ಮಂಜುನಾಥ ಶೆಟ್ಟಿ…

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶ್ರೀ ಎಸ್. ಮಧು ಬಂಗಾರಪ್ಪ ಅವರು ಬೆಂಗಳೂರಿನ ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 262 ಮತ್ತು 262(A) ರ ತಮ್ಮ ನೂತನ ಕಚೇರಿಯ ಕಾರ್ಯಾರಂಭವನ್ನು ಶಾಸ್ತ್ರೋಕ್ತ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿಸಿದರು.

ಈ ಶುಭ ಘಳಿಗೆಯಲ್ಲಿ ಶುಭಹಾರೈಸಿದ ಶಾಸಕ ಮಿತ್ರರಾದ ಶ್ರೀ ಭೀಮಣ್ಣ ಟಿ ನಾಯ್ಕ್, ಶ್ರೀ ಭೀಮಸೇನ ಬಿ ಚಿಮ್ಮನಕಟ್ಟಿ ಸೇರಿದಂತೆ ಪಕ್ಷದ ಹಿರಿಯರಿಗೆ, ಶಾಸಕ ಮಿತ್ರರಿಗೆ ಹಾಗೂ ವಿಶೇಷವಾಗಿ ಹಾರೈಸಿದ ಎಲ್ಲ ಹಿರಿಯ, ಕಿರಿಯ ಸಿಬ್ಬಂದಿ ವರ್ಗದವರಿಗೆ ಹಾಗೂ ಕಾರ್ಯಕರ್ತ ಬಂಧುಗಳಿಗೆ ಸಚಿವರು ಅನಂತ ಅನಂತ ಧನ್ಯವಾದಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *