ್ಪ ಮಾಡೋಣ—
ಯುವಕರ ಸಮಸ್ಯೆಗಳಿಗೆ ಧ್ವನಿಯಾಗೋಣ.ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಡೋಣ.ಸಾಮಾಜಿಕ ನ್ಯಾಯಕ್ಕಾಗಿ ನಿಲ್ಲೋಣ.ಸಂವಿಧಾನದ ಮೌಲ್ಯಗಳನ್ನು ರಕ್ಷಿಸೋಣ.ದ್ವೇಷದ ರಾಜಕಾರಣಕ್ಕೆ ಬದಲಾಗಿ ಸಹೋದರತ್ವದ ರಾಜಕಾರಣವನ್ನು ಬೆಳೆಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಪ್ ಕಾಮ್ಸ್ ಅಧ್ಯಕ್ಷರಾದ ವಿಜಯಕುಮಾರ್, ಯುವ ಮುಖಂಡರಾದ ಮಧುಸೂದನ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರ್ಷಿತ್, ನಗರ ಅಧ್ಯಕ್ಷ ಚರಣ್ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಪ್ರವೀಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲಗೊಪ್ಪ ಶಿವು, ಅಬ್ದುಲ್, ಧನರಾಜ್ ಹಾಗೂ ಸಾಕಷ್ಟು ಪದಾಧಿಕಾರಿಗಳು ಪಾಲ್ಗೊಂಡಿದ್ದರು.