ಮಂಜುನಾಥ ಶೆಟ್ಟಿ…
ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ವತಿಯಿಂದ ರಾಮಣ್ಣ ರಾಗಿಗುಡ್ಡ ಅವರ ನೇತೃತ್ವದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಗಿಗುಡ್ಡದಲ್ಲಿ ಹಮ್ಮಿಕೊಳ್ಳಲಾಯತು.
ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಬಿಳಕಿ ಇವರು ಆಗಮಿಸಿದ್ದರು.ಉದ್ದೇಶಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಬಗ್ಗೆ ಹಿತನುಡಿಗಳನ್ನು ಹೇಳಿದರು. ಹಾಗೂ ಧ್ವಜಾರೋಹಣ ಖ್ಯಾತ ಉದ್ಯಮಿಗಳು ಆದಂತಹ ಜ್ಯೋತಿಪ್ರಕಾಶ್ ಅವರು ನೆರವೇರಿಸಿದರು.ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಅಂಗವಿಕಲ ಮತ್ತು ವಿಕಲಚೇತನರಿಗೆ ವಿಶೇಷವಾದ ಕಿಟ್ ಕೊಡುವುದರ ಮುಖಾಂತರ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರಾದಂತಹ ಅನಿಲ್ ಕುಮಾರ್ ಮತ್ತು ಸಾಹಿತಿಗಳು ಪತ್ರಕರ್ತರು ಗಾರಾ, ಶ್ರೀನಿವಾಸ್,ಚಲನಚಿತ್ರ ನಟ ರಘು ಮಲ್ನಾಡ್, ಕರವೇ ಕಾವಲು ಪಡೆಯ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಎಸ್, ಬಿ,ಪ್ರಧಾನ ಕಾರ್ಯದರ್ಶಿಯಾದ ಕೆಬಿ ಉಮೇಶ್, ಉಪಾಧ್ಯಕ್ಷರಾದ ರಮೇಶಣ್ಣ ಮಲ್ಲಿಗೆನಹಳ್ಳಿ,ಪತ್ರಿಕಾ ಸಂಚಾಲಕರಾದ ಎನ್, ಮಾಲತೇಶ್, ರಾಮು, ಕರವೇ ಮಹಿಳಾ ಘಟಕದ ಅಧ್ಯಕ್ಷರಾದ ಶಾರದಾ ಶ್ರೀಧರ್ಮೂರ್ತಿ, ಉಪಾಧ್ಯಕ್ಷರಾದ ಅನ್ನಪೂರ್ಣ ಕೃಷ್ಣವೇಣಿ ಹಾಗೂ ಕರವೇ ಕಾವಲುಪಡೆಯ ಹೊಸದುರ್ಗ ಅಧ್ಯಕ್ಷರಾದ ವೀಣಾ ಮತ್ತು ಅವರ ಪದಾಧಿಕಾರಿಗಳು ಉಪಸ್ಥಿರಿದ್ದರು.